ಮೈಸೂರು,ಜೂನ್,30,2026 (www.justkannada.in): ರೇಷ್ಮೆ ಕೃಷಿಯು ರೈತ ಸಮುದಾಯದ ಜೀವನೋಪಾಯವಾಗಿದೆ ಎಂದು ರೇಷ್ಮೆ ಇಲಾಖೆ ಆಯುಕ್ತೆ ಶಿಲ್ಪಾನಾಗ್ ತಿಳಿಸಿದರು.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಇಂದು ಹಿರಿಯ ವಿಜ್ಞಾನಿ ಡಾ. ಎಸ್. ಮಹೀಬಾ ಹೇಲೆನ್, ಆಯೋಜಿಸಿದ್ದ ಸುಸ್ಥಿರ ರೇಷ್ಮೆ ಕೃಷಿಗಾಗಿ ಪರಿಸರ ಸ್ನೇಹಿ ಕೀಟಶಾಸ್ತ್ರ : ಆವಿಷ್ಕಾರ, ರಕ್ಷಣೆ ಮತ್ತು ಸಮೃದ್ಧಿ ಎಂಬ ವಿಷಯದ ಮೇಲೆ ಕೀಟಶಾಸ್ತ್ರ (ಎಂಟಮೊಲಾಜಿ) ಸಮ್ಮೇಳನವನ್ನು ಉದ್ಘಾಟಿಸಿ ರೇಷ್ಮೆ ಇಲಾಖೆ ಆಯುಕ್ತೆ ಶಿಲ್ಪಾನಾಗ್ ಮಾತನಾಡಿದರು.
ಕರ್ನಾಟಕವು ರೇಷ್ಮೆ ಉತ್ಪಾದನೆಯಲ್ಲಿ ಮುಖ್ಯ ಪಾತ್ರವಹಿಸಿದೆ. ಕರ್ನಾಟಕ ಸರ್ಕಾರವು ರಾಜ್ಯದಲ್ಲಿ 05 ರೇಷ್ಮೆ ಉದ್ಯಾನವನಗಳನ್ನು ಘೋಷಿಸಿದ್ದು ಪ್ರಸ್ತುತ 1.22 ಲಕ್ಷ ಹೆಕ್ಟೇರ್ ಪ್ರದೇಶದ ಹಿಪ್ಪು ನೇರಳೆ ತೋಟವನ್ನು ಹೊಂದಿದೆ. ರೈತರ ಹಿಪ್ಪುನೇರಳೆ ತೋಟವು ಸಣ್ಣದಾಗಿರುವುದರಿಂದ ಯಾಂತ್ರೀಕರಣ ಕಷ್ಟಕರವಾಗಿದೆ, ಕೋಳಿ ಮತ್ತು ಮೀನಿನ ಆಹಾರಕ್ಕಾಗಿ ಪ್ಯೂಪಾ ತ್ಯಾಜ್ಯ, ಪ್ಯೂಪಾ ಎಣ್ಣೆ ಹೊರತೆಗೆಯುವಿಕೆ, ಬಟ್ಟೆ ಉತ್ಪಾದನೆಯಲ್ಲಿ ನೂಲುವ ರೇಷ್ಮೆ ಮತ್ತು ಉಳಿದ ತ್ಯಾಜ್ಯದಿಂದ ಕಾಂಪೋಸ್ಟ್ ಸೇರಿದಂತೆ ಉಪ ಉತ್ಪನ್ನ ಬಳಕೆ ಮಾಡಬೇಕು ಎಂದು ಒತ್ತಿ ಹೇಳಿದರು.
ಮೈಸೂರು ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ನಿರ್ದೇಶಕರಾದ ಡಾ.ದೀಪ.ಪಿ ಮಾತನಾಡಿ , ಜೈವಿಕ, ಸಸ್ಯಶಾಸ್ತ್ರ ಮತ್ತು ಪರಿಸರ ವಿಧಾನಗಳ ಮೂಲಕ ಕೀಟನಾಶಕಗಳನ್ನು ಕಡಿಮೆ ಮಾಡಲು ಮತ್ತು ಹಿಪ್ಪುನೇರಳೆ, ಏರಿ, ಮುಗಾ, ಟಾಸರ್ ರೇಷ್ಮೆ ಕೃಷಿ ಸುಸ್ಥಿರತೆ ಕಾಪಾಡಲು, ಹಸಿರು ಕೀಟ ನಿರ್ವಹಣೆ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಅಳವಡಿಕೆಯ ಬಗ್ಗೆ ಸಮ್ಮೇಳನ ಗಮನ ಹರಿಸುತ್ತದೆ ಎಂದರು.
ಬೆಂಗಳೂರು ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ (ತಾಂತ್ರಿಕ), ಡಾ. ಎಸ್. ಮಂಥಿರ ಮೂರ್ತಿ ಮಾತನಾಡಿ ಸಿ.ಎಸ್.ಬಿ. ಯು ಸಂಶೋಧನೆ, ಅಭಿವೃದ್ಧಿ ಮತ್ತು ವಿಸ್ತರಣೆ ಮೇಲೆ ಹಾಗೂ ನಾಲ್ಕು ವಿದಧ ರೇಷ್ಮೆಗಳ ಮೇಲೆಯು ಕೆಲಸ ಮಾಡುವಂತೆ ಹೇಳುತ್ತಾದೆ ಮತ್ತು ದೇಶದ ಇತರೆ ಸಂಶೋಧನ ಸಂಸ್ಥೆಗಳೊಂದಿಗೆ ಸಹಯೋಗದ ಕಾರ್ಯ ನಿರ್ವಹಿಸಿ ಸಂಶೋಧನೆಯನ್ನು ಹೆಚ್ಚಸಲು ಪ್ರೋತ್ಸಹಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜೆ. ಜೆಸ್ಟಿನ್ ಕುಮಾರ್, ಸಂಕಲನದ : ರೇಷ್ಮೆ ಹುಳು ಊಜಿ ನೊಣದ ಗ್ರಂಥಸೂಚಿ ಎಂಬ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. 
ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ರೇಷ್ಮೆ ಇಲಾಖೆಯ ಅಧಿಕಾರಿಗಳು, ಕೇಂದ್ರ ರೇಷ್ಮೆ ಮಂಡಳಿಯ ನಿರ್ದೇಶಕರುಗಳಾದ ಡಾ.ಎಸ್, ಗಾಂಧಿದಾಸ್, ಡಾ. ಪ್ರತೀಶ್ ಕುಮಾರ್, ಡಾ. ಮಹೇಶ್ವರಿ, ಡಾ. ಶಕ್ತಿವೇಲ್, ಡಾ. ಪುನೀತಾವತಿ ಮತು ಹಿರಿಯ ವಿಜ್ಞಾನಿಯಾದ ಡಾ.ಸಿ.ಎಂ. ಬಾಬು, ಹಾಗೂ ಕೀಟಶಾಸ್ತ್ರ ವಿಜ್ಞಾನಿಗಳು, ವಿವಿಧ ವಿಶ್ವವಿದ್ಯಾನಿಲಯಗಳಿಂದ ಆಗಮಿಸಿದ್ದ ಪರಿಣಿತ ಕೀಟಶಾಸ್ತ್ರಜ್ಞಾರು, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಮೈಸೂರಿನ, ವಿಜ್ಞಾನಿಗಳು, ಅಧಿಕಾರಿಗಳು, ಯೋಜನೆಯ ಸಹಾಯಕರು, ಸುಮಾರು 250 ಮಂದಿ ಭಾಗವಹಿಸಿದ್ದರು.
Key words: Sericulture, Mysore, Commissioner, Shilpanag
The post ರೇಷ್ಮೆ ಕೃಷಿಯು ರೈತ ಸಮುದಾಯಕ್ಕೆ ಜೀವನೋಪಾಯವಾಗಿದೆ- ಆಯುಕ್ತೆ ಶಿಲ್ಪಾನಾಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




