ಬೆಂಗಳೂರು,ಮಾರ್ಚ್,23,2025 (www.justkannada.in): ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ವಿಚಾರ ದೊಡ್ಡ ಸದ್ದು ಮಾಡುತ್ತಿದ್ದು ಈ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ನಿನ್ನೆ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಬರೀ 40 ಅಲ್ಲ 400 ಮಂದಿಯನ್ನ ಹನಿಟ್ರ್ಯಾಪ್ ಗೆ ಬೀಳಿಸಲಾಗಿದೆ ಎಂದಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ ದೆಹಲಿಯ ಅನೇಕ ನಾಯಕರು ಅಧಿಕಾರಿಗಳು ಕೂಡ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ರಾಜ್ಯ ಸರ್ಕಾರ ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.
ರಾಜ್ಯ ಅಲ್ಲ ರಾಷ್ಟ್ರ ನಾಯಕರ,ಅಧಿಕಾರಿಗಳ ಮೇಲೂ ನಡೆದಿದೆ ಹನಿಟ್ರ್ಯಾಪ್ ಯತ್ನಿಸಲಾಗಿದೆ. ಎಲ್ಲಾ ಪಕ್ಷದ ನಾಯಕರು ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ 20 ವರ್ಷಗಳಿಂದಲೂ ಹನಿಟ್ರ್ಯಾಪ್ ನಡೆಯುತ್ತಿಯಂತೆ
ಸದನದಲ್ಲಿ ಹನಿಟ್ರ್ಯಾಪ್ ವಿಚಾರ ದೊಡ್ಡ ಸದ್ದು ಮಾಡಿದ್ದು ಹನಿಟ್ರ್ಯಾಪ್ ರಹಸ್ಯ ತನಿಖೆಗೆ ಸರ್ಕಾರ ನಿರ್ಧಾರ ಮಾಡಿದೆ. ಹನಿಟ್ರ್ಯಾಪ್ ಮೂಲಕ ವ್ಯಕ್ತಿ ವ್ಯಕ್ತಿತ್ವ, ಘನತೆ ಹಾಳುಮಾಡುವ ಹುನ್ನಾರವಾಗಿದ್ದು ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲು ಸರ್ಕಾರ ಚಿಂತನೆ ನಡೆಸಿದೆ. ಸಾಕಷ್ಟು ಪ್ರಭಾವಿಗಳಿಗೆ ಹನಿಟ್ರ್ಯಾಪ್ ಕಾಡಿದ್ದು ಉನ್ನತಮಟ್ಟದ ತನಿಖೆಗೆ ಉಭಯ ಪಕ್ಷಗಳ ನಾಯಕರಿಂದಲೂ ಆಗ್ರಹ ಕೇಳಿ ಬಂದಿದೆ.
Key words: Honeytrap, Minister, Sathish Jarkiholi, statement
The post 48 ಅಲ್ಲ 400 ಕ್ಕೂ ಹೆಚ್ಚು ಜನರ ಮೇಲೆ ಹನಿಟ್ರ್ಯಾಪ್? ಸ್ಪೋಟಕ ಹೇಳಿಕೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.