30
April, 2026

A News 365Times Venture

30
Thursday
April, 2026

A News 365Times Venture

ಕೇರಳ ಮೃಗಾಲಯಕ್ಕೆ ತಾಂತ್ರಿಕ ನೈಪುಣ್ಯತೆಯ ವಿನಿಮಯಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಮ್ಮತಿ

Date:

ಬೆಂಗಳೂರು, ಜೂನ್,12,2025 (www.justkannada.in):  ಕೇರಳದ ತ್ರಿಶೂರ್ ಜಿಲ್ಲೆಯ ಪುಥೂರ್ ನಲ್ಲಿ ನೂತನವಾಗಿ ಆರಂಭಿಸುತ್ತಿರುವ ಜೈವಿಕ ಉದ್ಯಾನದಲ್ಲಿ ವನ್ಯಜೀವಿ ಮತ್ತು ಪಕ್ಷಿಗಳ ನಿರ್ವಹಣೆಗೆ ಅಗತ್ಯವಾದ ನೈಪುಣ್ಯತೆ ಮತ್ತು ಜ್ಞಾನ ವಿನಿಮಯಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸಮ್ಮತಿಸಿದ್ದಾರೆ.

ವಿಕಾಸಸೌಧದಲ್ಲಿಂದು ತಮ್ಮನ್ನು ಭೇಟಿಯಾದ ಕೇರಳ ಅರಣ್ಯ ಸಚಿವ ಎ.ಕೆ. ಸಶೀಂದ್ರನ್, ಕೇರಳ ಅರಣ್ಯ ಇಲಾಖೆಯಿಂದ ಆರಂಭಿಸಲಾಗುತ್ತಿರುವ ಪ್ರಥಮ ಜೈವಿಕ ಉದ್ಯಾನದಲ್ಲಿ ವನ್ಯಜೀವಿಗಳ ನಿರ್ವಹಣೆ ಕುರಿತಂತೆ ತಾಂತ್ರಿಕ ನೈಪುಣ್ಯತೆ ಹಂಚಿಕೊಳ್ಳುವಂತೆ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.

ವಿಶ್ವ ವಿಖ್ಯಾತ ಮೃಗಾಲಯ ವಿನ್ಯಾಸಕಾರ ಆಸ್ಟ್ರೇಲಿಯಾದ ಜಾನ್ ಸಿಯೋ ಅವರಿಂದ ಜೈವಿಕ ಉದ್ಯಾನದ ವಿನ್ಯಾಸ ಮಾಡಿಸಿದ್ದು, 136.8 ಎಕರೆ ಪ್ರದೇಶದಲ್ಲಿ ಇದು ಸಾಕಾರವಾಗುತ್ತಿದ್ದು, ಬರುವ ಆಗಸ್ಟ್ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ಸಶೀಂದ್ರನ್ ಮಾಹಿತಿ ನೀಡಿದರು, ಹೊಸ ಮೃಗಾಲಯಕ್ಕೆ ಕರ್ನಾಟಕದ ಮೃಗಾಲಯಗಳಲ್ಲಿ ಹೆಚ್ಚುವರಿಯಾಗಿರುವ ಕೆಲವು ವನ್ಯಜೀವಿಗಳನ್ನು ನೀಡುವಂತೆಯೂ ಮನವಿ ಮಾಡಿದರು.

ಈ ಭೇಟಿಯ ವೇಳೆ ಕೇರಳ ರಾಜ್ಯದಲ್ಲಿ ಡೀಮ್ಡ್ ಅರಣ್ಯ ಕುರಿತಂತೆ ಕೈಗೊಂಡಿರುವ ಕ್ರಮಗಳು, ಕಸ್ತೂರಿ ರಂಗನ್ ವರದಿಯ ಕುರಿತಂತೆ ಕೈಗೊಳ್ಳಲಾಗಿರುವ ನಿರ್ಣಯಗಳ ಕುರಿತಂತೆಯೂ ಸಮಾಲೋಚಿಸಲಾಯಿತು.

ಕೇರಳ ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪರಿಪಾಲಕ ಪ್ರಮೋದ್ ಜಿ ಕೃಷ್ಣನ್ ಮತ್ತು ಕರ್ನಾಟಕದ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಾದ ಮೀನಾಕ್ಷಿ ನೇಗಿ, ಸುಭಾಷ್ ಮಲ್ಕಡೆ, ಸುನೀಲ್ ಪನ್ವಾರ್, ಸೂರ್ಯ ಸೇನ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.vtu

Key words: Forest Minister, Ishwar Khandre, exchange,technical skills, Kerala Zoo

The post ಕೇರಳ ಮೃಗಾಲಯಕ್ಕೆ ತಾಂತ್ರಿಕ ನೈಪುಣ್ಯತೆಯ ವಿನಿಮಯಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಮ್ಮತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ನಾಯಕರು ಸೈಲೆಂಟಾಗಿಲ್ಲ, ಶಿಸ್ತು ಅಂದುಕೊಳ್ಳಿ-  ಸಚಿವ ಶಿವರಾಜ್ ತಂಗಡಗಿ

ಚಿತ್ರದುರ್ಗ,ಏಪ್ರಿಲ್,30,2026 (www.justkannada.in):  ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಶಿವರಾಜ್...

ಮೈಸೂರು: ಬೌರಿಂಗ್ ಅವಘಡ ಎಚ್ಚರಿಕೆ ಗಂಟೆ – ಕೆ.ವಿ. ಮಲ್ಲೇಶ್

ಮೈಸೂರು,ಏಪ್ರಿಲ್,30,2026 (www.justkannada.in):  ಬೆಂಗಳೂರಿನ ಬೌರಿಂಗ್ ಕಾಂಪೌಂಡ್ ಕಟ್ಟಡ ಕುಸಿದು 7 ಮಂದಿ...

KSDL ಸಾಧನೆ: ಸಚಿವ ಎಂ.ಬಿ ಪಾಟೀಲ್ ಗೆ ಕಾರ್ಮಿಕರ ಸಂಘದಿಂದ ಅಭಿನಂದನೆ

ಬೆಂಗಳೂರು,ಏಪ್ರಿಲ್,30,226 (www.justkannada.in):  ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು...

ಸಚಿವರ ಸಭೆ: ಮೂರು ನಗರಗಳಲ್ಲಿ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆಗೆ ತೀರ್ಮಾನ

ಬೆಂಗಳೂರು,ಏಪ್ರಿಲ್,30,2026 (www.justkannada.in):  ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸುಸ್ಥಿರ  ಡೇಟಾ ಕೇಂದ್ರಗಳು (ಸಸ್ಟೇನಬಲ್...