30
April, 2026

A News 365Times Venture

30
Thursday
April, 2026

A News 365Times Venture

FSSAI ನೋಂದಣಿ, ಪರವಾನಗಿ ನವೀಕರಣ ಹೆಸರಲ್ಲಿ ವಂಚನೆ: ಎಚ್ಚರವಹಿಸುವಂತೆ ಸೂಚನೆ

Date:

ಮೈಸೂರು,ಜೂನ್,16,2025 (www.justkannada.in): FSSAI ನೊಂದಣಿ/ಪರವಾನಗಿ (Rigistration/License)ಗಳನ್ನು ನವೀಕರಿಸುವುದಾಗಿ ಹೇಳಿ ಆಹಾರ ವ್ಯಾಪಾರಸ್ಥರಿಗೆ ಅನಾಮಧೇಯ ವ್ಯಕ್ತಿಗಳು ವಂಚನೆ ಮಾಡುತ್ತಿದ್ದು ಈ ಬಗ್ಗೆ ಎಚ್ಚರ ವಹಿಸುವಂತೆ ಆಹಾರ ಉದ್ದಿಮೆದಾರರಿಗೆ  ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂಕಿತ ಅಧಿಕಾರಿ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ಅಧಿಕಾರಿಗಳು , ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಕಛೇರಿ ವ್ಯಾಪ್ತಿಗೆ ಒಳಪಡುವ FSSAI ನೊಂದಣಿ/ಪರವಾನಗಿ (Rigistration/License)ಗಳನ್ನು ನವೀಕರಿಸುವುದಾಗಿ ಅನಾಮಧೇಯ ವ್ಯಕ್ತಿಗಳಿಂದ ದೂರವಾಣಿ ಕರೆಗಳು ಬರುತ್ತಿರುವುದು ಗಮನಕ್ಕೆ ಬಂದಿದೆ. ಆಹಾರ ವ್ಯಾಪಾರಸ್ಥರಿಗೆ ಕರೆಮಾಡಿ ನೊಂದಣಿ/ಪರವಾನಗಿ (Rigistration/License)ಗಳನ್ನು ನವೀಕರಿಸಿ ನೀಡುತ್ತಿದ್ದಾರೆ. ಆದರೆ ಇವರುಗಳು ಲೈಸೆನ್ಸ್ ಅನ್ನು ಎಡಿಟ್ ಮಾಡಿ 05 ವರ್ಷ ಅವಧಿ ಇರುವಂತೆ ಆಹಾರ ಉದ್ದಿಮೆದಾರರಿಗೆ ಲೈಸೆನ್ಸ್ ರಿನಿವಲ್ ಮಾಡಿ  ವಾಟ್ಸಪ್ ಗೆ ಕಳುಹಿಸುತ್ತಿದ್ದಾರೆ. ಆದರೆ ವಾಸ್ತವಾಂಶವಾಗಿ 01 ಅಥವಾ 02 ವರ್ಷಕ್ಕೆ ನವೀಕರಿಸಿ 05 ವರ್ಷದ  ಆನ್ ಲೈನ್ ಮೊತ್ತವನ್ನು ಆಹಾರ ಉದ್ದಿಮೆದಾರರಿಂದ Google Pay ಮೂಲಕ ಪಡೆದು, ಆಹಾರ ಉದ್ದಿಮೆದಾರರಿಗೆ ಕಛೇರಿಯಿಂದ ಕರೆಮಾಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದಾರೆ. ಆದುದರಿಂದ, ಆಹಾರ ಉದ್ದಿಮೆದಾರರು ಈ ವಿಷಯದ ಬಗ್ಗೆ ಎಚ್ಚರವಹಿಸಬೇಕೆಂದು ಕೋರಿದ್ದಾರೆ.

ಹೀಗಾಗಿ ಆಹಾರ ಉದ್ದಿಮೆದಾರರು www.foscos.fssai.gov.in ಈ ವೆಬ್‌ ಸೈಟ್‌ನಲ್ಲಿ ತಾವೇ ತಮ್ಮ ಪರವಾನಗಿ ಅಥವಾ ನೊಂದಣಿಯನ್ನು ನವೀಕರಣ ಮಾಡಿಕೊಳ್ಳಬಹುದಾಗಿದೆ. ಮತ್ತೊಮ್ಮೆ FSSAI ಕೇಂದ್ರ ಕಛೇರಿಯಿಂದ ಅಥವಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಕಛೇರಿಯಿಂದ ಯಾವುದೇ ಆಹಾರ ಉದ್ದಿಮೆದಾರರಿಗೆ ದೂರವಾಣಿ ಮೂಲಕ ನವೀಕರಣ ಮಾಡುವುದಾಗಿ ಕರೆ ಬರುವುದಿಲ್ಲ. ಈ ರೀತಿ ಆಹಾರ ಉದ್ದಿಮೆದಾರರು ದೂರವಾಣಿ ಮೂಲಕ, ವಾಟ್ಸಪ್ ನಲ್ಲಿ ಬರುವ ಸಂದೇಶದ ಮೂಲಕ ನವೀಕರಣ ಮಾಡಿಸಿಕೊಂಡಿದ್ದರೆ ತಾವುಗಳು License Id ಅನ್ನು ಬಳಸಿಕೊಂಡು www.foscos.fssai.gov.in ನಲ್ಲಿ  ಪರಿಶೀಲಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.vtu

Key words: FSSAI,  registration, license,  renewal,  scam, Mysore city corporation

The post FSSAI ನೋಂದಣಿ, ಪರವಾನಗಿ ನವೀಕರಣ ಹೆಸರಲ್ಲಿ ವಂಚನೆ: ಎಚ್ಚರವಹಿಸುವಂತೆ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ನಾಯಕರು ಸೈಲೆಂಟಾಗಿಲ್ಲ, ಶಿಸ್ತು ಅಂದುಕೊಳ್ಳಿ-  ಸಚಿವ ಶಿವರಾಜ್ ತಂಗಡಗಿ

ಚಿತ್ರದುರ್ಗ,ಏಪ್ರಿಲ್,30,2026 (www.justkannada.in):  ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಶಿವರಾಜ್...

ಮೈಸೂರು: ಬೌರಿಂಗ್ ಅವಘಡ ಎಚ್ಚರಿಕೆ ಗಂಟೆ – ಕೆ.ವಿ. ಮಲ್ಲೇಶ್

ಮೈಸೂರು,ಏಪ್ರಿಲ್,30,2026 (www.justkannada.in):  ಬೆಂಗಳೂರಿನ ಬೌರಿಂಗ್ ಕಾಂಪೌಂಡ್ ಕಟ್ಟಡ ಕುಸಿದು 7 ಮಂದಿ...

KSDL ಸಾಧನೆ: ಸಚಿವ ಎಂ.ಬಿ ಪಾಟೀಲ್ ಗೆ ಕಾರ್ಮಿಕರ ಸಂಘದಿಂದ ಅಭಿನಂದನೆ

ಬೆಂಗಳೂರು,ಏಪ್ರಿಲ್,30,226 (www.justkannada.in):  ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು...

ಸಚಿವರ ಸಭೆ: ಮೂರು ನಗರಗಳಲ್ಲಿ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆಗೆ ತೀರ್ಮಾನ

ಬೆಂಗಳೂರು,ಏಪ್ರಿಲ್,30,2026 (www.justkannada.in):  ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸುಸ್ಥಿರ  ಡೇಟಾ ಕೇಂದ್ರಗಳು (ಸಸ್ಟೇನಬಲ್...