9
September, 2026

A News 365Times Venture

9
Wednesday
September, 2026

A News 365Times Venture

ಸತೀಶ್ ಜಾರಕಿಹೊಳಿ ಸಹೋದರರ ಮೇಲೆ  ಇಡಿ ದಾಳಿ ಯಾಕಾಗಿಲ್ಲ? ಬಿ.ಕೆ ಹರಿಪ್ರಸಾದ್ ಕಿಡಿ

Date:

  ಬೆಂಗಳೂರು,ಸೆಪ್ಟಂಬರ್,9,2026 (www.justkannada.in): ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿಯಾಗಿದೆ. ಆದರೆ ಅವರ ಸಹೋದರರ ಮನೆ ಮೇಲೆ ಇಡಿ ದಾಳಿ ಏಕಿಲ್ಲ? ಅವರೆಲ್ಲರೂ ಬಿಜೆಪಿಯವರು ಎಂದು ಕೇಂದ್ರ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಕುಟುಕಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ  ಇಡಿ ದಾಳಿ ವಿಚಾರ ಸಂಬಂಧ  ಮಾತನಾಡಿದ ಬಿ.ಕೆ ಹರಿಪ್ರಸಾದ್,   ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ನಡೆಸಿದರಲ್ಲಿ ಅಚ್ಚರಿ ಇಲ್ಲ. ಇದೆಲ್ಲವೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಂತ್ರ . ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು  ಇಡಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಸತೀಶ್ ಜಾರಕಿಹೊಳಿ ಸಹೋದರರಾದ  ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಇವರೆಲ್ಲರ ಮನೆ ಮೇಲೆ ಯಾಕೆ ಇಡಿ ದಾಳಿಯಾಗಿಲ್ಲ? ಅವರೆಲ್ಲರೂ ಬಿಜೆಪಿಯವರು. ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಇಡಿ, ಐಟಿಯಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲವೂ ಬಿಜೆಪಿ ನಾಯಕರ ಸೂಚನೆ ಮೇರೆಗೆ ನಡೆಯುತ್ತಿರುವ ದಾಳಿ ಎಂದು ಬಿ.ಕೆ ಹರಿಪ್ರಸಾದ್  ಗುಡುಗಿದರು.

Key words: ED raid, Sathish Jarkiholi, B.K. Hariprasad

The post ಸತೀಶ್ ಜಾರಕಿಹೊಳಿ ಸಹೋದರರ ಮೇಲೆ  ಇಡಿ ದಾಳಿ ಯಾಕಾಗಿಲ್ಲ? ಬಿ.ಕೆ ಹರಿಪ್ರಸಾದ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚಲನಚಿತ್ರ ದಸರಾ ರದ್ದು ನಿರ್ಧಾರ ಮರು ಪರಿಶೀಲಿಸಿ – ಜೋಗಿ ಮಂಜು ಮನವಿ

ಮೈಸೂರು,ಸೆಪ್ಟಂಬರ್,9,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ನೀಡಲಾಗುತ್ತಿದ್ದ...

BREAKING NEWS: ಮೈಸೂರಿನ ಕಾರ್ ವಾಷ್ ಸೆಂಟರ್‌ನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

  ಮೈಸೂರು, ಸೆ.೦೯,೨೦೨೬: ಮದ್ಯಪಾನ ಸೇವಿಸಿದ್ದರೆನ್ನಲಾದ ಆರು ಮಂದಿ ಯುವಕರಿಂದ ಗುಂಪಾಗಿ ಹಲ್ಲೆ....

KPSC ಹಗರಣ: ಜ್ಞಾನೇಂದ್ರ ಮತ್ತು ಕನ್ನಾಳೆಗೆ ನ್ಯಾಯಾಂಗ ಬಂಧನ

ಬೆಂಗಳೂರು,ಸೆಪ್ಟಂಬರ್,9,2026 (www.justkannada.in): ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ...

ಯಶವಂತಪುರ ಎಪಿಎಂಸಿ ಮಾರ್ಕೆಟ್ ಗೆ  ಭೇಟಿ, ಸಮಸ್ಯೆಗಳನ್ನ ಆಲಿಸಿದ ಸಿಎಂ ಡಿಕೆಶಿ

ಬೆಂಗಳೂರು,ಸೆಪ್ಟಂಬರ್,8,2026 (www.justkannada.in): ಇಂದು ಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಯಶವಂತಪುರ...