ಬೆಂಗಳೂರು,ಜುಲೈ,24,2026 (www.justkannada.in): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಪ್ರಧಾನ್ ಈವರೆಗೂ ಮಾತನಾಡಿಲ್ಲ. ಯಾರಾದ್ರೂ ಒಬ್ಬರು ಹೊಣೆ ಹೊರಬೇಕಲ್ವಾ..? ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ದೇಶಾದ್ಯಂತ ಸಿಜೆಪಿಯಿಂದ ಹೋರಾಟಕ್ಕೆ ಕರೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಇದನ್ನು ಪ್ರತಿಷ್ಟೆಯಾಗಿ ತೆಗೆದುಕೊಳ್ಳುವ ಅಗತ್ಯ ಇರಲಿಲ್ಲ. ಲೋಪದೋಷಗಳು ಇರುತ್ತವೆ ಅದನ್ನು ಸರಿಪಡಿಸಬೇಕು ಎಂದರು.
ಧರ್ಮೇಂದ್ರ ಪ್ರಧಾನ್ ಈವರೆಗೂ ಮಾತಾಡಿಲ್ಲ ಪ್ರಕರಣದ ಹೊಣೆಯನ್ನು ಯಾರಾದರೂ ಒಬ್ಬರು ಹೊರಬೇಕಲ್ವೇ? ಇಂತಹವರು ತಪ್ಪು ಮಾಡಿದ್ದರೆಂದು ಯಾರಾದರೂ ಹೇಳಬೇಕಲ್ವಾ? ಪ್ರಧಾನಿ ಮೋದಿ ಈ ಬಗ್ಗೆ ಕ್ರಮ ಜರುಗಿಸಬೇಕು. ಈ ವಿಚಾರವನ್ನು ಇಷ್ಟು ದೊಡ್ಡಮಟ್ಟಕ್ಕೆ ಬೆಳೆಯಲು ಬಿಡಬಾರದಿತ್ತು ಎಂದರು.
Key words: NEET ,question, paper leak, Minister, Satish Jarakiholi
The post ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಯಾರಾದ್ರೂ ಒಬ್ಬರು ಹೊಣೆ ಹೊರಬೇಕಲ್ವಾ..? ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




