14
May, 2026

A News 365Times Venture

14
Thursday
May, 2026

A News 365Times Venture

ಹಿಜಾಬ್ ಬಗ್ಗೆ ಮಾತನಾಡ್ತೀರಾ? ಜನಿವಾರ ಕಾಣಿಸಲ್ವಾ? ಬಿಜೆಪಿಗೆ  ಸಚಿವ ಮಧು ಬಂಗಾರಪ್ಪ ಟಾಂಗ್

Date:

ಬೆಂಗಳೂರು,ಮೇ,14,2026 (www.justkannada.in) :  ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಿ ಕೇಸರಿ ಶಾಲಿಗೆ ಅವಕಾಶ ನಿರಾಕರಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ  ಮುಗಿಬಿದ್ದ ಬಿಜೆಪಿ ನಾಯಕರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಮಧು ಬಂಗಾರಪ್ಪ, ಹಿಜಾಬ್ ಬಗ್ಗೆ ಮಾತನಾಡುತ್ತೀರಾ? ಜನಿವಾರ ಕಾಣಿಸಲ್ವಾ ಮಕ್ಕಳ ಹಿತದೃಷ್ಠಿಯಿಂದ ಈ ನಿರ್ಧಾರ ಮಾಡಿದ್ದೇವೆ, ಶಿಕ್ಷಣ, ಧರ್ಮಕ್ಕೆ ಕೈ ಹಾಕಲು ಹೋಗಬೇಡಿ. ಯಾರ ಒತ್ತಡಕ್ಕೂ ಮಣಿದು ಈ ನಿರ್ಧಾರ ಮಾಡಿಲ್ಲ ಹೀಗಾಗಿ ಆದೇಶ ಹಿಂಪಡೆಯಲ್ಲ ಎಂದರು.

ಆದೇಶ ವಿರೋಧಿಸೋರಿಗೆ ಒಂದೇ ಹೇಳೋದು. ನೀಟ್ ​ನಿಂದ 25 ಲಕ್ಷ ಮಕ್ಕಳು ತೊಂದರೆಗೊಳಗಾದರು. ಅವರ ಕಾಲ ಕೆಳಗೆ ಇವರು ನುಸುಳಲಿ. ಕೇಂದ್ರೀಯ ವಿವಿಯಲ್ಲೂ ನಾವು ಮಾಡಿದ ಆದೇಶವಿದೆ. ಮೋದಿಯವರೇ ಈ ಕಾನೂನು ಮಾಡಿದ್ದಾರೆ. ಮಹಾರಾಷ್ಟ್ರದಲ್ಲೂ ಇದೇ ಕಾನೂನಿದೆ. ಸಿಎಂ ಎಲ್ಲರನ್ನೂ ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂದರು. ಬಿಜೆಪಿಯವರಿಗೆ ಹೊಟ್ಟೆಕಿಚ್ಚು ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.

Key words: Schools, hijab, Janivar, Minister, Madhu Bangarappa, BJP

The post ಹಿಜಾಬ್ ಬಗ್ಗೆ ಮಾತನಾಡ್ತೀರಾ? ಜನಿವಾರ ಕಾಣಿಸಲ್ವಾ? ಬಿಜೆಪಿಗೆ  ಸಚಿವ ಮಧು ಬಂಗಾರಪ್ಪ ಟಾಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು: ಮೇ 16 ರಂದು ‘ಹಿಂದೂ ಎಜುಕೇಶನ್ ಪ್ಲಸ್ ಕರಿಯರ್ ಕೌನ್ಸೆಲಿಂಗ್ ಫೇರ್ – 2026’

ಮೈಸೂರು,ಮೇ,14,2026 (www.justkannada.in): ವಿದ್ಯಾರ್ಥಿಗಳ ಭವಿಷ್ಯದ ಹಾದಿಗೆ ಮಾರ್ಗದರ್ಶಿಯಾದ ‘ದಿ ಹಿಂದೂ ಎಜುಕೇಶನ್...

ನೀಟ್ ಪರೀಕ್ಷೆ ರದ್ದು: ಆಡಳಿತಾತ್ಮಕ ವೈಪಲ್ಯ, ಯುವಜನತೆಗೆ ಬಗೆದ ಕ್ರೂರ ದ್ರೋಹ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮೇ,14,2026 (www.justkannada.in): ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ‘ನೀಟ್-ಯುಜಿ...

ವಿದ್ಯುತ್ ಮಾರ್ಗಗಳ ಭೂಗತ ಕೇಬಲ್‌ ಅಳವಡಿಕೆ ಕಾಮಗಾರಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು,ಮೇ,14,2026 (www.justkannada.in): ಮೈಸೂರು ನಗರ ವ್ಯಾಪ್ತಿಯಲ್ಲಿ ರಿಂಗ್ ರೋಡ್ ಒಳ ಭಾಗದಲ್ಲಿ...

 ಕೇರಳದ ನೂತನ ಸಿಎಂ ಆಗಿ ವಿ.ಡಿ ಸತೀಶನ್  ಆಯ್ಕೆ

ತಿರವನಂತಪುರಂ,ಮೇ,14,2026 (www.justkannada.in):  ಕೇರಳ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್  ಆಯ್ಕೆಯಾಗಿದ್ದಾರೆ. ಕೇರಳ...