30
June, 2026

A News 365Times Venture

30
Tuesday
June, 2026

A News 365Times Venture

VTU ಫಲಿತಾಂಶ: ಹೊಸ ದಾಖಲೆಗೆ ಕೌಂಟ್ ಡೌನ್

Date:

ಬೆಂಗಳೂರು, ಜೂನ್,30,2026 (www.justkannada.in): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮತ್ತೊಮ್ಮೆ ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದೆ. ಇಂದು ನಡೆಯುತ್ತಿರುವ ಎಂಜಿನಿಯರಿಂಗ್ 6ನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ಪರೀಕ್ಷೆ ಮುಗಿದ ಕೇವಲ ಐದು ನಿಮಿಷಗಳಲ್ಲೇ ಪ್ರಕಟಿಸಲು ವಿಟಿಯು ಸಿದ್ಧತೆ ನಡೆಸಿದೆ.

ಇಂದು ಸಂಜೆ 5.30ಕ್ಕೆ 6ನೇ ಸೆಮಿಸ್ಟರ್ ಪರೀಕ್ಷೆ ಮುಕ್ತಾಯಗೊಳ್ಳಲಿದ್ದು, ಸಂಜೆ 5.35ಕ್ಕೆ ಫಲಿತಾಂಶವನ್ನು ಪ್ರಕಟಿಸುವ ಗುರಿಯನ್ನು ವಿಟಿಯು ಹೊಂದಿದೆ. ಈ ಪರೀಕ್ಷೆಗೆ ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 60 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಪರೀಕ್ಷಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆ, ಡಿಜಿಟಲ್ ಮೌಲ್ಯಮಾಪನ ಹಾಗೂ ಸ್ವಯಂಚಾಲಿತ ಫಲಿತಾಂಶ ಸಂಸ್ಕರಣಾ ವ್ಯವಸ್ಥೆಯ ಮೂಲಕ ಪರೀಕ್ಷೆ ಮುಗಿದ ಕೆಲವೇ ನಿಮಿಷಗಳಲ್ಲಿ ಫಲಿತಾಂಶ ಪ್ರಕಟಿಸುವ ಅಪರೂಪದ ಸಾಧನೆಯನ್ನು ವಿಟಿಯು ಸಾಧಿಸಲು ಮುಂದಾಗಿದೆ.

ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯವು ಕಳೆದ ಕೆಲವು ವರ್ಷಗಳಿಂದ ಪರೀಕ್ಷಾ ಹಾಗೂ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದೆ. ಅದರ ಭಾಗವಾಗಿ ವೇಗವಾಗಿ ಮತ್ತು ಪಾರದರ್ಶಕವಾಗಿ ಫಲಿತಾಂಶ ಪ್ರಕಟಿಸುವ ವ್ಯವಸ್ಥೆ ದೇಶದ ಇತರೆ ವಿಶ್ವವಿದ್ಯಾಲಯಗಳ ಗಮನ ಸೆಳೆದಿದೆ.

ಪರೀಕ್ಷೆ ಮುಗಿದ ಐದು ನಿಮಿಷಗಳಲ್ಲೇ ಫಲಿತಾಂಶ ಪ್ರಕಟವಾದರೆ, ಇದು ವಿಟಿಯು ಇತಿಹಾಸದಲ್ಲಷ್ಟೇ ಅಲ್ಲದೆ ದೇಶದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲೂ ಮಹತ್ವದ ಮೈಲಿಗಲ್ಲಾಗಲಿದೆ. ಈ ಹೊಸ ದಾಖಲೆಗೆ ಇದೀಗ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ವಲಯದವರು ಕ್ಷಣಗಣನೆ ನಡೆಸುತ್ತಿದ್ದಾರೆ.

ENGLISH SUMMARY…

VTU Set to Create New Record with 6th Semester Results in Just 5 Minutes

Bengaluru, June 30: Visvesvaraya Technological University (VTU) is set to create a new record by announcing the Engineering 6th Semester examination results just five minutes after the exam concludes.

The examination will end at 5:30 PM, and the results are scheduled to be released at 5:35 PM. Around 60,000 students appeared for the examination across various engineering colleges.

Under the leadership of Vice-Chancellor Prof. Vidyashankar, VTU has introduced advanced digital evaluation and automated result-processing systems, enabling one of the fastest result announcements in the country.

The university is now counting down to what could become another significant milestone in technical education.#VTU #EngineeringResults #VTUResults #ProfVidyashankar #EducationNews #KarnatakaNews

Key words: VTU, Create, New Record, 6th Semester, Results , Just 5 Minutes

 

The post VTU ಫಲಿತಾಂಶ: ಹೊಸ ದಾಖಲೆಗೆ ಕೌಂಟ್ ಡೌನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

HDK ನನ್ನ ಬಳಿ ಸಹಾಯ ಪಡೆದಿದ್ದಾರೆ: ಬೇಕಿದ್ರೆ ಬಹಿರಂಗ ಚರ್ಚೆಗೆ ಬರಲಿ- ಶಾಸಕ ಕದಲೂರು ಉದಯ್

ಮಂಡ್ಯ,ಜೂನ್,30,2026 (www.justkannada.in):  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನನ್ನ ಬಳಿ...

ಮತಪಟ್ಟಿಯಲ್ಲಿ ಹೆಸರು ಡಿಲಿಟ್ ಆದ್ರೆ ಗ್ಯಾರಂಟಿಗಳು ಸಿಗಲ್ಲ- SIR ಪ್ರಕ್ರಿಯೆ ಬಳಿಕ ಸಿಎಂ ಡಿಕೆಶಿ ಹೇಳಿಕೆ

ಬೆಂಗಳೂರು,ಜೂನ್,30,2026 (www.justkannada.in):  ಮತಪಟ್ಟಿಯಲ್ಲಿ ಹೆಸರು ಡಿಲಿಟ್ ಆದರೆ ಗ್ಯಾರಂಟಿಗಳು ಸಿಗಲ್ಲ ಎಂದು...

ಪ್ರತಿಯೊಬ್ಬರೂ ಎನ್ಯುಮರೇಶನ್ ಅರ್ಜಿ ತುಂಬಿ, ಮತದಾನದ ಹಕ್ಕು ಉಳಿಸಿಕೊಳ್ಳಿ: ಸಿಎಂ ಡಿ.ಕೆ ಶಿವಕುಮಾರ್ ಕರೆ

ಬೆಂಗಳೂರು, ಜೂನ್, 29,2026 (www.justkannada.in): ಜೂನ್ 30ರಿಂದ ರಾಜ್ಯದಲ್ಲಿ ವಿಶೇಷ ಮತದಾರರ...

SIR ಪ್ರಕ್ರಿಯೆ: ಪ.ಬಂಗಾಳದಲ್ಲಿ ಆದಂತೆ ರಾಜ್ಯದಲ್ಲಿ ಆಗಬಾರದು- ಡಿಸಿಎಂ ಪರಮೇಶ್ವರ್

ಬೆಂಗಳೂರು,ಜೂನ್,29,2026 (www.justkannada.in):   ನಾಳೆಯಿಂದ  ರಾಜ್ಯದಲ್ಲಿ ಎಸ್ ಐಆರ್ ಪ್ರಕ್ರಿಯೆ ಆರಂಭಗೊಳ್ಳುವ ವಿಚಾರಕ್ಕೆ...