30
September, 2026

A News 365Times Venture

30
Wednesday
September, 2026

A News 365Times Venture

ಬಾಕಿ ಬಿಲ್​​ ಪಾವತಿ: ಗಡುವು ತಪ್ಪಿದ್ರೆ ಕಮಿಷನ್​​ ದಂಧೆ ದಾಖಲೆ ಬಿಡುಗಡೆ- ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ಎಚ್ಚರಿಕೆ

Date:

ಬೆಂಗಳೂರು, ಸೆಪ್ಟೆಂಬರ್​ ,30,2026 (www.justkannada.in): ಬಾಕಿ ಹಣ ಬಿಡುಗಡೆಗೆ ಕೋರಿ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ  ರಾಜ್ಯ ಗುತ್ತಿಗೆದಾರರ ಸಂಘ  ಬೆನ್ನಲ್ಲೆ ಇದೀಗ ಸರ್ಕಾರಕ್ಕೊಂದು ವಾರ್ನಿಂಗ್ ನೀಡಿದೆ.

ನವೆಂಬರ್ ಒಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಕಮಿಷನ್ ದಂಧೆಯ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ರಾಜ್ಯ ಗುತ್ತಿಗೆದಾರರ ಸಂಘ  ಖಡಕ್ ಎಚ್ಚರಿಕೆ ನೀಡಿದೆ.  ಈ ಕುರಿತು ಮಾತನಾಡಿರುವ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್,  ನಮ್ಮ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದಾರೆ.  ನಾವು ಕೆಲಸ ಮಾಡಿರುವ ಹಣವನ್ನು ಮೊದಲು ಕೊಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್​​ ಸರ್ಕಾರದಲ್ಲಿ ಕಳೆದ ಸರ್ಕಾರಕ್ಕಿಂತಲೂ ಕಮಿಷನ್ ಜಾಸ್ತಿ ಇದ್ದು, ಅದು ಎಷ್ಟು ಪರ್ಸೆಂಟೇಜ್ ಅಂತ ಕೇಳಬೇಡಿ. ಇತ್ತೀಚಿಗೆ ಎಂಎಲ್‌ಎಗಳು ಕೂಡ ಕಾಂಟ್ರ್ಯಾಕ್ಟ್ ವಿಚಾರದಲ್ಲಿ ತಲೆತೂರಿಸುತ್ತಿದ್ದಾರೆ. ಇದರಿಂದ ನಿಜವಾದ ಕಾಂಟ್ರ್ಯಾಕ್ಟರ್‌ ಗಳು ಮಾಯ ಆಗುತ್ತಿದ್ದಾರೆ. 4 ವರ್ಷದಿಂದ ಹಣ ಬಾರದೆ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಕೆಂಪಣ್ಣರನ್ನು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಆದರೆ ಸಿದ್ದರಾಮಯ್ಯ 3 ವರ್ಷ ಸಿಎಂ ಆಗಿ ನಮಗೆ ಯಾವುದೇ ನೆರವು ನೀಡಿಲ್ಲ. ನಂತರ ಡಿ.ಕೆ.ಶಿವಕುಮಾರ್ ಪ್ರತಿಭಟನಾ  ಸ್ಥಳಕ್ಕೆ ಬಂದು ಭರವಸೆ ನೀಡಿದ್ದರು. ಬಳಿಕ ಡಿಕೆ ಶಿವಕುಮಾರ್  ಅಧಿಕಾರಕ್ಕೆ ಬಂದರು. ಅವರನ್ನು ಗುತ್ತಿಗೆದಾರರು ಭೇಟಿಯಾದಾಗ ಜೂನ್ 30ಕ್ಕೆ ಹಣ ಬಿಡುಗಡೆ ಮಾಡ್ತೇವೆ ಎಂದಿದ್ದರು. ಸುಮಾರು 8 ಇಲಾಖೆಯಲ್ಲಿ ಸರಿಸುಮಾರು 38 ಸಾವಿರ ಕೋಟಿ ಹಣ ಬಾಕಿ ಇದೆ ಎಂದು ಮಂಜುನಾಥ್​​ ತಿಳಿಸಿದ್ದಾರೆ.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರೀತಿಗೆ ನಿರಾಕರಣೆ: ಪೆಟ್ರೋಲ್ ಸುರಿದು, ಯುವತಿ ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡ ಯುವಕ

ಮೈಸೂರು, ಸೆಪ್ಟಂಬರ್,29, 2026 (www.justkannada.in):  ಪ್ರೀತಿಸುವಂತೆ ನಿರಂತರವಾಗಿ ದುಂಬಾಲು ಬಿದ್ದಿದ್ದ ಯುವಕನೊಬ್ಬ...

ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ- ಸಿಎಂ ಡಿಕೆಶಿಗೆ ಬಿವೈ ವಿಜಯೇಂದ್ರ ಆಗ್ರಹ

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ಆರ್ಥಿಕ ಇಲಾಖೆ ನೀಡಿರುವ ಪತ್ರ ರಾಜ್ಯದ ಹಣಕಾಸು ಪರಿಸ್ಥಿತಿ...

ನೈಸ್ ದಾರಿ ತಪ್ಪುವುದಕ್ಕೆ  HDK ಅಂಡ್ ಫ್ಯಾಮಿಲಿ ಕಾರಣ-ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆ ಅಕ್ರಮ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್...

ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ: ಮೈಸೂರಿಗೆ ಬಿ. ಜಯಂತ ಕುಮಾರ್

ಬೆಂಗಳೂರು, ಸೆಪ್ಟಂಬರ್,29, 2026 (www.justkannada.in):  ಕರ್ನಾಟಕ ಹೈಕೋರ್ಟ್ ಜಿಲ್ಲಾ ನ್ಯಾಯಾಧೀಶರ ವೃಂದದ...