ಬೆಂಗಳೂರು,ಸೆಪ್ಟಂಬರ್,15,2026 (www.justkannada.in): ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧ ಪ್ರತಿಕ್ರಿಯಿಸುವ ವೇಳೆ ಮಾಜಿ ಸಚಿವ ಕೆಎನ್ ರಾಜಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಮತ್ತು ಡಿಸಿಎಂ ಪರಮೇಶ್ವರ್ ಭೇಟಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ಮುಡಾ ದೂರುಕೊಟ್ಟಿದ್ದು ಯಾರು ಕಾಂಗ್ರೆಸ್ ನವರೇ ಅಲ್ವಾ? ಕಾಂಗ್ರೆಸ್ ಒಳಗಿನವರೇ ದೂರು ಕೊಟ್ಟಿರಲಿಲ್ವಾ? ಅಧಿಕಾರ ಅನ್ನೋದು ಪಾಯ್ಸನ್ ಗಿಡದ ಸುತ್ತವಿರೋ ಕಳೆ ರೀತಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
100 ದಿನದ ಸಂಭ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಆಹ್ವಾನಿಸದ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ಬಿಕೆ ಹರಿಪ್ರಸಾದ್ ಗೆ ಆಹ್ವಾನ ಕೊಡಬೇಕಿತ್ತು. ಇದನ್ನು ಹೈಕಮಾಂಡ್ ಗಮನಕ್ಕೆ ತಂದು ಸರಿ ಮಾಡಬೇಕು. ಕಾಲಕ್ರಮೇಣ ಅದೆಲ್ಲಾ ಸರಿ ಹೋಗುತ್ತೆ ಎಂದರು.




