30
April, 2026

A News 365Times Venture

30
Thursday
April, 2026

A News 365Times Venture

48 ಅಲ್ಲ 400 ಕ್ಕೂ ಹೆಚ್ಚು ಜನರ ಮೇಲೆ ಹನಿಟ್ರ್ಯಾಪ್? ಸ್ಪೋಟಕ ಹೇಳಿಕೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ

Date:

ಬೆಂಗಳೂರು,ಮಾರ್ಚ್,23,2025 (www.justkannada.in): ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ವಿಚಾರ ದೊಡ್ಡ ಸದ್ದು ಮಾಡುತ್ತಿದ್ದು ಈ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ನಿನ್ನೆ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಬರೀ 40 ಅಲ್ಲ 400 ಮಂದಿಯನ್ನ ಹನಿಟ್ರ್ಯಾಪ್ ಗೆ ಬೀಳಿಸಲಾಗಿದೆ ಎಂದಿದ್ದಾರೆ.

ಕರ್ನಾಟಕ ಮಾತ್ರವಲ್ಲದೆ ದೆಹಲಿಯ ಅನೇಕ ನಾಯಕರು ಅಧಿಕಾರಿಗಳು ಕೂಡ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ರಾಜ್ಯ ಸರ್ಕಾರ ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ರಾಜ್ಯ ಅಲ್ಲ ರಾಷ್ಟ್ರ ನಾಯಕರ,ಅಧಿಕಾರಿಗಳ ಮೇಲೂ ನಡೆದಿದೆ ಹನಿಟ್ರ್ಯಾಪ್ ಯತ್ನಿಸಲಾಗಿದೆ. ಎಲ್ಲಾ ಪಕ್ಷದ ನಾಯಕರು ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ 20 ವರ್ಷಗಳಿಂದಲೂ ಹನಿಟ್ರ್ಯಾಪ್ ನಡೆಯುತ್ತಿಯಂತೆ

ಸದನದಲ್ಲಿ ಹನಿಟ್ರ್ಯಾಪ್ ವಿಚಾರ ದೊಡ್ಡ ಸದ್ದು ಮಾಡಿದ್ದು ಹನಿಟ್ರ್ಯಾಪ್ ರಹಸ್ಯ ತನಿಖೆಗೆ ಸರ್ಕಾರ ನಿರ್ಧಾರ ಮಾಡಿದೆ.  ಹನಿಟ್ರ್ಯಾಪ್ ಮೂಲಕ ವ್ಯಕ್ತಿ ವ್ಯಕ್ತಿತ್ವ, ಘನತೆ ಹಾಳುಮಾಡುವ ಹುನ್ನಾರವಾಗಿದ್ದು ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲು ಸರ್ಕಾರ ಚಿಂತನೆ ನಡೆಸಿದೆ.  ಸಾಕಷ್ಟು ಪ್ರಭಾವಿಗಳಿಗೆ ಹನಿಟ್ರ್ಯಾಪ್ ಕಾಡಿದ್ದು ಉನ್ನತಮಟ್ಟದ ತನಿಖೆಗೆ ಉಭಯ ಪಕ್ಷಗಳ ನಾಯಕರಿಂದಲೂ ಆಗ್ರಹ ಕೇಳಿ ಬಂದಿದೆ.

Key words: Honeytrap, Minister, Sathish Jarkiholi, statement

The post 48 ಅಲ್ಲ 400 ಕ್ಕೂ ಹೆಚ್ಚು ಜನರ ಮೇಲೆ ಹನಿಟ್ರ್ಯಾಪ್? ಸ್ಪೋಟಕ ಹೇಳಿಕೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ.ಬಂಗಾಳ ವಿಧಾನಸಭಾ ಚುನಾವಣಾ ಮತದಾನ: ಈವರೆಗೆ ಶೇ 61.11 ರಷ್ಟು ಮತದಾನ

ಕೋಲ್ಕತ್ತಾ,ಏಪ್ರಿಲ್,29,2026 (www.justkannada.in): ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ...

ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಅಲ್ಲ, ಸಿದ್ದರಾಮಯ್ಯ ಅವರೇ ಒಂದು ಶಕ್ತಿ – ಸಚಿವ HC ಮಹದೇವಪ್ಪ

ನವದೆಹಲಿ,ಏಪ್ರಿಲ್,29,2026 (www.justkannada.in): ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಅಲ್ಲ, ಸಿದ್ದರಾಮಯ್ಯ ಅವರೇ...

ಧರ್ಮಸ್ಥಳದಿಂದ ವಾಪಸ್ಸಾಗುವಾಗ ದುರಂತ: ನಾಲೆಗೆ ಕಾರು ಬಿದ್ದು ತಾಯಿ ಮಗು ಸಾವು

ಹಾಸನ,ಏಪ್ರಿಲ್,29,2026 (www.justkannada.in): ಧರ್ಮಸ್ಥಳದಿಂದ ವಾಪಸ್ ಆಗುವಾಗ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್...

ಜಲ್ ಜೀವನ್ ಮಿಷನ್ 2.0 ಸಂವಾದ: ಬಾಕಿಯಿರುವ ಎಲ್ಲಾ ಅನುದಾನ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಒತ್ತಾಯ  

ಬೆಂಗಳೂರು,ಏಪ್ರಿಲ್,29,2026 (www.justkannada.in): ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕರ್ನಾಟಕ ಸಂಪೂರ್ಣವಾಗಿ ಬದ್ಧವಾಗಿದೆ....