27
June, 2026

A News 365Times Venture

27
Saturday
June, 2026

A News 365Times Venture

ಯಾವುದೇ ಕಾರಣಕ್ಕೂ ಒಂದು ಇಂಚು ಭೂಮಿ ಕೊಡಬೇಡಿ- ರೈತರಿಗೆ HDK ಕಿವಿಮಾತು

Date:

ರಾಮನಗರ,ಜೂನ್,27,2026 (www.justkannada.in): ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರ ಸಂಬಂಧ ರೈತರಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿವಿಮಾತು ಹೇಳಿದ್ದು, ಯಾವುದೇ ಕಾರಣಕ್ಕೂ ಒಂದು ಇಂಚು ಭೂಮಿ ಕೊಡಬೇಡಿ ಎಂದಿದ್ದಾರೆ.

ಇಂದು ಬೈರಮಂಗಲದಲ್ಲಿ ಬಿಡದಿ ಟೌನ್ ಶಿಪ್ ನಿರ್ಮಾಣ ವಿರೋಧಿಸಿ ರೈತರ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಬಿಡದಿ ಟೌನ್ ಶಿಪ್ ಹೆಚ್ ಡಿಕೆಯ ಕನಸಿನ ಕೂಸು ಅಂತಾರೆ. ರಾಜ್ಯ ಸರ್ಕಾರ ನನ್ನನ್ನು ವಿಲನ್ ರೀತಿಯಲ್ಲಿ ನಿಲ್ಲಿಸಿದೆ. ನನಗೆ ಅಧಿಕಾರ ಬೇಡ ಜನರು ನೆಮ್ಮದಿಯಿಂದ ಇದ್ದರೇ ಸಾಕು ಎಂದಿದ್ದೇ ನಾನು ಹಾಸನದಲ್ಲಿ ಹುಟ್ಟಿದರೂ ರಾಜಕೀಯ ಜನ್ಮ ಕೊಟ್ಟಿದ್ದು ಈ ಭಾಗದ ಜನ. ರಾಮನಗರ ಜನರು ನನಗೆ ದೇವರ ಸಮಾನ ಎಂದರು.

ಬೆಂಗಳೂರಿನ ಮೇಲಿನ ಸಮಸ್ಯೆ ಕಡಿಮೆ ಮಾಡಲು ಹಲವು ತೀರ್ಮಾನ  ಮಾಡಿದ್ದೆ  ಆದರೆ ಯಾವತ್ತೂ ಪ್ರಚಾರ ಪಡೆದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಮಾಡಲು ಹೊರಟಿದೆ ನಿಮ್ಮ ಆಶೀರ್ವಾದಿಂದ ಕೇಂದ್ರ ಸರ್ಕಾರದ ಸಚಿವನಾಗಿದ್ದೇನೆ  ಎಂದರು.

2007ರಲ್ಲಿ ಕಾಂಗ್ರೆಸ್ ನಾಯಕರೇ ಯೋಜನೆಗೆ ವಿರೋಧಿಸಿದ್ದರು. ಸದನದಲ್ಲೇ ಕಾಂಗ್ರೆಸ್ ನಾಯಕರು ವಿರೋಧಿಸಿದ್ದರು.  ರೈತರ ಪರ ಹೋರಾಟ ನಡೆಸುತ್ತಿದ್ದೇನೆ 2ನೇ ಸಲ ಸಿಎಂ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದೆ. ರೈತರಿಗಿಂತ ಹೆಚ್ಚು ನೋವು ನನಗಿದೆ. ವಿಧಾನಸೌಧದಲ್ಲಿ ಚರ್ಚೆ ಬೇಡ ಅಂತಾ ಪತ್ರ ಬರದಿದ್ದೆ ನನ್ನ ಪತ್ರಕ್ಕೆ ಡಿಕೆಶಿ ಉತ್ತರಿಸಿಲ್ಲ. ನಾನು ರಾಜಕೀಯ ದ್ವೇಷಕ್ಕಾಗಿ ಬೈರಮಂಗಲಕ್ಕೆ ಬಂದಿಲ್ಲ ರೆಡ್ ಜೋನ್ ಮಾಡಿ ನಾನಯ ಯಾರಿಗೂ ಸಮಸ್ಯೆ ಮಾಡಿಲ್ಲ. ನಾನು ಈ ಭಾಗದ ಜನರಿಗೆ ಮೋಸ ಮಾಡಲ್ಲ ಟೌನ್ ಶಿಪ್ ವಿರುದ್ದ ರೈತರ ಪ್ರತಿಭಟನೆ ಭದ್ರವಾಗಿರಬೇಕು ಎಂದು ತಿಳಿಸಿದರು.

Key words: Bidadi town ship, land, Central Minister, HDK, farmers

The post ಯಾವುದೇ ಕಾರಣಕ್ಕೂ ಒಂದು ಇಂಚು ಭೂಮಿ ಕೊಡಬೇಡಿ- ರೈತರಿಗೆ HDK ಕಿವಿಮಾತು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚಂಗ್ಲು ತರ ಆಡ್ತಿರೋ ಕೇಂದ್ರ ಸಚಿವ ಎಚ್ಡಿಕೆ; ಶಾಸಕ ಉದಯ್

ಮಂಡ್ಯ,ಜೂನ್,27,2026 (www.justkannada.in): ಬಿಡದಿ ಟೌನ್‌ ಶಿಪ್ ಯೋಜನೆ ವಿಚಾರವಾಗಿ ರಾಜಕೀಯ ವಾಗ್ವಾದ...

ಬಿಡದಿ ಟೌನ್ ಶಿಪ್: ಸಿಎಂ  ಚಿಂತನೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಿ- ಕೇಂದ್ರ ಸಚಿವ ವಿ.ಸೋಮಣ್ಣ

ದಾವಣಗೆರೆ,ಜೂನ್,27,2026 (www.justkannada.in): ಬಿಡದಿಯ ಟೌನ್ ಶಿಪ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ...

35,196 ಹುದ್ದೆಗಳು ಖಾಲಿ, ಸಿಬ್ಬಂದಿಗೆ ವೇತನವಿಲ್ಲ: ಐಸಿಯುನಲ್ಲಿ ಆರೋಗ್ಯ ಇಲಾಖೆ- ಆರ್.ಅಶೋಕ್ ಟೀಕೆ

ಬೆಂಗಳೂರು,ಜೂನ್,27,2026 (www.justkannada.in): ಗ್ಯಾರಂಟಿಗಳ ಹೆಸರಲ್ಲಿ ಖಜಾನೆ ಖಾಲಿ ಮಾಡಿ, ಈಗ ಆರೋಗ್ಯ...

ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ

ಶಿವಮೊಗ್ಗ,ಜೂನ್,27,2026 (www.justkannada.in):  ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ, ಫಿಲಂ ಚೇಂಬರ್...