ಮೈಸೂರು, ಅ.01, 2026: ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH)ಯಲ್ಲಿ ಬೋಧಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024ರಲ್ಲಿ ಪ್ರಕಟಿಸಿದ್ದ ಜಾಹೀರಾತನ್ನು ರದ್ದುಗೊಳಿಸಲಾಗಿದೆ.
AIISH ನಿರ್ದೇಶಕರ ಕಚೇರಿ ಸೆ.22, 2026ರಂದು ಹೊರಡಿಸಿರುವ ರದ್ದುಪಡಿಸುವಿಕೆ (Cancellation Notice) ಪ್ರಕಟಣೆಯಲ್ಲಿ ಈ ಮಾಹಿತಿ ನೀಡಲಾಗಿದೆ.
Advertisement No. 06/2024 ಅಡಿಯಲ್ಲಿ 29.08.2024ರಂದು ಪ್ರಕಟಿಸಲಾಗಿದ್ದ ವಿವಿಧ Faculty Posts ನೇಮಕಾತಿ ಜಾಹೀರಾತನ್ನು ಸಕ್ಷಮ ಪ್ರಾಧಿಕಾರದ ನಿರ್ದೇಶನದ ಮೇರೆಗೆ ರದ್ದುಪಡಿಸಲಾಗಿದೆ ಎಂದು ಸಂಸ್ಥೆ ನಿರ್ದೇಶಕಿ ಡಾ. ಪುಷ್ಪಾವತಿ “ಜಸ್ಟ್ ಕನ್ನಡ” ಗೆ ತಿಳಿಸಿದರು.
ಈ ಸಂಬಂದ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಪ್ರತಿಯೊಬ್ಬರಿಗೂ ರಿಜಿಸ್ಟರ್ಡ್ ಅಂಚೆ ಮೂಲಕ ಮಾಹಿತಿ ರವಾನಿಸಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳ ಅಭ್ಯರ್ಥಿಗಳು ಸಹ ಅರ್ಜಿಸಲ್ಲಿಸಿದ್ದರು. ಆದ್ದರಿಂದ ಅವರಿಗೆ ನೇಮಕಾತಿ ಪ್ರಕ್ರಿಯೆ ರದ್ದುಪಡಿಸಿರುವುದು ಖಚಿತವಾಗಿ ತಿಳಿಯಲಿ, ಯಾವುದೇ ಗೊಂದಲಗಳಿಗೂ ಆಸ್ಪಧ ಬೇಡ ಎಂಬುದು ಸಂಸ್ಥೆ ಉದ್ದೇಶ ಎಂದು AIISH ನಿರ್ದೇಶಕಿ ಡಾ. ಪುಷ್ಪಾವತಿ ಸ್ಪಷ್ಟಪಡಿಸಿದರು.
ಆಡಳಿತಾತ್ಮಕ ಕಾರಣಗಳಿಂದ ರದ್ದು:

ಸಂಬಂಧಪಟ್ಟ ನೇಮಕಾತಿ ಜಾಹೀರಾತನ್ನು “administrative reasons” (ಆಡಳಿತಾತ್ಮಕ ಕಾರಣಗಳು) ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ಆದರೆ, ಯಾವ ನಿರ್ದಿಷ್ಟ ಆಡಳಿತಾತ್ಮಕ ಕಾರಣದಿಂದ ಜಾಹೀರಾತು ರದ್ದುಗೊಂಡಿದೆ ಎಂಬುದನ್ನು ಪ್ರಕಟಣೆಯಲ್ಲಿ ವಿವರಿಸಲಾಗಿಲ್ಲ.
AIISHನ ಅಧಿಕೃತ ವೆಬ್ಸೈಟ್ನಲ್ಲಿಯೂ “Cancellation of the Faculty Post Advertised vide Advertisement No. 06/2024 dated 29.08.2024” ಎಂಬ ಪ್ರಕಟಣೆ ಸೆ.23, 2026ರಂದು ಪ್ರಕಟವಾಗಿರುವುದು ದಾಖಲಾಗಿದೆ.
ಈ ಜಾಹೀರಾತಿನಡಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಈ ರದ್ದುಪಡಿಸುವಿಕೆ ಮಹತ್ವದ ಬೆಳವಣಿಗೆಯಾಗಿದ್ದು, ಮುಂದಿನ ನೇಮಕಾತಿಗೆ ಸಂಬಂಧಿಸಿದಂತೆ AIISHನಿಂದ ಹೊಸ ಅಧಿಸೂಚನೆ ಹೊರಬರುವುದೇ ಎಂಬುದನ್ನು ಅಭ್ಯರ್ಥಿಗಳು ನಿರೀಕ್ಷಿಸುವಂತಾಗಿದೆ.
[AIISH ಅಧಿಕೃತ ವೆಬ್ಸೈಟ್](https://aiishmysore.in/?utm_source=chatgpt.com)

KEY WORDS:
AIISH Mysuru, recruitment 2024, AIISH Faculty recruitment, AIISH recruitment cancellation, AIISH Mysuru Advertisement, All India Institute of Speech and Hearing,





