30
April, 2026

A News 365Times Venture

30
Thursday
April, 2026

A News 365Times Venture

1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ

Date:

ಬೆಂಗಳೂರು, ಏಪ್ರಿಲ್, 16,2025 (www.justkannada.in):  1ನೇ ತರಗತಿಗೆ ಮಕ್ಕಳ  ಪ್ರವೇಶಾತಿಗೆ ಇರುವ ವಯೋಮಿತಿಯನ್ನು ಸಡಿಲಗೊಳಿಸಿದ್ದು5 ವರ್ಷ 5 ತಿಂಗಳು ವಯಸ್ಸನ್ನ ನಿಗದಿ ಮಾಡಲಾಗಿದೆ ಎಂದು  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, 1ನೇ ತರಗತಿಗೆ ಪ್ರವೇಶಕ್ಕೆ  5 ವರ್ಷ 5 ತಿಂಗಳಾಗಿದ್ದರೂ ಸೇರಿಸಲು ಈ ವರ್ಷ ಅವಕಾಶ ಮಾಡಿಕೊಡಲಾಗುತ್ತದೆ. ಎಸ್‌ಇಪಿ ವರದಿ ಆಧಾರದ ಮೇಲಿನ ಕಡ್ಡಾಯ 6 ವರ್ಷ ವಯೋಮಿತಿಯನ್ನು ಸಡಿಲಿಸಲಾಗಿದೆ. ಆದರೆ, ಒಂದನೇ ತರಗತಿ ಸೇರ್ಪಡೆಗೆ ಯುಕೆಜಿ ಆಗಿರಬೇಕು. ಆದರೆ, ಇದು ಈ ವರ್ಷಕ್ಕೆ ಮಾತ್ರ ಅನ್ವಯ. ಮುಂದಿನ ವರ್ಷದಿಂದ ಕಡ್ಡಾಯ ವಯೋಮಿತಿ 6 ವರ್ಷವೇ ಇರಲಿದೆ ಎಂದು ತಿಳಿಸಿದರು.

ಎಲ್​ಕೆಜಿ, ಯುಕೆಜಿ ಆಗಿದ್ದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ. ಮಕ್ಕಳಿಗೆ 5 ವರ್ಷ 5 ತಿಂಗಳಾಗಿರಬೇಕು. ಪೋಷಕರ ಒತ್ತಾಯದ ಮೇರೆಗೆ ಇದೊಂದು ವರ್ಷ ಮಾತ್ರ ಅವಕಾಶ ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

Key words: Age limit, relaxed ,admission , 1st class, Minister, Madhu Bangarappa

The post 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಳೆ ಅವಾಂತರ: ನಾಳೆ ಡಿಸಿಎಂ ಡಿಕೆ ಶಿವಕುಮಾರ್ ರಿಂದ ಸಿಟಿ ರೌಂಡ್ಸ್

ಬೆಂಗಳೂರು,ಏಪ್ರಿಲ್,30,2026 (www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಭಾರೀ ಮಳೆಯಿಂದಾಗಿ ಬೌಂರಿಂಗ್...

ಕಾಂಗ್ರೆಸ್ ನಾಯಕರು ಸೈಲೆಂಟಾಗಿಲ್ಲ, ಶಿಸ್ತು ಅಂದುಕೊಳ್ಳಿ-  ಸಚಿವ ಶಿವರಾಜ್ ತಂಗಡಗಿ

ಚಿತ್ರದುರ್ಗ,ಏಪ್ರಿಲ್,30,2026 (www.justkannada.in):  ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಶಿವರಾಜ್...

ಮೈಸೂರು: ಬೌರಿಂಗ್ ಅವಘಡ ಎಚ್ಚರಿಕೆ ಗಂಟೆ – ಕೆ.ವಿ. ಮಲ್ಲೇಶ್

ಮೈಸೂರು,ಏಪ್ರಿಲ್,30,2026 (www.justkannada.in):  ಬೆಂಗಳೂರಿನ ಬೌರಿಂಗ್ ಕಾಂಪೌಂಡ್ ಕಟ್ಟಡ ಕುಸಿದು 7 ಮಂದಿ...

KSDL ಸಾಧನೆ: ಸಚಿವ ಎಂ.ಬಿ ಪಾಟೀಲ್ ಗೆ ಕಾರ್ಮಿಕರ ಸಂಘದಿಂದ ಅಭಿನಂದನೆ

ಬೆಂಗಳೂರು,ಏಪ್ರಿಲ್,30,226 (www.justkannada.in):  ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು...