ಮೈಸೂರು,ಮೇ,29,2025 (www.justkannada.in): ಹುಬ್ಬಳ್ಳಿ ಗಲಭೆ ಸೇರಿ 43 ಕ್ರಿಮಿನಲ್ ಕೇಸ್ ಗಳನ್ನು ಹಿಂಪಡೆಯಲು ನಿರ್ಧರಿಸಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಹಿನ್ನಡೆಯಾಗಿದ್ದು, ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.
ಹುಬ್ಬಳ್ಳಿ ಗಲಭೆ ಪ್ರಕರಣದ ಕೇಸ್ ಸೇರಿದಂತೆ 43 ಕ್ರಿಮಿನಲ್ ಕೇಸ್ ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿ, ಆದೇಶ ಹೊರಡಿಸಿತ್ತು. ಇದೀಗ ಸರ್ಕಾರದ 2024ರ ಅ.15ರ ಆದೇಶವನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶ ರದ್ದು ಮಾಡಿ ಹೈಕೋರ್ಟ್ ಆದೇಶ ಹಿನ್ನಲೆ ಈ ಕುರಿತು ಪ್ರತಿಕ್ರಿಯಿಸಿರುವ ಪಿಐಎಲ್ ಸಲ್ಲಿಸಿದ್ದ ವಕೀಲ ಗಿರೀಶ್ ಭಾರದ್ವಾಜ್ , ಸರ್ಕಾರಕ್ಕೆ ಅಧಿಕಾರ ಇಲ್ಲದಿದ್ದರೂ ಕ್ರಿಮಿನಲ್ ಕೇಸ್ ಗಳನ್ನು ಹಿಂಪಡೆದಿತ್ತು . ಈಗ ಹೈಕೋರ್ಟ್ ಸರ್ಕಾರದ ಆದೇಶ ರದ್ದು ಮಾಡಿದೆ. ಜನ ಸಾಮಾನ್ಯರಿಗೆ ಕೋರ್ಟ್ ಮೇಲೆ ಇರುವ ನಂಬಿಕೆ ದುಪ್ಪಟ್ಟು ಆಗಿದೆ ಎಂದಿದ್ದಾರೆ.
ಸರ್ಕಾರ ರಾಜಕೀಯವನ್ನು ರಾಜಕೀಯವಾಗಿ ಮಾಡಿದ್ರೆ ಒಳ್ಳೆಯದು. ರಾಜಕೀಯ ಲಾಭಕ್ಕಾಗಿ ಕ್ರಿಮಿನಲ್ ಕೇಸ್ ಗಳನ್ನು ವಾಪಸ್ ಪಡೆಯೋದು ತಪ್ಪು. ಸರ್ಕಾರಕ್ಕೆ ಇಂತಹ ಕೇಸ್ ಗಳನ್ನು ವಾಪಸ್ ಪಡೆಯುವ ಹಕ್ಕಿಲ್ಲ. ಹೈ ಕೋರ್ಟ್ ಆದೇಶ ಖುಷಿ ತಂದಿದೆ. ಇಷ್ಟಕ್ಕೆ ಸರ್ಕಾರ ಬುದ್ಧಿ ಕಲಿತು ಸುಮ್ಮನಿದ್ರೆ ಒಳ್ಳೆಯದು. ಸುಪ್ರೀಂ ಕೋರ್ಟ್ ಗೆ ಅಪೀಲ್ ಹೋದರೆ. ನಾನು ಕೂಡ ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದು ವಕೀಲ ಗಿರೀಶ್ ಭಾರದ್ವಾಜ್ ಹೇಳಿದ್ದಾರೆ.
Key words: Order, withdrawing, 43 criminal cases, revoked, High court
The post 43 ಕ್ರಿಮಿನಲ್ ಪ್ರಕರಣ ಹಿಂಪಡೆದ ಆದೇಶ ರದ್ದು: ಕೋರ್ಟ್ ಮೇಲಿರುವ ನಂಬಿಕೆ ದುಪ್ಪಟ್ಟಾಗಿದೆ – ವಕೀಲ ಗಿರೀಶ್ ಭಾರದ್ವಾಜ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.