26
June, 2026

A News 365Times Venture

26
Friday
June, 2026

A News 365Times Venture

ಟೌನ್ ಶಿಪ್ ಹೆಸರಿನಲ್ಲಿ ರೈತರಿಂದ ಭೂಮಿ ಕಸಿದುಕೊಳ್ಳುವುದು ತಪ್ಪು- ಪ್ರತಾಪ್ ಸಿಂಹ

Date:

ಹಾಸನ,ಜೂನ್,26,2026 (www.justkannada.in):  ಬಿಡದಿಯ ಟೌನ್ ಶಿಪ್ ನಿರ್ಮಾಣ ವಿಚಾರ ಜಟಾಪಟಿ ತಾರಕಕ್ಕೇರಿದ್ದು, ಪರ ವಿರೋಧ ಚರ್ಚೆಗಳು ಕೇಳಿ ಬರುತ್ತಿವೆ.  ಈ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಟೌನ್ ಶಿಪ್ ಹೆಸರಿನಲ್ಲಿ ರೈತರಿಂದ ಭೂಮಿ ಕಸಿದುಕೊಳ್ಳುವುದು ತಪ್ಪು. ಸರ್ಕಾರಿ ಭೂಮಿ, ಬಂಜರು ಭೂಮಿ ಇರುವ ಕಡೆ ಟೌನ್ ಶಿಪ್ ಮಾಡಿ ರಿಯಲ್ ಎಸ್ಟೇಟ್ ನವರು ಮಾಡುವ ಕೆಲಸವನ್ನು ನೀವು ಮಾಡಬೇಡಿ ಎಂದರು.

ಹೆಚ್ ಡಿ ಕುಮಾರಸ್ವಾಮಿ ಭೈರಮಂಗಲಕ್ಕೆ ಬನ್ನಿ ಅಲ್ಲೇ ನಿರ್ಧಾರವಾಗಲಿ ಎಂದಿದ್ದಾರೆ.  ರೈತರ ಜೊತೆ ಚರ್ಚೆ ಮಾಡಲು ನಿಮಗೇನು ಸಮಸ್ಯೆ?  ಟೌನ್ ಶಿಪ್ ಬಗ್ಗೆ ವಿಧಾನಸೌಧದಲ್ಲೇ ಚರ್ಚೆ ಮಾಡುವ  ಅಗತ್ಯವೇನಿದೆ.  ರೈತರಿಗೆ ಇಷ್ಟ ಇಲ್ಲದಿದ್ದರೇ ಬಿಡದಿ ಟೌನ್ ಶಿಪ್ ಯೋಜನೆಯನ್ನೇ ಕೈಬಿಡಿ. ನಾನು ಮಾಡೇ ತೀರುತ್ತೇನೆ ಎನ್ನಲು ಇದೇನು ಸರ್ವಾಧಿಕಾರ ಅಲ್ಲ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಪ್ರತಾಪ್ ಸಿಂಹ ಟಾಂಗ್ ಕೊಟ್ಟರು.

Key words:  farmers, land, township, Pratap Simha

The post ಟೌನ್ ಶಿಪ್ ಹೆಸರಿನಲ್ಲಿ ರೈತರಿಂದ ಭೂಮಿ ಕಸಿದುಕೊಳ್ಳುವುದು ತಪ್ಪು- ಪ್ರತಾಪ್ ಸಿಂಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅಯೋಧ್ಯೆ ರಾಮಮಂದಿರ ಕಾಣಿಕೆ ದುರುಪಯೋಗ: ಇಬ್ಬರು ಅರೆಸ್ಟ್

ನವದೆಹಲಿ,ಜೂನ್,26,2026 (www.justkannada.in): ಅಯೋಧ್ಯೆಯ ರಾಮಮಂದಿರದ ಕಾಣಿಕೆ ದುರುಪಯೋಗ ಪ್ರಕರಣದ ತನಿಖೆ ಚುರುಕುಗೊಂಡಿದ್ದು,...

ತೆರಿಗೆ ವಂಚನೆ ಮತ್ತು ತೆರಿಗೆ ಸೋರಿಕೆ ಸಂಪೂರ್ಣ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ- ಸಿಎಂ ಡಿಕೆಶಿ ಸೂಚನೆ

ಬೆಂಗಳೂರು,ಜೂನ್,26,2026 (www.justkannada.in): ತೆರಿಗೆ ವಂಚನೆಗೆ ಯಾವುದೇ ಅವಕಾಶ ನೀಡಬಾರದು. ತೆರಿಗೆ ಸೋರಿಕೆಯನ್ನು...

ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ರೆ ಕಠಿಣ ಕ್ರಮ ಅನಿವಾರ್ಯ-ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜೂನ್,26,2026 (www.justkannada.in): ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ದರೆ ಕಠಿಣ...

ಮುತ್ತತ್ತಿ ಕಾವೇರಿ ನದಿಯಲ್ಲಿ ಮತ್ತೊಂದು ದುರಂತ: ವೈದ್ಯರೊಬ್ಬರ ಶವ ಪತ್ತೆ

ಮಂಡ್ಯ, ಜೂನ್,26,2026 (www.justkannada.in):  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಕಾವೇರಿ...