21
August, 2026

A News 365Times Venture

21
Friday
August, 2026

A News 365Times Venture

500 KPS ಶಾಲೆಗಳ ಅಭಿವೃದ್ಧಿಗೆ 1,750 ಕೋಟಿ ರೂ. ಎಡಿಬಿ ನೆರವು; ಮಹತ್ವದ ಒಪ್ಪಂದಕ್ಕೆ ಸಹಿ

Date:

ಬೆಂಗಳೂರು, ಆಕ್ಟೋಬರ್,21,2026 (www.justkannada.in): ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಇಂದು ಮಹತ್ವದ ದಿನ. ರಾಜ್ಯದಲ್ಲಿನ 500 ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆ’ (KPS)ಗಳಾಗಿ ಅಭಿವೃದ್ಧಿಪಡಿಸಲು 1,750 ಕೋಟಿ ರೂ.ಗಳ ನೆರವು ಘೋಷಿಸಿರುವ ʻಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ʼ (ADB) ಮತ್ತು ರಾಜ್ಯ ಸರ್ಕಾರ ಇಂದು ಈ ಸಂಬಂಧದ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿವೆ.

ವಿಧಾನ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರ ಸಮ್ಮುಖದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಎಡಿಬಿ ಬ್ಯಾಂಕಿನ ಅಧಿಕಾರಿಗಳು ಈ ಒಪ್ಪಂದಕ್ಕೆ ಸಹಿ ಹಾಕಿದರು. ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಅಂದರೆ 2029-30ನೇ ಸಾಲಿನ ಒಳಗೆ ರಾಜ್ಯ ಸರ್ಕಾರವು 2,500 ಕೋಟಿ ರೂ. ವಿನಿಯೋಗಿಸಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕೆ ಎಡಿಬಿ ಬ್ಯಾಂಕ್ 1,750 ಕೋಟಿ ರೂ.ಗಳ ನೆರವು ನೀಡಲಿದೆ.

ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಸಾಮರ್ಥ್ಯ ಹೊಂದಿರುವ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಪ್ರತಿ ಶಾಲೆಯಲ್ಲೂ ಕನಿಷ್ಠ 1,200 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಾಮರ್ಥ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಎಡಿಬಿಯ ನೆರವಿನಿಂದ ಒಟ್ಟು 500  ಕೆಪಿಎಸ್ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತದೆ.

ಅಧಿಕಾರಿಗಳು ಈ ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನ ಕಂಟ್ರಿ ಡೈರೆಕ್ಟರ್ ಮಿಯೋ ಓಕಾ, ಎಡಿಬಿಯ ಪ್ರಿನ್ಸಿಪಲ್ ಪೋರ್ಟ್ಫೋಲಿಯೊ ಮ್ಯಾನೇಜ್ ಮೆಂಟ್ ಸ್ಪೆಷಲಿಸ್ಟ್ ಕೈ ವೇಯ್ ಯಿಯೋ,  ಎಡಿಬಿ ಬ್ಯಾಂಕಿನ ಹಿರಿಯ ಪ್ರಾಜೆಕ್ಟ್ ಆಫೀಸರ್ (ಶಿಕ್ಷಣ) ಪೂನಂ ಎಸ್. ಭಾಂಬ್ರಿ, ಎಡಿಬಿಯ ಪ್ರಿನ್ಸಿಪಲ್ ಕಮ್ಯುನಿಕೇಷನ್ಸ್ ಆಫೀಸರ್ ರಾಜೇಶ್ ಕುಮಾರ್ ಡಿಯೋಲ್, ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಪೂರ್ಣಿಮಾ ಪ್ರಸಾದ್ಮಾನ್ಯ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್,  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ರಶ್ಮಿ ವಿ. ಮಹೇಶ್,  ಆರ್ಥಿಕ ವ್ಯವಹಾರಗಳ ಇಲಾಖೆ ಉಪಕಾರ್ಯದರ್ಶಿ ಸೌರಭ್ ಸಿಂಗ್, ಎಡಿಬಿ ಬ್ಯಾಂಕಿನ ಮತ್ತು ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

ಮುಂದಿನ 4 ವರ್ಷಗಳಲ್ಲಿ ಅನುಷ್ಠಾನ

ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಅಂದರೆ 2029-30ನೇ ಸಾಲಿನ ಒಳಗೆ ರಾಜ್ಯ ಸರ್ಕಾರವು 2,500 ಕೋಟಿ ರೂ. ವಿನಿಯೋಗಿಸಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕೆ ಎಡಿಬಿ ಬ್ಯಾಂಕ್  1,750  ರೂ.ಗಳ ನೆರವು ಒದಗಿಸಲಿದೆ. ಉಳಿದ 750 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನೀಡಬೇಕಾಗುತ್ತದೆ. ಈ ಒಪ್ಪಂದಕ್ಕೆ ಸಹಿ ಮಾಡುವುದಕ್ಕೂ ಮೊದಲೇ ನಾನು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಒಪ್ಪಂದವನ್ನು ಅಂತಿಮಗೊಳಿಸಿದ್ದೇನೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

ಎಡಿಬಿ ಬ್ಯಾಂಕ್ ಭಾರತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಆರ್ಥಿಕ ನೆರವು ನೀಡುತ್ತಿರುವುದು ಇದೇ ಮೊದಲು. ಅವರು ಈ ನೆರವು ಪ್ರಕಟಿಸುವುದಕ್ಕೂ ಮೊದಲೇ ನಮ್ಮ ಕೆಪಿಎಸ್ ಶಾಲೆಗಳ ಯೋಜನೆ, ಕಾರ್ಯಗತಗೊಳಿಸಲು ನಾವು ತೆಗೆದುಕೊಂಡಿರುವ ಕ್ರಮ, ನಮ್ಮ ಬದ್ಧತೆ ಪರಿಶೀಲಿಸಿದ್ದಾರೆ. ಅಲ್ಲದೆ, ನಾವು ಗುಣಮಟ್ಟದ ಶಿಕ್ಷಣ ನೀಡಲು ತೆಗೆದುಕೊಂಡಿರುವ ಕ್ರಮ ಬ್ಯಾಂಕಿನ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ” ಎಂದು ಸಚಿವ ಮಧು ಬಂಗಾರಪ್ಪ ವಿವರಿಸಿದ್ದಾರೆ.

ದ್ವಿಭಾಷಾ ಶಿಕ್ಷಣ, ಮಕ್ಕಳ ಹಾಜರಾತಿ ದಾಖಲಿಸಲು ʻನಿರಂತರʼ ಯೋಜನೆ ಜಾರಿ, ಬೃಹತ್ ಪ್ರಮಾಣದಲ್ಲಿ ಅಂದರೆ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತಿರುವುದು, ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ನಿರಂತರವಾಗಿ ನೀಡುತ್ತಿರುವ ತರಬೇತಿ, ಕಂಪ್ಯೂಟರ್ ಶಿಕ್ಷಣ ನೀಡಲು ವಿಶೇಷವಾಗಿ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ನೇಮಕ, ಎಐ ಕಲಿಸಲು ನಾವು ನಡೆಸಿರುವ ಸಿದ್ಧತೆ, ವೃತ್ತಿ ಮತ್ತು ಕೌಶಲ ಶಿಕ್ಷಣ, ಗ್ರಾಮೀಣ ಮಕ್ಕಳಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಮ್ಮ ಯೋಜನೆ ಎಲ್ಲವೂ ಈ ಮಹತ್ವದ ಒಪ್ಪಂದ ಏರ್ಪಡಲು ಕಾರಣವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಈಗಾಗಲೇ ನಾವು 100 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಅಭಿವೃದ್ಧಿಪಡಿಸಲು ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದೇವೆ. ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸುವ ಶಾಲೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ ಸಚಿವ ಮಧು ಬಂಗಾರಪ್ಪ, ಸ್ಪಷ್ಟ ಮಾನದಂಡಗಳನ್ನು ಇಟ್ಟುಕೊಂಡು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

ಈಗಾಗಲೇ ಶೇ.15 ರಷ್ಟು ಅಂದರೆ 262.5 ಕೋಟಿ ರೂ.ಗಳನ್ನು ಎಡಿಬಿ ಬ್ಯಾಂಕ್ ನೆರವು  ನೀಡಿದೆ. 2026-27 ನೇ ಸಾಲಿನಲ್ಲಿ ಶೇ. 20.5 358.75 ಕೋಟಿ ನೆರವು ನೀಡಲಿದೆ. 2027-28 ನೇ ಸಾಲಿನಲ್ಲಿ ಶೇ.22 ರಷ್ಟು ಎಂದರೆ 385 ಕೋಟಿ ರೂ. ಹಾಗೂ 2028-29 ಸಾಲಿನಲ್ಲಿ ಶೇ. 21.5  ರಷ್ಟು ಎಂದರೆ 376.25 ಕೋಟಿ ರೂ. ಮತ್ತು 2029-30  ನೇ ಸಾಲಿನಲ್ಲಿ ಶೇ. 21 ರಷ್ಟು ಎಂದರೆ 367.5 ಕೋಟಿ ರೂ. ನೆರವು ನೀಡಲಿದೆ ಎಂದು ಸಚಿವ ಮಧು ಬಂಗಾರಪ್ಪ ವಿವರಿಸಿದ್ದಾರೆ.

Key words: ADB, Rs 1,750 crore, development, 500 KPS schools, Important, agreement, signed

The post 500 KPS ಶಾಲೆಗಳ ಅಭಿವೃದ್ಧಿಗೆ 1,750 ಕೋಟಿ ರೂ. ಎಡಿಬಿ ನೆರವು; ಮಹತ್ವದ ಒಪ್ಪಂದಕ್ಕೆ ಸಹಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅರ್ಜುನ ಅವಧೂತಗೆ ನೀಡಿದ್ದ ಗನ್‌ಮ್ಯಾನ್ ಭದ್ರತೆ ವಾಪಸ್

ಮೈಸೂರು,ಆಗಸ್ಟ್,21,2026 (www.justkannada.in):  ಅರ್ಜುನ ಅವಧೂತಗೆ ಭದ್ರತೆ ಮತ್ತು ಆತ್ಮರಕ್ಷಣೆ ದೃಷ್ಟಿಯಿಂದ ಉಚಿತವಾಗಿ...

ಕೆಪಿಎಸ್ ಸಿ ಅಧ್ಯಕ್ಷರ ಅಮಾನತಿಗೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು,ಆಗಸ್ಟ್,21,2026 (www.justkannada.in): ಕೆಪಿಎಸ್ ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನ ಅಮಾನತು...

ಮಂಡ್ಯ ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಹುದ್ದೆಗೆ ತೃತೀಯ ಲಿಂಗಿ ಆಯ್ಕೆ

ಮಂಡ್ಯ,ಆಗಸ್ಟ್, 21,2026 (www.justkannada.in): ತೃತೀಯ ಲಿಂಗಿ ಮೈನಾ ಹೆಚ್. ಅವರು ಮಂಡ್ಯ...

15 ಸಾವಿರ ಶಿಕ್ಷಕರ ನೇಮಕಾತಿ: ಅಭ್ಯರ್ಥಿಗಳ ಗೊಂದಲ ನಿವಾರಣೆಗೆ FAQ ಪ್ರಕಟ

ಬೆಂಗಳೂರು, ಆಗಸ್ಟ್,20,2026 (www.justkannada.in): ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 15 ಸಾವಿರ...