ಬೆಂಗಳೂರು,ಏಪ್ರಿಲ್,30,2026 (www.justkannada.in): ಬೆಂಗಳೂರಿನಲ್ಲಿ ಆಗುತ್ತಿರುವ ಮಳೆ ಅವಾಂತರ ತಡೆಯಲು ತ್ವರಿತಗತಿಯಲ್ಲಿ ಕ್ರಮಕೈಗೊಳ್ಳುವಂತೆ ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಧಾರಾಕಾರ ಮಳೆಯ ಅವಾಂತರ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಜಿಬಿಎ ಅಧಿಕಾರಿಗಳು ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕಿತ್ತು ಒಣಗಿದ ಮರಗಳನ್ನ ತೆರಲು ಮಾಡಿಸಬೇಕಿತ್ತು ಜಿಬಿಎ ಆದ ಬಳಿಕ ನಗರದಲ್ಲಿ 5 ಪಾಲಿಕೆಗಳನ್ನ ಮಾಡಲಾಗಿದೆ . ಇನ್ನೂ ಅದಿಕಾರಿಗಳು ಸೆಟಲ್ ಆಗಿಲ್ಲಅನ್ನಿಸುತ್ತೆ ಅದರೆ ಅವರಿಗೆ ಪರಿಸ್ಥಿತಿ ನಿಭಾಯಿಸೋದು ಗೊತ್ತಿದೆ ಎಂದರು.
ಈಗ ಅದೇ ಅಧಿಕಾರಿಗಳೇ ಇದ್ದಾರೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು. ಸಂಚಾರಿ ಪೊಲೀಸರಿಗೂ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
Key words: Home Minister, Parameshwar, action, prevent, rain disasters
The post ಮಳೆ ಅವಾಂತರ ತಡೆಗೆ ತ್ವರಿತಗತಿ ಕ್ರಮಕ್ಕೆ ಸೂಚನೆ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




