29
September, 2026

A News 365Times Venture

29
Tuesday
September, 2026

A News 365Times Venture

ಪರಿಸರ ಸಂರಕ್ಷಣೆಗೆ ರಾಷ್ಟ್ರೀಯ ಬದ್ಧತೆ ಅಗತ್ಯ: ಭೂಪೇಂದ್ರ ಯಾದವ್

Date:

 

ನವದೆಹಲಿ, ಸೆ.29, 2026: ಅರಣ್ಯ, ವನ್ಯಜೀವಿ, ಜೀವವೈವಿಧ್ಯ ಮತ್ತು ನೈಸರ್ಗಿಕ ಪರಂಪರೆಯ ರಕ್ಷಣೆ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ರಾಷ್ಟ್ರೀಯ ಬದ್ಧತೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ 4ನೇ Eco Warrior Awards 2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯಗಳು ನೀರಿನ ಸಂರಕ್ಷಣೆ, ಹವಾಮಾನ ನಿಯಂತ್ರಣ, ಮಣ್ಣಿನ ರಕ್ಷಣೆ, ಜೀವವೈವಿಧ್ಯ ಹಾಗೂ ಜನರ ಜೀವನೋಪಾಯಕ್ಕೆ ಪ್ರಮುಖ ಆಧಾರವಾಗಿವೆ ಎಂದರು. ಅರಣ್ಯ, ವನ್ಯಜೀವಿ, ಕೃಷಿ, ನೀರು ಮತ್ತು ಸ್ಥಳೀಯ ಸಮುದಾಯಗಳನ್ನು ಒಳಗೊಂಡ ಸಮಗ್ರ ಸಂರಕ್ಷಣಾ ವಿಧಾನಕ್ಕೆ ಒತ್ತು ನೀಡಿದರು.

ವೀರಪ್ಪನ್ ವಿರುದ್ಧ ಹೋರಾಡಿದ್ದ ಬಿ.ಕೆ. ಸಿಂಗ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

ಕರ್ನಾಟಕ ಕೇಡರ್‌ನ 1976ರ ಬ್ಯಾಚ್‌ನ ನಿವೃತ್ತ ಐಎಫ್‌ಎಸ್ ಅಧಿಕಾರಿ ಹಾಗೂ ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜ್ ಕಿಶೋರ್ ಸಿಂಗ್ (ಬಿ.ಕೆ. ಸಿಂಗ್) ಅವರಿಗೆ Lifetime Achievement Award ನೀಡಿ ಗೌರವಿಸಲಾಯಿತು. ಕುಖ್ಯಾತ ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ದೇಶದ ವಿವಿಧ ಭಾಗಗಳಿಂದ 80ಕ್ಕೂ ಹೆಚ್ಚು ನಾಮನಿರ್ದೇಶನಗಳ ಪರಿಶೀಲನೆಯ ಬಳಿಕ ಸಂರಕ್ಷಣಾ ಕ್ಷೇತ್ರದ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಈ ಬಾರಿ ವೈಯಕ್ತಿಕ ಪ್ರಶಸ್ತಿ ವಿಭಾಗಗಳಲ್ಲಿ ತಲಾ ಇಬ್ಬರು ವಿಜೇತರನ್ನು ಆಯ್ಕೆ ಮಾಡಲಾಗಿದೆ.

Protected Area Management, Wildlife Protection, Environment Conservation, Community Connect, Best Use of Technology, Special Jury, Special Projects ಮತ್ತು Lifetime Achievement ಸೇರಿದಂತೆ ಎಂಟು ವಿಭಾಗಗಳಲ್ಲಿ ಪ್ರಶಸ್ತಿಗಳು ಪ್ರದಾನವಾದವು.

Project Elephant ಹಾಗೂ ರಾಜಸ್ಥಾನದ Great Indian Bustard Conservation Project‌ಗೂ ವಿಶೇಷ ಯೋಜನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ, ಅರಣ್ಯ ನಿರ್ವಹಣೆಯಲ್ಲಿ ಕಾರ್ಪೊರೇಟ್‌ಗಳ ಪಾತ್ರ ಹಾಗೂ ಸುಸ್ಥಿರ ಅಭಿವೃದ್ಧಿ–ಪರಿಸರ ನೈತಿಕತೆ ಕುರಿತು ತಜ್ಞರ ಸಂವಾದಗಳು ನಡೆದವು. IFSA Souvenir 2026 ಕೂಡ ಬಿಡುಗಡೆ ಮಾಡಲಾಯಿತು.

KEY WORDS:

B.K. Singh, Lifetime Achievement Award, Veerappan nemesis, Wildlife Conservation Awards 2026, Forest Conservation, India, Karnataka, IFS officer Lifetime Achievement Award, forest officer

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

‘ಪ್ರಗತಿ 50’ ಯೋಜನೆಗೆ ಬೆಂಗಳೂರು, ಮೈಸೂರು ಆಯ್ಕೆ ಹೆಮ್ಮೆಯ ವಿಷಯ-ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು, ಸೆಪ್ಟೆಂಬರ್, 29,2026 (www.justkannada.in): ದೇಶದ ಆಯ್ದ 50 ನಗರಗಳನ್ನು ಮಾದರಿ...

ಉಪ್ಪು ಸೇವನೆ ಕುರಿತು ಮಾರ್ಗಸೂಚಿ: ನಿಯಮ ಪಾಲಿಸಲು ಸಚಿವ ಯು.ಟಿ ಖಾದರ್ ಮನವಿ

ಬೆಂಗಳೂರು, ಸೆಪ್ಟಂಬರ್, 29,2026 (www.justkannada.in): ಉಪ್ಪು ಸೇವನೆ ಕುರಿತು ಹೊಸ ಮಾರ್ಗಸೂಚಿ...

ಅ.5ರೊಳಗೆ ಯುಜಿ ಕೇಬಲ್ ಕಾಮಗಾರಿ ಪೂರ್ಣಗೊಳಿಸಿ- ರಮೇಶ್ ಬಂಡಿಸಿದ್ದೇಗೌಡ ಕಟ್ಟುನಿಟ್ಟಿನ ಸೂಚನೆ

ಮೈಸೂರು, ಸೆಪ್ಟಂಬರ್,29, 2026 (www.justkannada.in):  ನಗರದಲ್ಲಿ ಚಾಲ್ತಿಯಲ್ಲಿರುವ ಭೂಗತ ವಿದ್ಯುತ್ ಕೇಬಲ್...

ನೈಸ್ ಯೋಜನೆ:  AK-DK ಭಾಂದವ್ಯದಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ- ಚರ್ಚೆಗೆ ಸಿಎಂಗೆ  ಹೆಚ್ ಡಿಕೆ ಪಂಥಾಹ್ವಾನ

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ...