6
May, 2026

A News 365Times Venture

6
Wednesday
May, 2026

A News 365Times Venture

ಸಿಎಂ ಸಿದ್ದರಾಮಯ್ಯ ಕಾರು ತಡೆದು ರೈತರಿಂದ ಆಕ್ರೋಶ

Date:

ದಾವಣಗೆರೆ,ಜೂನ್,16,2025 (www.justkannada.in): ಸಿಎಂ ಸಿದ್ದರಾಮಯ್ಯ ಇಂದು ದಾವಣಗೆರೆಗೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ರೈತರು ಸಿಎಂ ಸಿದ್ದರಾಮಯ್ಯ ಅವರ ಕಾರನ್ನ ತಡೆದು ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಹೌದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಪೊಲೀಸರು ಅವಕಾಶ ನೀಡದೇ ಇರುವುದರಿಂದ  ಕೋಪಗೊಂಡ ರೈತರು, ಸಿಎಂ ಸಿದ್ದರಾಮಯ್ಯ ಕಾರು ತಡೆದು ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಹೊರವಲಯದ ಸರ್ಕ್ಯೂಟ್ ಹೌಸ್ ಆವರರಣದಲ್ಲಿ ನಡೆಯಿತು.

ವಿವಿಧ ಬೇಡಿಕೆಗಳನ್ನು ಮುಖ್ಯ ಮಂತ್ರಿಯವರ ಬಳಿ ಹೇಳಿಕೊಳ್ಳಲು ಆಗಮಿಸಿದ್ದ ರೈತರಿಗೆ ಪೋಲೀಸರು ಅವಕಾಶ ಮಾಡಿಕೊಡಲಿಲ್ಲ. ಪೊಲೀಸರ ವರ್ತನೆಯಿಂದ ಅಸಮಾಧಾನಗೊಂಡ ರೈತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರು ತಡೆದು, ಕಾರಿನ‌ ಮುಂದೆ ಮಲಗಿದರು.

ಮುಖ್ಯಮಂತ್ರಿಯ ಕಾರು ಚಾಲನೆ ಮಾಡುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ರೈತರ ಮನವೊಲಿಸಲು ಪ್ರಯತ್ನಿಸಿದರು. ಬಳಿಕ ಮುಖ್ಯಮಂತ್ರಿಯವರು ಕಾರಿನಲ್ಲಿ ಕುಳಿತೇ ರೈತರ ಬೇಡಿಕೆ ಆಲಿಸಿ, ಮನವಿ ಸ್ವೀಕರಿಸಿದರು.vtu

Key words: CM, Siddaramaiah, car, stop, farmers

The post ಸಿಎಂ ಸಿದ್ದರಾಮಯ್ಯ ಕಾರು ತಡೆದು ರೈತರಿಂದ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸರ್ಕಾರದ ಯೋಜನೆಗಳಿಗೆ ಜನರ ಮೆಚ್ಚುಗೆ: ಜನಾಶೀರ್ವಾದದಿಂದ ಪಕ್ಷಕ್ಕೆ  ಗೆಲುವು-ಸಿಎಂ ಸಿದ್ದರಾಮಯ್ಯ

ಮೈಸೂರು, ಮೇ, 06,2026 (www.justkannada.in): ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜನಮೆಚ್ಚುಗೆಗೆ ಪಾತ್ರವಾಗಿದ್ದು,...

ಹೈ ಕಮಾಂಡ್ ಹೇಳಿದ್ರೆ 5 ವರ್ಷ ಇರ್ತೇನೆ: ರಾಹುಲ್ ಗಾಂಧಿ ಕರೆದ್ರೆ ದೆಹಲಿಗೆ -ಸಿಎಂ ಸಿದ್ದರಾಮಯ್ಯ

ಮೈಸೂರು,ಮೇ,6,2026 (www.justkannada.in):  ಹೈಕಮಾಂಡ್ ಹೇಳಿದರೇ 5 ವರ್ಷ ಇರುತ್ತೇನೆ. ಹೈಕಮಾಂಡ್ ಏನು...

ಜೀವರಾಜ್ ಪ್ರಮಾಣ ವಚನ ವಿಳಂಬ ಆರೋಪ: ನಾವು ಯಾವುದೇ ತಡ ಮಾಡಿಲ್ಲ- ಸ್ಪೀಕರ್ ಯು.ಟಿ ಖಾದರ್

ಮಂಗಳೂರು,ಮೇ,6,2026 (www.justkannada.in):  ಹೈಕೋರ್ಟ್ ಆದೇಶದಂತೆ ಅಂಚೆ ಮತದಾನದ ಮರು ಏಣಿಕೆಯಲ್ಲಿ 52...

TVK ಭರ್ಜರಿ ಗೆಲುವು: ನಟ ವಿಜಯ್ ಗೆ ಶುಭ ಹಾರೈಸಿದ ನಟ ಶಿವರಾಜ್ ಕುಮಾರ್

ಬೆಂಗಳೂರು,ಮೇ,5,2026 (www.justkannada.in): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ನಟ ದಳಪತಿ...