13
September, 2026

A News 365Times Venture

13
Sunday
September, 2026

A News 365Times Venture

ಸಾರ್ವಜನಿಕ ಗಣೇಶೋತ್ಸವ: ಸುರಕ್ಷತಾ ಮಾರ್ಗಸೂಚಿ ಅನುಸರಿಸಲು ಸೆಸ್ಕ್ ಸೂಚನೆ

Date:

ಮೈಸೂರು, ಸೆಪ್ಟಂಬರ್,12, 2026 (www.justkannada.in):  ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ವತಿಯಿಂದ ಸಾರ್ವಜನಿಕ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಮಾಡುವ ಸಂಘ-ಸಂಸ್ಥೆಗಳಿಗೆ ಮಾರ್ಗಸೂಚಿ ಹೊರಡಿಸಿದೆ.

ಹಬ್ಬದ ಆಚರಣೆ ವೇಳೆ ಸಂಭ್ರಮದ ಜತೆಗೆ ಸುರಕ್ಷತೆಗೂ ಆದ್ಯತೆ ನೀಡಬೇಕಿದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ನಡೆಸುವವರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಿದೆ. ಆ ಮೂಲಕ ಹಬ್ಬದ ಆಚರಣೆ ಸಂದರ್ಭದಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ನಿಗಾವಹಿಸಬೇಕಿದೆ.

ಆದ್ದರಿಂದ ಗಣೇಶೋತ್ಸವ ಆಚರಣೆಗಾಗಿ ಅನಧಿಕೃತವಾಗಿ ವಿದ್ಯುತ್ ಲೈನ್‌ ಗಳಿಗೆ ಹುಕ್ ಹಾಕಿ ಸಂಪರ್ಕ ಪಡೆಯದೆ, ಸೆಸ್ಕ್‌ ಉಪ ವಿಭಾಗೀಯ ಅಥವಾ ಶಾಖಾ ಕಚೇರಿಗೆ ತೆರಳಿ ಅನುಮತಿ ಪಡೆದು ಸಂಪರ್ಕ ಪಡೆಯಬೇಕು. ಗಣಪತಿ ಪ್ರತಿಷ್ಠಾಪಿಸುವ ಸ್ಥಳದ ಸುತ್ತಮುತ್ತ ಯಾವುದೇ ವಿದ್ಯುತ್ ಮಾರ್ಗಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ವಿದ್ಯುತ್ ಲೈನ್‌ ಕೆಳಗೆ ಅಥವಾ ಅಕ್ಕಪಕ್ಕದಲ್ಲಿ ಗಣಪತಿ ಪೆಂಡಾಲ್/ಮಂಟಪಗಳನ್ನು ಹಾಕದೆ, ಸುರಕ್ಷತೆಯ ಅಂತರ ಕಾಯ್ದುಕೊಂಡು ಪೆಂಡಾಲ್/ಮಂಟಪಗಳನ್ನು ಹಾಕಬೇಕು.

ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕ(ಟಿ.ಸಿ)ಗಳಿಗೆ ಬ್ಯಾನರ್, ಫಲಕಗಳನ್ನು ಕಟ್ಟಬಾರದು. ಗಣೇಶನ ವಿಗ್ರಹ ವಿಸರ್ಜನೆ ವೇಳೆ ವಿದ್ಯುತ್ ತಂತಿಗಳಿಗೆ ತಾಗುವ ರೀತಿಯಲ್ಲಿ ಎತ್ತರದ ಧ್ವಜಗಳು, ಕಟೌಟ್‌ಗಳನ್ನು ಕಟ್ಟಬಾರದು. ಗಣಪತಿ ವಿಸರ್ಜನಾ ಮೆರವಣೆಗೆ ನಡೆಯುವ ಬೀದಿಗಳಲ್ಲಿ ವಿದ್ಯುತ್ ಲೈನ್‌ಗಳ ಅಡಚಣೆ ಇದ್ದಲ್ಲಿ ಸಂಬಂಧಪಟ್ಟ ಸೆಸ್ಕ್‌ ಕಚೇರಿಯ ಗಮನಕ್ಕೆ ತಂದು, ವಿದ್ಯುತ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕ್ರಮವಹಿಸಬೇಕಿದೆ. ವಿದ್ಯುತ್‌ ಸಂಬಂಧಿಸಿದ ಯಾವುದೇ ಸಹಾಯ ಅಥವಾ ಮಾಹಿತಿಗೆ 1912 ಸಂಪರ್ಕಿಸಬೇಕಿದೆ. 

ಗ್ರಾಹಕರು ಹಾಗೂ ಸಾರ್ವಜನಿಕ ಸೇವೆಗೆ ಸೆಸ್ಕ್‌ ಸದಾ ಸನ್ನದ್ಧವಿರಲಿದೆ. ಈ ನಿಟ್ಟಿನಲ್ಲಿ ಸುರಕ್ಷಿತವಾಗಿ ಗಣೇಶೋತ್ಸವ ಆಚರಿಸಲು ಗಣೇಶ ಮಂಡಳಿಗಳು ಸೆಸ್ಕ್‌ ವತಿಯಿಂದ ಅಗತ್ಯ ಸಹಕಾರ ಪಡೆದು ಸುರಕ್ಷಿತ ರೀತಿಯಲ್ಲಿ ಹಬ್ಬದ ಆಚರಣೆ ಮಾಡಬೇಕಿದೆ ಎಂದು ಸೆಸ್ಕ್‌  ಪ್ರಕಟಣೆಯಲ್ಲಿ ತಿಳಿಸಿದೆ.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪೌರಕಾರ್ಮಿಕರ ಆರೋಗ್ಯ ರಕ್ಷಣೆಗೆ ಉಚಿತ ತಪಾಸಣಾ ಶಿಬಿರ

  ಮೈಸೂರು, ಸೆ.೧೨,೨೦೨೬: ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ...

ಮೈಸೂರು: ಅಂಚೆ ಇಲಾಖೆಯಿಂದ ಉಚಿತ ಆಧಾರ್ ಕ್ಯಾಂಪ್

ಮೈಸೂರು,ಸೆಪ್ಟಂಬರ್,12,2026 (www.justkannada.in): ಅಂಚೆ ಇಲಾಖೆ ವತಿಯಿಂದ ಸಂಘ-ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ...

18ನೇ ಬ್ರಿಕ್ಸ್ ಶೃಂಗಸಭೆ: ಒಗ್ಗಟ್ಟಿನ ಮಂತ್ರ ಜಪಿಸಿದ ಪ್ರಧಾನಿ ಮೋದಿ

ನವದೆಹಲಿ,ಸೆಪ್ಟಂಬರ್,12,2026 (www.justkannada.in): ಬ್ರಿಕ್ಸ್ ಒಕ್ಕೂಟ ಯಾವುದೇ ದೇಶದ ವಿರುದ್ಧವಿಲ್ಲ. ಬ್ರಿಕ್ಸ್ ದೇಶಗಳ...

ಚಿದಂಬರರಾವ್ ಜಂಬೆ ಅವರಿಗೆ ನುಡಿ ನಮನ

ಮೈಸೂರು,ಸೆಪ್ಟಂಬರ್,12,2026 (www.justkannada.in): ಒಬ್ಬ ಕಲಾವಿದನ ಸಾವು ಒಂದು ಜೀವದ ಅಂತ್ಯವಾಗಬಹುದು… ಆದರೆ...