25
September, 2026

A News 365Times Venture

25
Friday
September, 2026

A News 365Times Venture

ಒಂದೇ ಗಂಟೆಯೊಳಗೆ ಫಲಿತಾಂಶ ಪ್ರಕಟಿಸಿದ ವಿಟಿಯು

Date:

ಬೆಳಗಾವಿ,ಮೇ,31,2025 (www.justkannada.in): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಪರೀಕ್ಷೆ ಮುಗಿದ ಒಂದೇ ತಾಸಿನಲ್ಲಿ ಫಲಿತಾಂಶವನ್ನ ಪ್ರಕಟಿಸಿದೆ.

ಹೌದು, ಅಂತಿಮ ಸೆಮಿಸ್ಟರ್ ಬಿಇ, ಬಿ.ಟೆಕ್, ಬಿ.ಪ್ಲಾನ್, ಬಿ.ಆರ್ಕ್, ಬಿ.ಎಸ್.ಸಿ (ಆನರ್ಸ್) ಪರೀಕ್ಷೆಯ ಫಲಿತಾಂಶಗಳನ್ನು ಪರೀಕ್ಷೆ ಮುಗಿದ ಒಂದೇ ಗಂಟೆಯೊಳಗೆ ಪ್ರಕಟಿಸಿದೆ. ಮೇ 30ರಂದು ಸಂಜೆ 5.30ಕ್ಕೆ ಪರೀಕ್ಷೆ ಮುಗಿದಿದ್ದು, 6.30ಕ್ಕೆ ಫಲಿತಾಂಶ ಪ್ರಕಟಿಸಲಾಗಿದೆ.

ಈ ಹಿಂದೆ ವಿಟಿಯು ಮೂರು ತಾಸಿನ ಒಳಗೇ ಫಲಿತಾಂಶ ಪ್ರಕಟಿಸುವ ಮೂಲಕ  ಸಾಧನೆ ತೋರಿತ್ತು. ಈಗ ಅದನ್ನು ಒಂದು ತಾಸಿನೊಳಗೇ ಸಾಧ್ಯಗೊಳಿಸಿದ್ದು,  ಶುಕ್ರವಾರ ಅಂತಿಮ ಸೆಮಿಸ್ಟರ್‌ ನ 50,321 ವಿದ್ಯಾರ್ಥಿಗಳು ವಾಟ್ಸ್ ಆ್ಯಪ್‌ನಲ್ಲಿ ಫಲಿತಾಂಶ ಪಡೆದಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.vtu

‘2019ರಲ್ಲಿ 43,662 ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಎರಡು ದಿನಗಳ ಒಳಗಾಗಿ ನೀಡಲಾಗಿತ್ತು. 2020ರಿಂದ ಮೂರು ತಾಸಿನೊಳಗೆ ಫಲಿತಾಂಶ ನೀಡಲಾಗಿತ್ತು. ಈ ಸಮಯವನ್ನು ಮತ್ತೊಮ್ಮೆ ಕಡಿಮೆ ಮಾಡಲಾಗಿದೆ.

ಇದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕಾಟ ಮತ್ತು ಮುಂದಿನ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಯೋಜನ ವಾಗುತ್ತದೆ. ಮೇ 31ರಿಂದಲೇ ವಿದ್ಯಾರ್ಥಿಗಳು ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳಿಗೆ (ಪಿಡಿಸಿ) ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು’ ಎಂದೂ ಪ್ರೊ.ಎಸ್. ವಿದ್ಯಾಶಂಕರ್ ಅವರು ತಿಳಿಸಿದ್ದಾರೆ.

Key words: VTU, declared, results, within,  an hour

The post ಒಂದೇ ಗಂಟೆಯೊಳಗೆ ಫಲಿತಾಂಶ ಪ್ರಕಟಿಸಿದ ವಿಟಿಯು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನೇಮಕಾತಿ ಪ್ರಮಾಣಪತ್ರ ಪಡೆಯಲು ಬಂದಿದ್ದ ವೇಳೆ ಕಾರು ಡಿಕ್ಕಿ: ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಮೈಸೂರು,ಸೆಪ್ಟಂಬರ್‌,22,2026 (www.justkannada.in) ಕಾಲೇಜು ಮುಂಭಾಗ ನಿಂತಿದ್ದ ವೇಳೆ ಕಾರು ಡಿಕ್ಕಿಯಾಗಿ ವಿದ್ಯಾರ್ಥಿ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರು ತನಿಖೆಗೆ ಆದೇಶಿಸಿದ  ಸುಪ್ರೀಂಕೋರ್ಟ್​

ನವದೆಹಲಿ, ಸೆಪ್ಟೆಂಬರ್,​​ 21,2026 (www.justkannada.in):  2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ...

ಮಾಜಿ ಶಾಸಕ ಡಾ. ಆರ್.ಬಿ.ಶಿರಿಯಣ್ಣವರ ಸರಳ ಸಜ್ಜನ ರಾಜಕಾರಣಿ- ಸಿಎಂ ಡಿಕೆಶಿ ಸ್ಮರಣೆ

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in) ಮಾಜಿ ಶಾಸಕ ಡಾ. ಆರ್.ಬಿ.ಶಿರಿಯಣ್ಣವರ ಸರಳ ವ್ಯಕ್ತಿ, ಸಜ್ಜನ...

ಮೈಸೂರಿನಲ್ಲಿ MIT ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು ಆರಂಭ

ಮೈಸೂರು,ಸೆಪ್ಟಂಬರ್‌,21,2026 (www.justkannada.in) : ಮಹಾರಾಜ ಎಜುಕೇಶನ್ ಟ್ರಸ್ಟ್‌ (ರಿ) ವತಿಯಿಂದ ಮೈಸೂರಿನಲ್ಲಿ...