ಕೊಳ್ಳೇಗಾಲ, june.19,2026: ಪಟ್ಟಣದ ಮುಡಿಗುಂಡ ಸಮೀಪದ ಸುವರ್ಣವತಿ ಸೇತುವೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನ್ಯಾಯಾಂಗ ಇಲಾಖೆಯ ಇಬ್ಬರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡರಾತ್ರಿ ನಡೆದಿದೆ.
ಮೃತರನ್ನು ಬೆಳಗಾವಿಯ ಯಮನಪ್ಪ ಭಜಂತ್ರಿ (50) ಹಾಗೂ ಬಾಗೇಪಲ್ಲಿಯ ನಂಜುಂಡಪ್ಪ (55) ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಕೃಷ್ಣಪ್ಪ, ಲೋಕೇಶ್ ಮತ್ತು ಶಂಕ್ರಪ್ಪ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ನಡುಕಲಮೋಳೆ ಗ್ರಾಮದಲ್ಲಿ ಸ್ನೇಹಿತರ ಮನೆಯ ತೊಟ್ಟಿಲು ಶಾಸ್ತ್ರ ಮುಗಿಸಿಕೊಂಡು ಕಾರಿನಲ್ಲಿ ಕೊಳ್ಳೇಗಾಲಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೃತ ಯಮನಪ್ಪ ಭಜಂತ್ರಿ ಮಾಜಿ ಸೈನಿಕರಾಗಿದ್ದು, ಕೊಳ್ಳೇಗಾಲ ನ್ಯಾಯಾಲಯದಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ನಂಜುಂಡಪ್ಪ ಸಿವಿಲ್ ನ್ಯಾಯಾಲಯದ ಮುಖ್ಯ ಶಿರಸ್ತೆದಾರರಾಗಿದ್ದರು. ಗಾಯಾಳುಗಳಲ್ಲಿ ಬೆಂಚ್ ಶಿರಸ್ತೆದಾರ್ ಕೃಷ್ಣಪ್ಪ, ದ್ವಿತೀಯ ದರ್ಜೆ ಸಹಾಯಕ ಲೋಕೇಶ್ ಹಾಗೂ ಡಿ ಗ್ರೂಪ್ ನೌಕರ ಶಂಕ್ರಪ್ಪ ಸೇರಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದು, ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಸುದ್ದಿ ತಿಳಿದು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಪ್ರಭಾವತಿ ಸೇರಿದಂತೆ ನ್ಯಾಯಾಂಗದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ತಾಲ್ಲೂಕು ವಕೀಲರ ಸಂಘವೂ ತೀವ್ರ ಸಂತಾಪ ಸೂಚಿಸಿದೆ.
Key words: Two Court Staff Killed, Three Injured, in Car Crash, Near, Kollegala

SUMMARY:
Two Court Staff Killed, Three Injured in Car Crash Near Kollegal
Kollegal: Two employees of the judicial department were killed and three others seriously injured after a car crashed into the Suvarnavathi bridge near Mudigunda on the outskirts of Kollegal late Thursday night.
The deceased have been identified as Yamanappa Bhajantri (50) of Belagavi and Nanjundappa (55) of Bagepalli. The injured — Krishnappa, Lokesh and Shankrappa — have been admitted to Apollo Hospital in Mysuru.

The five court staff were returning to Kollegal after attending a cradle ceremony at Nadukal Mole village near Santhemarahalli in Chamarajanagar district when the accident occurred.
Police shifted the victims to hospital and registered a case at the Kollegal Town Police Station. Senior judicial officers and members of the Kollegal Bar Association expressed condolences over the tragic incident.

The post ಕೊಳ್ಳೇಗಾಲ: ಕಾರು ಸೇತುವೆಗೆ ಡಿಕ್ಕಿ, ನ್ಯಾಯಾಂಗ ಇಲಾಖೆಯ 2 ಸಿಬ್ಬಂದಿ ಸಾವು, 3 ಗಂಭೀರ ಗಾಯ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




