27
September, 2026

A News 365Times Venture

27
Sunday
September, 2026

A News 365Times Venture

ಸಚಿವ ಬಿ.ನಾಗೇಂದ್ರ ರಾಜೀನಾಮೆ ಪಡೆಯದೇ ಸದನ ನಡೆಯಲು ನಾವು ಬಿಡಲ್ಲ- ಛಲವಾದಿ ನಾರಾಯಣಸ್ವಾಮಿ

Date:

ಬೆಂಗಳೂರು,ಆಗಸ್ಟ್,5,2026 (www.justkannada.in): ವಾಲ್ಮೀಕಿ ನಿಗಮದ ಹಗರಣದಲ್ಲಿ ಕಳಂಕಿತರಾಗಿದ್ದ ಬಿ.ನಾಗೇಂದ್ರಗೆ ಸಚಿವ ಸ್ಥಾನ ನೀಡಲಾಗಿದೆ. ಅವರ ರಾಜೀನಾಮೆ ಪಡೆಯದೇ  ಅಧಿವೇಶನದಲ್ಲಿ ಸದನ ನಡೆಯಲು ನಾವು ಬಿಡುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕಳಂಕಿತರಿಗೆ ಹೆಚ್ಚು ಹಣ ನೀಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ವಾಲ್ಮೀಕಿ ನಿಗಮ ಹಗರಣದ ಕಳಂಕಿತರಾಗಿದ್ದ ನಾಗೇಂದ್ರಗೆ ಸ್ಥಾನ ನೀಡಲಾಗಿದೆ.  ಹಗರಣದ ಬಗ್ಗೆ ನಾಗೇಂದ್ರ  ಎಲ್ಲರ ಹೆಸರು ಹೇಳುತ್ತೇನೆ ಅಂತ ಹೇಳಿದ್ರಂತೆ.  ಹೀಗಾಗಿ ನಾಗೇಂದ್ರರನ್ನು ಸಚಿವರನ್ನಾಗಿ ಮಾಡಲಾಗಿದೆ ಎಂದರು.

ಇನ್ನೊಬ್ಬರು ನನ್ನ ಮರ್ಯಾದೆ ಪ್ರಶ್ನೆ ಅಂತಾ ಹೆಚ್ಚು ಹಣ ಕೊಟ್ಟಿದ್ದಾರಂತೆ.  ಹೆಚ್ಚು ಹಣ ನೀಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ.  ಈ ವಿಚಾರದಲ್ಲಿ ಹಿಂದೆ ನಾವು ಮಾಡಿದ್ದ ಆರೋಪ ಈಗ ಸಾಬೀತಾಗಿದೆ  ಆಡಿಯೋದಲ್ಲಿ ಮಾತಾಡಿರುವುದು ತಿಮ್ಮಾಪುರ ಮತ್ತು ನಂಜಯ್ಯನಮಠ ಇಬ್ಬರೂ ಕಾರಿನಲ್ಲಿ ಮಾತಾಡಿರೋ ಆಡಿಯೋ ರೆಕಾರ್ಡ್ ಮಾಡಲಾಗಿದೆ ಎಂದರು.

ಈಗ ನಾಗೇಂದ್ರ ದೆಹಲಿಗೆ ಹೋಗದಂತೆ ಕೊರ್ಟ್ ಆದೇಶಿಸಿದೆ. ಇಂತಹ ಕಳಂಕಿತರು ಸಂಪುಟದಲ್ಲಿ ಇರಲು ಸಾಧ್ಯವೇ ಇಲ್ಲ .ನಾಗೇಂದ್ರ ರಾಜೀನಾಮೆ ಪಡೆಯುವವರೆಗೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

Key words: resignation, Minister, B. Nagendra, Chalavadi Narayanaswamy

The post ಸಚಿವ ಬಿ.ನಾಗೇಂದ್ರ ರಾಜೀನಾಮೆ ಪಡೆಯದೇ ಸದನ ನಡೆಯಲು ನಾವು ಬಿಡಲ್ಲ- ಛಲವಾದಿ ನಾರಾಯಣಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ: ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೊಂದರೆ ಆರೋಪ

  ಬೆಂಗಳೂರು, ಜೂ.27, 2026: ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಯಲ್ಲಿ ಪ್ರಮುಖ...

ಮೇಜರ್ ಮಣಿವಣ್ಣನ್ ಅವರಿಗೆ ಚೀಪ್ ಆಫ್ ಡಿಫೆನ್ಸ್ ಸ್ಟಾಫ್ ಅವರಿಂದ ಪ್ರಶಂಸಾ ಪತ್ರ

  ಬೆಂಗಳೂರು ಸೆ.೨೬,೨೦೨೬: ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ...

ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ:  ಚು.ಆಯೋಗ ವಿಸರ್ಜಿಸಿ, ಮುಖ್ಯಆಯುಕ್ತರನ್ನ ಬಂಧಿಸಿಬೇಕು-ಸಿಎಂ ಡಿಕೆಶಿ ಒತ್ತಾಯ

ಬೆಂಗಳೂರು ,ಸೆಪ್ಟಂಬರ್,26,2026 (www.justkannada.in): ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು. ಮುಖ್ಯ...

ಯುವಕರು ಸಂಘಟಿತರಾಗಿ, ನಾರಾಯಣ ಗುರುಗಳ ತತ್ವಗಳನ್ನು ಅಳವಡಿಸಿಕೊಳ್ಳಲಿ:  ಸಚಿವ ಮಧು ಬಂಗಾರಪ್ಪ ಕರೆ

ಮೈಸೂರು, ಸೆಪ್ಟೆಂಬರ್ 26,2026 (www.justkannada.in): ನಾರಾಯಣ ಗುರುಗಳು ಇಡೀ ಮನು ಕುಲಕ್ಕೆ...