30
June, 2026

A News 365Times Venture

30
Tuesday
June, 2026

A News 365Times Venture

ಹಾಡಹಗಲೇ ಮಹಿಳಾ ಅಧಿಕಾರಿಗೆ ಲೈಂಗಿಕ ದೌರ್ಜನ್ಯ: ಮೊಬೈಲ್ ಕಿತ್ತುಕೊಂಡು ದರೋಡೆಕೋರ ಪರಾರಿ

Date:

ಬೆಂಗಳೂರು, ಆಗಸ್ಟ್​ 13,2025 (www.justkannada.in): ಹಾಡಹಗಲೇ ದರೋಡೆಕೋರನೋರ್ವ  ಪಿಜಿಗೆ ನುಗ್ಗಿ ಮಹಿಳಾ ಅಧಿಕಾರಿಗೆ ಚಾಕು ತೋರಿಸಿ ಹೆದರಿಸಿ ಲೈಂಗಿಕ ದೌರ್ಜನ್ಯವೆಸಗಿ ನಂತರ ಮೊಬೈಲ್​ ಕಿತ್ತುಕೊಂಡು ಪರಾರಿ  ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆಗಸ್ಟ್​ 11ರಂದು ಜುಡಿಷಿಯಲ್ ಲೇಔಟ್​ನ ಲೇಡಿಸ್ ಪಿಜಿಯೊಂದರಲ್ಲಿ ಈ ಘಟನೆ ನಡೆದಿದೆ. ಬೆಸ್ಕಾಂನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿರುವ ಮಹಿಳೆ ಮೇಲೆಯೇ ಈ ದೌರ್ಜನ್ಯವೆಸಗಲಾಗಿದೆ.

15 ದಿನಗಳ ಹಿಂದಷ್ಟೇ ಮಹಿಳೆ ಜುಡಿಷಿಯಲ್ ಲೇಔಟ್​ ನ ಶಿವಾಸ್ ಲೇಡಿಸ್ ಪಿಜಿಗೆ ಸೇರಿಕೊಂಡಿದ್ದರು. ಆಗಸ್ಟ್​ 11ರಂದು ಮಧ್ಯಾಹ್ನ ಕೆಲಸ ಮುಗಿಸಿ ಪಿಜಿಯಲ್ಲಿನ 3ನೇ ಮಹಡಿಯಲ್ಲಿರುವ ತನ್ನ ರೂಮಿಗೆ ಆಗಮಿಸಿದ್ದರು.

ಈ ವೇಳೆ ಏಕಾಏಕಿ ಬಂದ ದರೋಡೆಕೋರ ಚಾಕು ಸಮೇತ  ಪಿಜಿಗೆ ನುಗ್ಗಿ ಮಹಿಳೆಯಿದ್ದ ರೂಮ್​​ ಡೋರ್ ಬಡೆದಿದ್ದಾನೆ. ಪಿಜಿಯವರು ಇರಬಹುದೆಂದು ಮಹಿಳೆ ಬಾಗಿಲು ತೆರೆದಿದ್ದಾರೆ.  ಈ ವೇಳೆ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದ ಖದೀಮ, ದೌರ್ಜನ್ಯವೆಸಗಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಬೆಡ್​ ಮೇಲಿದ್ದ 2 ಮೊಬೈಲ್​ ಗಳು ತೆಗೆದುಕೊಂಡು ಪರಾರಿ ಆಗಿದ್ದಾನೆ. ಘಟನೆ ಕುರಿತು ಯಲಹಂಕ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Key words: Female officer, sexually, assault, Robber

The post ಹಾಡಹಗಲೇ ಮಹಿಳಾ ಅಧಿಕಾರಿಗೆ ಲೈಂಗಿಕ ದೌರ್ಜನ್ಯ: ಮೊಬೈಲ್ ಕಿತ್ತುಕೊಂಡು ದರೋಡೆಕೋರ ಪರಾರಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪೊಲೀಸ್ ಅಧಿಕಾರಿಗಳ ಮಾಧ್ಯಮ ಸಂಪರ್ಕಕ್ಕೆ ನಿರ್ಬಂಧ: ಡಿಜಿಪಿ ಎಂ.ಎ. ಸಲೀಂ ಸುತ್ತೋಲೆ

ಬೆಂಗಳೂರು, ಜೂನ್,29,2026 (www.justkannada.in): ಅಧಿಕೃತ ಮಾಹಿತಿಯ ಅನಧಿಕೃತ ಬಹಿರಂಗಪಡಿಸುವಿಕೆಯನ್ನು ತಡೆಯಲು ಕರ್ನಾಟಕ...

ರೇಷ್ಮೆ ಕೃಷಿಯು ರೈತ ಸಮುದಾಯಕ್ಕೆ ಜೀವನೋಪಾಯವಾಗಿದೆ- ಆಯುಕ್ತೆ ಶಿಲ್ಪಾನಾಗ್

ಮೈಸೂರು,ಜೂನ್,30,2026 (www.justkannada.in): ರೇಷ್ಮೆ ಕೃಷಿಯು ರೈತ ಸಮುದಾಯದ ಜೀವನೋಪಾಯವಾಗಿದೆ ಎಂದು ರೇಷ್ಮೆ...

ಪರೀಕ್ಷೆ ಮುಗಿದ ಐದೇ ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ಇತಿಹಾಸ ಸೃಷ್ಟಿಸಿದ VTU

ಬೆಂಗಳೂರು,ಜೂನ್,30,2026 (www.justkannada.in): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) 6ನೇ ಸೆಮಿಸ್ಟರ್ ಎಂಜಿನಿಯರಿಂಗ್ ಪರೀಕ್ಷೆ...

2028ರ ವೇಳೆಗೆ ಮಾದಕ ವಸ್ತು ಮುಕ್ತ- ನಶೆ ಮುಕ್ತ ಕರ್ನಾಟಕ ನಮ್ಮ ಗುರಿ: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಜೂನ್,30,2026 (www.justkannada.in): 2028 ರ ವೇಳೆಗೆ ಮಾದಕ ವಸ್ತು ಮುಕ್ತ-...