26
September, 2026

A News 365Times Venture

26
Saturday
September, 2026

A News 365Times Venture

ಸಿಎಂ ಡಿಕೆಶಿ ಭೇಟಿ: ಅಸಮಾಧಾನದಿಂದಲೇ ಹೊರ ನಡೆದ ಬಸವರಾಜ ಹೊರಟ್ಟಿ?

Date:

ಬೆಂಗಳೂರು,ಆಗಸ್ಟ್,7,2026 (www.justkannada.in): ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸೂಚನೆ ಸಂಬಂಧ ಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಇಂದು ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿದರು.

ಕಳೆದ ಎರಡು ದಿನಗಳ ಹಿಂದೆ ಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ಸಭಾಪತಿ ಸ್ಥಾನಕ್ಕೆ ಬೇರೆಯವರ ಹೆಸರು ಘೋಷಿಸಿದ್ದು ಹೀಗಾಗಿ ರಾಜೀನಾಮೆ ನೀಡುವಂತೆ  ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಕರೆಮಾಡಿ ಸೂಚಿಸಿದ್ದರು.  ನಂತರ ಹೊರಟ್ಟಿ ಅವರು ಅಸಮಾಧಾನ ಹೊರ ಹಾಕಿದ್ದರು.

ಇದೀಗ ಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದಾರೆ. ತಮ್ಮ ಸ್ಥಾನಕ್ಕೆ ಆಗಸ್ಟ್​​ 14ರಂದು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಇನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ಬಸವರಾಜ ಹೊರಟ್ಟಿ ಅವರು ಅಸಮಾಧಾನದಿಂದಲೇ ಸಿಎಂ ನಿವಾಸದಿಂದ ಹೊರ  ನಡೆದರು ಎನ್ನಲಾಗಿದೆ. ಮನೆ ಬಾಗಿಲವರೆಗೂ ಸಿಎಂ ಡಿಕೆ ಶಿವಕುಮಾರ್ ಬಂದು ಬೀಳ್ಕೊಟ್ಟಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಭೇಟಿ ವಿಚಾರ  ಕುರಿತು ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ ಮೊನ್ನೆ ನಾನು ಏನು ಹೇಳಿದ್ದೇನೋ ಅದಕ್ಕೆ ಬದ್ಧನಿದ್ದೇನೆ. ಅವರು ಅವಿಶ್ವಾಸ ನಿರ್ಣಯ ಮಂಡಿಸಿದರೆ ಮಂಡಿಸಲಿ. ಕಾನೂನು ಪ್ರಕಾರ ಏನು ಬೇಕಾದರೂ ಮಾಡಲಿ ಎಂದು ಹೇಳಿದರು.

Key words: Basavaraja Horatti, visit CM DK Shivakumar, Residence

The post ಸಿಎಂ ಡಿಕೆಶಿ ಭೇಟಿ: ಅಸಮಾಧಾನದಿಂದಲೇ ಹೊರ ನಡೆದ ಬಸವರಾಜ ಹೊರಟ್ಟಿ? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಎಸ್‌ಬಿಐ ಚೀಫ್ ಮ್ಯಾನೇಜರ್‌ಗೆ 1 ವರ್ಷ ಕಠಿಣ ಕಾರಾಗೃಹ, ₹50 ಸಾವಿರ ದಂಡ

  ಮೈಸೂರು, ಸೆ.26, 2026: ಮೃತ ಗ್ರಾಹಕರ ಖಾತೆ ಹಾಗೂ ಬ್ಯಾಂಕ್‌ನ ಆಂತರಿಕ...

ನಂದಿನಿ ಹಾಲಿನ ದರ ಏರಿಕೆ ವಿಚಾರ: ಇಂದು ಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಅಂತಿಮ ನಿರ್ಧಾರ

ಬೆಂಗಳೂರು,ಸೆಪ್ಟಂಬರ್‌,26,2026 (www.justkannada.in) ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ೧೦ ರೂ ಹೆಚ್ಚಳ...

ರಾಜ್ಯಪಾಲರಿಂದ ಪ್ರೊ. ಜಿ. ಹೇಮಂತ ಕುಮಾರ್ ಅವರ ಎರಡು ಕೃತಿಗಳ ಲೋಕಾರ್ಪಣೆ

  ಮೈಸೂರು,SEP.25,2026: ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಜಿ. ಹೇಮಂತ ಕುಮಾರ್...

CPC ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆಗಳು ಆರಂಭ.

​ಬೆಂಗಳೂರು, ಸೆಪ್ಟೆಂಬರ್, 25,2026 (www.justkannada.in):  ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು ಸಿವಿಲ್...