ಬಾಗಲಕೋಟೆ,ಮಾರ್ಚ್,23,2026 (www.justkannada.in): ಅನಿರೀಕ್ಷಿತವಾಗಿ ಬಾಗಲಕೋಟೆ ಉಪ ಚುನಾವಣೆ ಬಂದಿದೆ. ಜನರ ಸೇವೆ ಮಾಡುವುದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಗೆ ವೋಟ್ ಮಾಡಿ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಮನವಿ ಮಾಡಿದರು.
ಬಾಗಲಕೋಟೆ ನವನಗರದ ಬಳಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಹೆಚ್ ವೈ ಮೇಟಿ ಅವರನ್ನು 5 ವರ್ಷಕ್ಕಾಗಿ ನೀವು ಆಯ್ಕೆ ಮಾಡಿದಿರಿ. ಅನಾರೋಗ್ಯದಿಂದ ಮೇಟಿ ನಿಧನರಾಗಿದ್ದಾರೆ. ಮೇಟಿ ಕುಟುಂಬದ ಉಮೇಶ್ ಮೇಟಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ತಾವೆಲ್ಲರೂ ಮತ ನೀಡಬೇಕು ಎಂದರು
ಮೇಟಿಯವರು ಎಲ್ಲರೊಂದಿಗೆ ಚೆನ್ನಾಗಿದ್ದರು. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಯಶಸ್ವಿಯಾಗಿವೆ ರಾಜ್ಯದಲ್ಲಿ ನಾವು ನುಡಿದ್ದಂತೆ ನಡೆದಿದ್ದೇವೆ. ಎಲ್ಲಾ ಜಾತಿ ಧರ್ಮದವರನ್ನೂ ಸಮಾನತೆಯಿಂದ ಕಾಣುತ್ತಿದ್ದೇವೆ. ಜನರ ಸೇವೆ ಮಾಡುವುದಕ್ಕೆ ಉಮೇಶ್ ಮೇಟಿಗೆ ವೋಟ್ ಮಾಡಿ ಎಂದರು.
Key words: Bagalkote, Vote, Congress candidate, Minister, M. B. Patil
The post ಜನಸೇವೆ ಮಾಡಲು ಕೈ ಅಭ್ಯರ್ಥಿ ಉಮೇಶ್ ಮೇಟಿಗೆ ವೋಟ್ ಮಾಡಿ-ಸಚಿವ ಎಂ. ಬಿ ಪಾಟೀಲ್ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




