27
June, 2026

A News 365Times Venture

27
Saturday
June, 2026

A News 365Times Venture

ಸಸಿ ನೆಡುವುದಷ್ಟೇ ಅಲ್ಲ, ಕೆಂಪೇಗೌಡರು ಕಟ್ಟಿದ ಬೆಂಗಳೂರು ಉಳಿಸುವ ಕೆಲಸ ಮಾಡಬೇಕು- ಕೇಂದ್ರ ಸಚಿವ HDK ಟಾಂಗ್

Date:

ಬೆಂಗಳೂರು,ಜೂನ್,27,2026 (www.justkannada.in):  ನಾಡಪ್ರಭು ಕೆಂಪೇಗೌಡರ ಜಯಂತಿ ವೇಳೆ ಕೇವಲ ಸಸಿ ನೆಡುವುದಷ್ಟೇ ಅಲ್ಲ, ಕೆಂಪೇಗೌಡರು ಕಟ್ಟಿದ ಬೆಂಗಳೂರು ಉಳಿಸುವ ಕೆಲಸ ಮಾಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಗೆ  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಬಿಡದಿ ಟೌನ್ ಶಿಪ್ ವಿರೋಧಿಸಿ ಬೈರಮಂಗಲದಲ್ಲಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಸಿಎಂ ಡಿಕೆ ಶಿವಕುಮಾರ್ 15 ಲಕ್ಷ ಸಸಿ ನೆಡಲು ಹೋಗಿದ್ದಾರೆ. ಬಿಡದಿಯಲ್ಲಿ 10 ಲಕ್ಷ ಮರ ಕಟಾವು ಮಾಡಲು ಮುಂದಾಗಿದ್ದಾರೆ. ಕೆಂಪೇಗೌಡ ಜಯಂತಿ ದಿನಾಚರಣೆ ವೇಳೆ ಸಸಿ ನೆಡುವುದಷ್ಟೇ ಅಲ್ಲ. ಕೆಂಪೇಗೌಡ ಕಟ್ಟಿದ ಬೆಂಗಳೂರನ್ನ ಉಳಿಸುವ ಕೆಲಸ ಮಾಡಬೇಕು ಎಂದರು.

ಟೌನ್ ಶಿಪ್ ವಿರೋಧಿಸಿ 480 ದಿನದಿಂದ ಹೋರಾಟ ನಡೆಯುತ್ತಿದೆ. ಮಹಿಳೆಯರು ಸೇರಿದಂತೆ ನೂರಾರು ರೈತರಿಂದ ನಿರಂತರ ಹೋರಾಟ ನಡೆಯುತ್ತಿದೆ.  ಟೌನ್ ಶಿಪ್ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಅಹ್ವಾನಿಸಿದ್ದೆ.  ಸಿಎಂ ಡಿಕೆಶಿಯನ್ನು ಬೀದಿಯಲ್ಲಿ ನಿಲ್ಲಿಸಬೇಕೆಂಬ  ಉದ್ದೇಶವಿಲ್ಲ. ಬಾಧಿತ ರೈತರ ಜೊತೆ ಮುಕ್ತವಾಗಿ ಚರ್ಚೆ ನಡೆಸಲಿ ಎಂದು ಕರೆದಿದ್ದೆ.  ರೈತರು ಸಮಸ್ಯೆ ಖುದ್ದಾಗಿ ಆಲಿಸಲಿ ಎಂದು ಕರೆದಿದ್ದೆ ಎಂದು ಹೆಚ್ ಡಿಕೆ ತಿಳಿಸಿದರು.

Key words: Bidadi township, Union Minister, HDK ,CM DK Shivakumar

The post ಸಸಿ ನೆಡುವುದಷ್ಟೇ ಅಲ್ಲ, ಕೆಂಪೇಗೌಡರು ಕಟ್ಟಿದ ಬೆಂಗಳೂರು ಉಳಿಸುವ ಕೆಲಸ ಮಾಡಬೇಕು- ಕೇಂದ್ರ ಸಚಿವ HDK ಟಾಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ

ಶಿವಮೊಗ್ಗ,ಜೂನ್,27,2026 (www.justkannada.in):  ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ, ಫಿಲಂ ಚೇಂಬರ್...

ನಾನು ಯಲಹಂಕದಲ್ಲೇ ನಿಂತು ಅವರನ್ನೇ ಸೋಲಿಸ್ತೇನೆ- ಸ್ವಪಕ್ಷದ ಶಾಸಕನಿಗೆ ಸಂಸದ ಕೆ.ಸುಧಾಕರ್ ತಿರುಗೇಟು

ಬೆಂಗಳೂರು,ಜೂನ್.27,2026 (www.justkannada.in):  ಯಲಹಂಕದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಹಮ್ಮಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ...

ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನ ಮಾತೃ ಇಲಾಖೆಗೆ ವಾಪಸ್ ಕರೆಸಿ- ಸಚಿವ ರಾಮಲಿಂಗರೆಡ್ಡಿ ಸೂಚನೆ

ಬೆಂಗಳೂರು,ಜೂನ್,26,2026 (www.justkannada.in): ಬೇರೆ ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಲಸಂಪನ್ಮೂಲ ಇಲಾಖೆಯ...

ಈ ಬಾರಿ ಮೈಸೂರು ದಸರಾದಲ್ಲಿ ವಿಜೃಂಭಣೆಯಿಂದ ಕಂಬಳ ನಡೆಸುತ್ತೇವೆ- ಶಾಸಕ ಅಶೋಕ್ ರೈ

ಮೈಸೂರು,ಜೂನ್,26,2026 (www.justkannada.in):  ಮೈಸೂರು ದಸರಾದಲ್ಲಿ ಕಂಬಳ ಮಾಡಲು ಸಿಎಂ ಡಿಕೆ ಶಿವಕುಮಾರ್...