ಮೈಸೂರು, ಜುಲೈ,2,2026 (www.justkannada.in): ಅಬಕಾರಿ ಇಲಾಖೆಯು ಅವಧಿ ಮೀರಿದ ಹಾಗೂ ದೀರ್ಘಕಾಲದಿಂದ ಮಾರಾಟವಾಗದೆ ಉಳಿದಿದ್ದ ಮದ್ಯವನ್ನು ನಾಶಪಡಿಸುವ ಕಾರ್ಯಾಚರಣೆಯನ್ನು ಗುರುವಾರ ನಡೆಸಿತು.
ಅಬಕಾರಿ ಉಪ ಆಯುಕ್ತ ವಿವೇಕ್ ಜೆ. ಅವರ ಆದೇಶದ ಮೇರೆಗೆ, ಅಬಕಾರಿ ಉಪ ಅಧೀಕ್ಷಕ ವಿಕ್ರಮ್ ಎಲ್.ಬಿ., ಕೆಎಸ್‌ಬಿಸಿಎಲ್ ಲಿಕ್ಕರ್ ಡಿಪೋ ಹಾಗೂ ಮೈಸೂರು ಉಪ ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ಮೈಸೂರು ನಗರದ ಕೂರ್ಗಳ್ಳಿಯಲ್ಲಿರುವ ಕೆಎಸ್ ಬಿಸಿಎಲ್ ಲಿಕ್ಕರ್ ಡಿಪೋ ಮೈಸೂರು-1 ಮತ್ತು ಮೈಸೂರು-2ರಲ್ಲಿ ಈ ಪ್ರಕ್ರಿಯೆ ಕೈಗೊಳ್ಳಲಾಯಿತು.
ಕಾರ್ಯಾಚರಣೆಯಲ್ಲಿ ವಿವಿಧ ಬ್ರಾಂಡ್ ಗಳ ಅವಧಿ ಮೀರಿದ 929 ರೆಡಿ ಪ್ಯಾಕ್ ಗಳ (8,870 ಲೀಟರ್) ಬಿಯರ್ ಹಾಗೂ ಬಹುದಿನಗಳಿಂದ ಮಾರಾಟವಾಗದೇ ಉಳಿದಿದ್ದ 138 ರೆಡಿ ಪ್ಯಾಕ್ ಗಳ (1,216 ಲೀಟರ್) ವೈನ್ ನಾಶಪಡಿಸಲಾಯಿತು. ನಾಶಪಡಿಸಲಾದ ಮದ್ಯದ ಒಟ್ಟು ಮೌಲ್ಯ ಸುಮಾರು ₹24 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಕೆಎಸ್‌ಬಿಸಿಎಲ್ ಮೈಸೂರು-1 ಡಿಪೋದ ಮಳಿಗೆ ವ್ಯವಸ್ಥಾಪಕ ಡಿ.ಕೆ. ವೆಂಕಟೇಶ್, ಮೈಸೂರು-2 ಡಿಪೋದ ಮಳಿಗೆ ವ್ಯವಸ್ಥಾಪಕ ಯೋಗೇಶ್ ಎಂ.ಆರ್., ಅಬಕಾರಿ ನಿರೀಕ್ಷಕರಾದ ನಂದಿತ ಹಳದನಕರ್ ಹಾಗೂ ರಾಧಾ ಎಸ್.ಪಿ., ಅಬಕಾರಿ ಉಪ ನಿರೀಕ್ಷಕ ಆನಂದ್ ಸೇರಿದಂತೆ ಅಬಕಾರಿ ಇಲಾಖೆ ಮತ್ತು ಡಿಪೋ ಸಿಬ್ಬಂದಿ ಉಪಸ್ಥಿತರಿದ್ದರು.
ಅಧಿಕಾರಿಗಳ ಸಮ್ಮುಖದಲ್ಲಿ ನಿಯಮಾನುಸಾರ ಮದ್ಯ ನಾಶಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.
ENGLISH SUMMARY…
Mysuru: Expired Beer and Wine Worth ₹24 Lakh Destroyed
Mysuru, July 2: The Excise Department destroyed expired beer and unsold wine worth around ₹24 lakh at the KSBCL Liquor Depots (Mysuru-1 and Mysuru-2) in Koorgalli on Thursday.
The operation was carried out under the directions of Excise Deputy Commissioner Vivek J. and led by Excise Deputy Superintendent Vikram L.B. A total of 929 cases (8,870 litres) of expired beer and 138 cases (1,216 litres) of wine that remained unsold for a long period were destroyed as per departmental procedures.
KSBCL depot managers, excise inspectors, officials, and staff were present during the disposal process.
Key words: Mysore, Expired, beer, wine, worth Rs. 24 lakh, destroyed
The post ಮೈಸೂರು: 24 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಬಿಯರ್ ಹಾಗೂ ವೈನ್ ನಾಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




