1
May, 2026

A News 365Times Venture

1
Friday
May, 2026

A News 365Times Venture

ಮೈಸೂರು: ಜೂನ್ 1 ರಂದು ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ

Date:

ಮೈಸೂರು,ಮೇ,28,2025 (www.justkannada.in): ಮೈಸೂರಿನ ಸಮತಾ  ಅಧ್ಯಯನ ಕೇಂದ್ರ(ರಿ)ದ ವತಿಯಿಂದ ಜೂನ್ 1 ರ ಭಾನುವಾರ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಕಾವ್ಯ, ಕಥಾಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 10.30ಕ್ಕೆ  ಮೈಸೂರಿನ ಸರಸ್ವತಿ ಪುರಂನಲ್ಲಿರುವ ರೋಟರಿ ಮೈಸೂರು , ಪಶ್ಚಿಮ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ  ಹಿರಿಯ ಕವಯತ್ರಿ ಸವಿತಾ ನಾಗಭೂಷಣ ಅವರಿಗೆ  ಡಾ. ವಿಜಯದಬ್ಬೆ ಸಾಹಿತ್ಯ ಪ್ರಶಸ್ತಿಯನ್ನ  ಹಿರಿಯ ಲೇಖಕಿ ಮತ್ತು ಎಚ್ ಎಎಲ್ ನಿವೃತ್ತ ಜನರಲ್ ಮ್ಯಾನೇಜರ್ ನೇಮಿಚಂದ್ರ ಅವರು ಪ್ರದಾನ ಮಾಡಲಿದ್ದಾರೆ.

ತೀರ್ಪುಗಾರರಾಗಿ ಕವಿ ಹಾಗೂ ಹಿರಿಯ ಪತ್ರಕರ್ತ ಜಿ.ಪಿ ಬಸವರಾಜು ಆಗಮಿಸಲಿದ್ದಾರೆ. ನೆನಪಿನಂಗಳದಲ್ಲಿ ವಿಜಯ ದಬ್ಬೆ , ಪುಸ್ತಕವನ್ನ ಖ್ಯಾತ ವಿಮರ್ಶಕರು ಹಾಗೂ ಸಂಸ್ಕೃತಿ ಚಿಂತಕರಾದ ಡಾ.ಎಂ.ಎಸ್ ಆಶಾದೇವಿ ಬಿಡುಗಡೆ ಮಾಡಲಿದ್ದಾರೆ.

ಬೆಂಗಳೂರಿನ ಮಹಾರಾಣಿಸ್ ಕ್ಲಸ್ಟರ್ ಯುನಿವರ್ಸಿಟಿ ಪ್ರಾಧ್ಯಾಪಕ ಡಾ.ಸೆಲ್ವಕುಮಾರಿ, ಮೈಸೂರು ಶಾರದಾ ವಿಲಾಸ ಕಾಲೇಜು  ಸಹಾಯಕ ಪ್ರಾಧ್ಯಾಪಕ ಆನಂದ ಗೋಪಾಲ ಉಪಸ್ಥಿತರಿರಲಿದ್ದು ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ಸಬಿಹಾ ಭೂಮಿಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Key words: Mysore,  Dr. Vijaya Dabbe Literary Award, ceremony, June 1

The post ಮೈಸೂರು: ಜೂನ್ 1 ರಂದು ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಡೆಡ್ ಲೈನ್ ಇಲ್ಲ-ಸಚಿವ ಬೋಸರಾಜು

ವಿಜಯಪುರ,ಮೇ,1,2026 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಯಾವುದೇ ಡೆಡ್ ಲೈನ್ ಇಲ್ಲ...

ಖರ್ಗೆ ಹೇಳಿದ ಮೇಲೆ ಸಿಎಂ ಬದಲಾವಣೆ ಅಧ್ಯಾಯ ಮುಗಿಯಿತು- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮೇ,1,2026 (www.justkannada.in):  ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂಬ ಎಐಸಿಸಿ ಅಧ್ಯಕ್ಷ...

ಮಳೆ ಅವಾಂತರ ತಡೆಗೆ ತ್ವರಿತಗತಿ ಕ್ರಮಕ್ಕೆ ಸೂಚನೆ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಏಪ್ರಿಲ್,30,2026 (www.justkannada.in): ಬೆಂಗಳೂರಿನಲ್ಲಿ ಆಗುತ್ತಿರುವ ಮಳೆ ಅವಾಂತರ ತಡೆಯಲು ತ್ವರಿತಗತಿಯಲ್ಲಿ ಕ್ರಮಕೈಗೊಳ್ಳುವಂತೆ...

ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಇದ್ದಾರೆ, ಆ ಪ್ರಶ್ನೆಯೇ ಉದ್ಬವಿಸಲ್ಲ- ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಕಲಬುರುಗಿ,ಏಪ್ರಿಲ್,30,2026 (www.justkannada.in):  ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಇದ್ದಾರೆ ಆ ಸಿಎಂ ಬದಲಾವಣೆ...