9
July, 2026

A News 365Times Venture

9
Thursday
July, 2026

A News 365Times Venture

ಕೊಡಗು ಜಿಲ್ಲೆಯ ಜ್ವಲಂತ ಭೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿ- ಸಂಸದ ಯದುವೀರ್

Date:

ಮೈಸೂರು,ಜುಲೈ,7,2026 (www.justkannada.in): ಕೊಡಗು ಜಿಲ್ಲೆಯ ಜ್ವಲಂತ ಭೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಂಸದ ಯದುವೀರ್, ಕೊಡಗು ಜಿಲ್ಲೆಯ ದಶಕಗಳ ಜ್ವಲಂತ ಸಮಸ್ಯೆಯಾದ ‘ಸಿ ಅಂಡ್ ಡಿ’ (ಅ & ಆ) ವರ್ಗದ ಜಮೀನುಗಳು, ಸಿಸಿ ((Cardamom Cultivation), ಪೈಸಾರಿ ಮತ್ತು ಜಮ್ಮಾ ಭೂಮಿಗಳ ಹಕ್ಕು ಹಸ್ತಾಂತರ ಹಾಗೂ ಸಕ್ರಮ ಪ್ರಕ್ರಿಯೆಯು ಪ್ರಸ್ತುತ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಈ ಕುರಿತು ರಾಜ್ಯ ಸರ್ಕಾರವು ತಕ್ಷಣವೇ ದಿಟ್ಟ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು  ಒತ್ತಾಯಿಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಯಾವುದೇ ರೀತಿಯ ಸಹಕಾರ, ಅರಣ್ಯ ಕಾಯ್ದೆಗಳ ತಿದ್ದುಪಡಿ ಅಥವಾ ವಿಶೇಷ ಅನುಮೋದನೆಗಳ ಅಗತ್ಯವಿದ್ದಲ್ಲಿ, ತಾವು ವೈಯಕ್ತಿಕವಾಗಿ ಮುತುವರ್ಜಿ ವಹಿಸಿ ಕೇಂದ್ರದಿಂದ ಸಂಪೂರ್ಣ ಸಹಕಾರ ಕೊಡಿಸಲು ಸಿದ್ಧರಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

Key words: government, land issues,  Kodagu district, MP Yaduveer

The post ಕೊಡಗು ಜಿಲ್ಲೆಯ ಜ್ವಲಂತ ಭೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿ- ಸಂಸದ ಯದುವೀರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಯಶಸ್ಸಿಗೆ ಶಿಸ್ತು ಮತ್ತು ಅಣುಕು ಪರೀಕ್ಷೆಗಳು ಅತ್ಯಗತ್ಯ: ನಿತೀಶ್ ಪಾಟೀಲ್

ಮೈಸೂರು, ಜುಲೈ,7,2026 (www.justkannada.in): ಅಭ್ಯರ್ಥಿಗಳು ಮನೆಯಲ್ಲಿ ಎಷ್ಟೇ ಓದಿದರೂ ಪರೀಕ್ಷಾ ಕೇಂದ್ರದ...

ರಾಜಕೀಯ ಪ್ರೇರಿತ ದೂರುಗಳಿಗೆ ಚು.ಆಯೋಗ ಬೆಲೆ ಕೊಡಲ್ಲ-ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಜುಲೈ,7,2026 (www.justkannada.in): ರಾಜ್ಯ ಸರ್ಕಾರ ಎಸ್ ಐಆರ್ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ...

ಬರ ಪರಿಸ್ಥಿತಿ ನಿರ್ವಹಣೆ ನಿರ್ಲಕ್ಷ್ಯ ತೋರಿಸಿದ್ರೆ ಕ್ರಮ- ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

ಕಲಬುರುಗಿ,ಜುಲೈ,7,2026 (www.justkannada.in):  ಬರ ಪರಿಸ್ಥಿತಿ ನಿರ್ವಹಣೆ ನಿರ್ಲಕ್ಷ್ಯ ತೋರಿಸಿದರೇ ಕ್ರಮ ಕೈಗೊಳ್ಳಲಾಗುತ್ತದೆ...

SIR : ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ, ಅರಿವು ಮೂಡಿಸಿ- ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚನೆ

ಮೈಸೂರು, ಜುಲೈ 7,2026 (www.justkannada.in):  ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರ...