22
February, 2026

A News 365Times Venture

22
Sunday
February, 2026

A News 365Times Venture

ದೈಹಿಕ, ಮಾನಸಿಕವಾಗಿ ಸದೃಢವಾಗಿರಲು ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದು ಅತಿ ಮುಖ್ಯ- ಹೆಚ್.ಎನ್. ನಾಗರಾಜಯ್ಯ

Date:

ಬೆಂಗಳೂರು,ಫೆಬ್ರವರಿ,18,2026 (www.justkannada.in): ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದು ಅತಿ ಮುಖ್ಯ ಎಂದು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಮೇಜರ್ ಹೆಚ್.ಎನ್. ನಾಗರಾಜಯ್ಯ ತಿಳಿಸಿದರು.

ನ್ಯಾಷನಲ್ ಕಾಲೇಜಿನ 61 ನೇ ವಾರ್ಷಿಕ ಕ್ರೀಡಾಕೂಟ ವಿಜೃಂಭಣೆಯಿಂದ ನೆರವೇರಿತು. ಕ್ರೀಡಾಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಮೇಜರ್ ಹೆಚ್.ಎನ್. ನಾಗರಾಜಯ್ಯ, “ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದು ಅತಿ ಮುಖ್ಯ. ಕ್ರೀಡೆಯೂ ಶಿಕ್ಷಣದ ಒಂದು ಮುಖ್ಯ ಭಾಗ” ಎಂದು ಕ್ರೀಡಾಳುಗಳನ್ನು ಹುರಿದುಂಬಿಸಿದರು.

ಕಾರ್ಯದರ್ಶಿ ಬಿ ಎಸ್ ಅರುಣ್ ಕುಮಾರ್ ಮಾತನಾಡಿ ನ್ಯಾಷನಲ್ ಕಾಲೇಜಿಗಿರುವ ಕ್ರೀಡಾ ಪರಂಪರೆಯನ್ನು ನೆನಪಿಸಿದರು.

ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ  ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಹಾಗೆಯೇ ಇದೇ ವೇಳೆ ಕಾಲೇಜಿನ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎನ್ ಇಎಸ್ ಆಫ್ ಕರ್ನಾಟಕದ ಉಪಾಧ್ಯಕ್ಷ ವಿ. ಮಂಜುನಾಥ್, ಕಾರ್ಯದರ್ಶಿ ವಿ. ವೆಂಕಟಾಶಿವಾ ರೆಡ್ಡಿ, ಚೇರ್ಮನ್ ಡಾ. ವೆಂಕಟರಾಮರೆಡ್ಡಿ , ಜಂಟಿ ಕಾರ್ಯದರ್ಶಿ ಸುಧಾಕರ್ ಇಸ್ತೂರಿ, ಕಾರ್ಯ ಸಮಿತಿ ಚೇರ್ಮನ್ ಜಿ.ಎಂ. ರವೀಂದ್ರ ಪ್ರಾಂಶುಪಾಲೆ ಡಾ. ಸಿ. ವಿಜಯಲಕ್ಷ್ಮಿ,  ಕಾಲೇಜು ಅಧ್ಯಾಪಕ ಮಂಡಳಿ ಕಾರ್ಯದರ್ಶಿ ಪ್ರೊ. ಚೆಲುವಪ್ಪ, ದೈಹಿಕ ಶಿಕ್ಷಣ ನಿರ್ದೇಶಕರಾದ ಗಂಗಾರೆಡ್ಡಿ ಕೆ. ಎನ್, ಮತ್ತು ಅಧ್ಯಾಪಕರು ಭಾಗವಹಿಸಿದ್ದರು.

Key words: Bangalore, National College, Sports Festival, celebrated

The post ದೈಹಿಕ, ಮಾನಸಿಕವಾಗಿ ಸದೃಢವಾಗಿರಲು ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದು ಅತಿ ಮುಖ್ಯ- ಹೆಚ್.ಎನ್. ನಾಗರಾಜಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚಂದ್ರ ಲೋಕಕ್ಕೆ ಕಾಲಿಟ್ಟರೂ, ಕಾಲ ಬುಡದಲ್ಲೇ ಮರ್ಯಾದಾ ಹತ್ಯೆ ಬೇಸರದ ಸಂಗತಿ- ಕೆ.ವಿ.ಪ್ರಭಾಕರ್

ಕೋಲಾರ ಫೆಬ್ರವರಿ, 21,2026 (www.justkannada.in):  ಚಂದ್ರ ಲೋಕಕ್ಕೆ ಕಾಲಿಟ್ಟರೂ, ಕಾಲ ಬುಡದಲ್ಲೇ...

ತಪ್ಪು ಮಾಡಿದವರ ವಿರುದ್ದ ಕ್ರಮ ನಿಶ್ಚಿತ- ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಫೆಬ್ರವರಿ,21,2026 (www.justkannada.in): ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ...

ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಬಿಜೆಪಿ ಶಾಸಕ

ಗದಗ,ಫೆಬ್ರವರಿ,21,2026 (www.justkannadda.in):  ಸಣ್ಣನೀರಾವರಿ ಇಲಾಖೆ ಕಾಮಗಾರಿ ಗುತ್ತಿಗೆ ನೀಡಲು 5 ಲಕ್ಷ...

ಖರ್ಗೆ ಅವರಿಂದ ಆದಷ್ಟು ಬೇಗ ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸುವ ಭರವಸೆ- ಸಚಿವ ಸತೀಶ್ ಜಾರಕಿಹೊಳಿ

ನವದೆಹಲಿ,ಫೆಬ್ರವರಿ,21,2026 (www.justkannada.in): ರಾಜ್ಯದಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆ ಗೊಂದಲ ವಿಚಾರವನ್ನು ಆದಷ್ಟು...