3
March, 2026

A News 365Times Venture

3
Tuesday
March, 2026

A News 365Times Venture

ಯುದ್ಧ ಸಂಪೂರ್ಣ ನಿಲ್ಲುವವರೆಗೂ ಎಲ್ಲರನ್ನ ಅಲ್ಲಿಂದ ಕರೆಸುವುದು ಕಷ್ಟ- ಕೇಂದ್ರ ಸಚಿವ HDK

Date:

ಮೈಸೂರು ,ಮಾರ್ಚ್,2,2026 (www.justkannada.in): ಇರಾನ್- ಇಸ್ರೇಲ್ ನಡುವೆ ಸಂಘರ್ಷ ಕನ್ನಡಿಗರು ಸಿಲುಕಿರುವ ಸಂಬಂಧ ಯುದ್ಧ ಸಂಪೂರ್ಣ ನಿಲ್ಲುವವರೆಗೂ ಅಲ್ಲಿಂದ ಎಲ್ಲರನ್ನ ಕರೆಸುವುದು ಕಷ್ಟ. ವಿಮಾನ ಹಾರಾಟ ಆರಂಭವಾದರೆ ಎಲ್ಲರೂ ಬಹುಬೇಹ ಸುರಕ್ಷಿತವಾಗಿ ಬರುತ್ತಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.

ಮೈಸೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ವಿಮಾನ ಹಾರಾಟ ಬಂದ್ ಆಗಿರುವ ಕಾರಣ ಸಮಸ್ಯೆಯಾಗಿದೆ. ದುಬೈನಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಸಾಧ್ಯವಾದಷ್ಟು ಕನ್ನಡಿಗರ ಸಹಾಯಕ್ಕೆ ಬಂದಿದ್ದಾರೆ. ನನ್ನ ಜೊತೆಯೂ ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ. ಕೇಂದ್ರ ಸರ್ಕಾರವು ಕೂಡ ಎಲ್ಲಾ ಭಾರತೀಯರ ಸುರಕ್ಷತೆ ಒತ್ತು ಕೊಟ್ಟಿದೆ. ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರದ ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು.

ಅಧಿಕಾರ ಹಸ್ತಾಂತರ ವಿಚಾರ: ಹೊಸ ಬಾಂಬ್ ಸಿಡಿಸಿದ  ಎಚ್.ಡಿ ಕುಮಾರಸ್ವಾಮಿ.

ಅಧಿಕಾರ ಹಸ್ತಾಂತರ ವಿಚಾರ ಕುರಿತು ಹೊಸ ಬಾಂಬ್ ಸಿಡಿಸಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ., ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು. ಈಗಲೂ ಫೋನ್ ಟ್ಯಾಪಿಂಗ್ ಇದೆ.. ಕೆಲವರು ಫೋನ್ ಟ್ಯಾಪಿಂಗ್ ಮಾಡಿಯೂ ಪತಿವ್ರತೆ ರೀತಿ ವರ್ತಿಸುತ್ತಾರೆ. ನಾನು ಸತ್ಯ ಹೇಳುತ್ತೇನೆ ಕೇಳಿ, ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು. ಇವತ್ತಿನ ಸರ್ಕಾರದಲ್ಲಿ ಅದು ಎಷ್ಟು ಹೆಚ್ಚಾಗಿದೆ ಎಂಬುದು ಅವರನ್ನೇ ಕೇಳಬೇಕು. ಅವರದ್ದೇ ಶಾಸಕರ ಮೇಲೆ ಅವರದ್ದೇ ಸಚಿವರು ಗುಪ್ತಚಾರಿಕೆ ಮಾಡುತ್ತಿರುವುದು ಇದೇ ಮೊದಲು. ಸಿಎಂ ಆಗಬೇಕೆಂದುಕೊಂಡವರು ಅವರ ಸರ್ಕಾರದ ಮೇಲೆ ಗುಪ್ತಚರಿಕೆ ಆರಂಭಿಸಿರುವುದು ದುರಂತ ಎಂದು ಎಚ್.ಡಿ ಕುಮಾರಸ್ವಾಮಿ  ವಾಗ್ದಾಳಿ ನಡೆಸಿದರು.

Key words Conflict, Iran, Israel war, over,  Union Minister HDK

The post ಯುದ್ಧ ಸಂಪೂರ್ಣ ನಿಲ್ಲುವವರೆಗೂ ಎಲ್ಲರನ್ನ ಅಲ್ಲಿಂದ ಕರೆಸುವುದು ಕಷ್ಟ- ಕೇಂದ್ರ ಸಚಿವ HDK appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಒಳಮೀಸಲಾತಿ ಅನುಷ್ಠಾನಕ್ಕೆ ಎಲ್ಲಾ ಸಮುದಾಯಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ- ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು,ಮಾರ್ಚ್,2,2026 (www.justkannada.in): ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ...

ರೇಷ್ಮೆ ಕಾರ್ಖಾನೆ ಮುಚ್ಚುವ ಪ್ರಶ್ನೆಯೇ ಇಲ್ಲ- ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಮಾರ್ಚ್,2,2026 (www.justkannada.in):  ನರಸೀಪುರದಲ್ಲಿ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಅನಗತ್ಯವಾಗಿ...

ಕೆಎಸ್‌ ಐಸಿ ಕಾರ್ಖಾನೆ ಮುಚ್ಚುತ್ತಾರೆಂಬುದು ವದಂತಿ- ಕೆ.ವಿ. ಮಲ್ಲೇಶ್ ಸ್ಪಷ್ಟನೆ

ಮೈಸೂರು,ಮಾರ್ಚ್,2,2026 (www.justkannada.in): ತಿ.ನರಸೀಪುರ ಪಟ್ಟಣದ ರೇಷ್ಮೆ ನೂಲು ಉತ್ಪಾದನಾ ಘಟಕದ ಆವರಣದಲ್ಲಿ...

ವೈಯಕ್ತಿಕ ರಾಜಕೀಯ ಉಳುವಿಗಾಗಿ ಗುಪ್ತಚರ ದುರುಪಯೋಗ ನಿಲ್ಲಿಸಿ-ಸಿಎಂ ವಿರುದ್ದ ಆರ್.ಅಶೋಕ್ ಕಿಡಿ

ಬೆಂಗಳೂರು,ಮಾರ್ಚ್,2,2026 (www.justkannada.in):  ಸಿಎಂ ಸಿದ್ದರಾಮಯ್ಯ ತಮ್ಮ ವೈಯಕ್ತಿಕ ರಾಜಕೀಯ ಉಳುವಿಗಾಗಿ ಗುಪ್ತಚರ...