15
June, 2026

A News 365Times Venture

15
Monday
June, 2026

A News 365Times Venture

ಸರ್ಕಾರಿ ಅಭಿಯೋಜಕರಿಗೆ ಲಂಚ ನೀಡಲು ಯತ್ನ: ಇಬ್ಬರು ಲೋಕಾಯುಕ್ತ ಬಲೆಗೆ

Date:

ಕಲಬುರಗಿ,ಜೂನ್,15,2026 (www.justkannada.in): ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ಪ್ರಕರಣದಲ್ಲಿ ಆರೋಪಿತನಿಗೆ ಸಹಾಯ ಮಾಡುವ ಉದ್ದೇಶದಿಂದ ಸರ್ಕಾರಿ ಅಭಿಯೋಜಕರಿಗೆ ₹5,000 ಲಂಚ ನೀಡಲು ಯತ್ನಿಸಿದ ಇಬ್ಬರನ್ನು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿ. ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ದೂರುದಾರರಾದ ಪ್ರಾಣೇಶ ಸಿದ್ದಪ್ಪ ಭರತನೂರ, ಹಿರಿಯ ಕಾನೂನು ಅಧಿಕಾರಿ, ಕಲಬುರಗಿ ವಿಭಾಗ, ನೀಡಿದ ಮಾಹಿತಿಯ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕ್ರಮ ಕೈಗೊಂಡರು.

ಆರೋಪಿಗಳಾದ ಸಂಜೀವನ್ ದತ್ತಾಜಿ ಪಾಟೀಲ್ (80) ಹಾಗೂ ಅವರ ಪುತ್ರ ಸುರೇಶ್ ಸಂಜೀವನ್ ಪಾಟೀಲ್ (44) ಅವರು ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್‌ಸಿ/ಎಸ್‌ಟಿ ಪ್ರಕರಣವೊಂದರಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಪ್ರಕರಣವನ್ನು ಸಾಗಿಸಲು ಮತ್ತು ಸಹಾಯ ಮಾಡುವ ಉದ್ದೇಶದಿಂದ ಕಲಬುರಗಿಯ 2ನೇ ಅಪರ ಜಿಲ್ಲಾ ಮತ್ತು ಸತ್ರ (ಎಸ್‌ಸಿ/ಎಸ್‌ಟಿ) ನ್ಯಾಯಾಲಯದ ಸರ್ಕಾರಿ ಅಭಿಯೋಜಕರಿಗೆ ₹5,000 ನಗದು ಲಂಚ ನೀಡಲು ಯತ್ನಿಸಿದ್ದರು.

ಲಂಚದ ಹಣವನ್ನು ಕವರಿನಲ್ಲಿ ಇಟ್ಟು ನೀಡುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದು ಬಂಧಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಪೊಲೀಸ್ ಇನ್ಸ್‌ ಪೆಕ್ಟರ್ ರಾಜಶೇಖರ ಬಡದೇಸಾರ ನೇತೃತ್ವದಲ್ಲಿ ನಡೆಸಲಾಯಿತು. ಸ್ಥಳದಲ್ಲಿ ಪೊಲೀಸ್ ಇನ್ಸ್‌ ಪೆಕ್ಟರ್‌ ಗಳಾದ ಅರುಣ್ ಕುಮಾರ್ ಮತ್ತು ರವಿ ಪವಾರ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ENGLISH SUMMARY..

Two Held for Attempting to Bribe Government Prosecutor in Kalaburagi

Kalaburagi: Karnataka Lokayukta officials have arrested two persons for allegedly attempting to bribe a government prosecutor with ₹5,000 in connection with an SC/ST case under trial in the 2nd Additional District and Sessions Court, Kalaburagi.

The accused, Sanjeevan Dattaji Patil (80) and his son Suresh Sanjeevan Patil (44), were caught while allegedly trying to influence the case in favour of an accused person.

The operation was conducted under the guidance of Lokayukta SP C. Siddaraju and led by Police Inspector Rajashekhar Badadesar. Further investigation is underway, and the accused will be produced before the court.

Key words: Two Held , Bribe, Government, Prosecutor, Kalaburagi

The post ಸರ್ಕಾರಿ ಅಭಿಯೋಜಕರಿಗೆ ಲಂಚ ನೀಡಲು ಯತ್ನ: ಇಬ್ಬರು ಲೋಕಾಯುಕ್ತ ಬಲೆಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗ್ಯಾರಂಟಿಗಳಿಗಾಗಿ ನಾವೇನು ಕೇಂದ್ರದ ಬಳಿ ಕೈ ಚಾಚಿದ್ದೀವಾ?  ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು,ಜೂನ್,15,2026 (www.justkannada.in):  ಗ್ಯಾರಂಟಿ ಯೋಝನೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ...

ಮೈಸೂರು: ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ: ಇಬ್ಬರು ಸಾವು, 7 ಮಂದಿ ಗಂಭೀರ

ಮೈಸೂರು,ಜೂನ್,15,2026 (www.justkannada.in):  ಬಾರ್ ಅಂಡ್ ರೆಸ್ಟೋರೆಂಟ್ ಹೋಟೆಲ್ ನಲ್ಲಿ ಶಾರ್ಟ್ ಸರ್ಕ್ಯೂಟ್...

RSS ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವ ಕೆಲಸ ಇನ್ಮುಂದೆ ಸಾಧ್ಯವಿಲ್ಲ- ಮೋಹನ್ ಭಾಗವತ್ ತಿರುಗೇಟು

ತ್ರಿಶೂರ್,ಜೂನ್,15,2026 (www.justkannada.in): ಆರ್ ಎಸ್ಎಸ್ ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವ ಕೆಲಸ...

ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಸಿಎಂ ಶ್ವೇತಪತ್ರ ಮಂಡಿಸಲಿ- ಬಿವೈ ವಿಜಯೇಂದ್ರ

ಶಿವಮೊಗ್ಗ,ಜೂನ್,15,2026 (www.justkannada.in):  ಸರ್ಕಾರ ಹಣವಿಲ್ಲದ ಬಗ್ಗೆ ಒಪ್ಪಿಕೊಳ್ಳದೆ ಗ್ಯಾರಂಟಿ ಪರಿಷ್ಕರಣೆಯ ಹುನ್ನಾರ...