25
May, 2026

A News 365Times Venture

25
Monday
May, 2026

A News 365Times Venture

ಯತ್ನಾಳ್ ಮರಳಿ ಬಿಜೆಪಿ ಸೇರಲು ಉಪಚುನಾವಣೆ ಒಳ್ಳೆಯ ಅವಕಾಶ- ಸಚಿವ ಎಂ.ಬಿ ಪಾಟೀಲ್

Date:

ವಿಜಯಪುರ,ಮಾರ್ಚ್,30,2026 (www.justkannada.in):  ಬಿಜೆಪಿ ಪಕ್ಷದಿಂದ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಬಿಜೆಪಿ ಸೇರಲು ಉಪಚುನಾವಣೆ ಒಳ್ಳೆಯ ಅವಕಾಶ ಒದಗಿಸಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ರಾಜ್ಯದಲ್ಲಿ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಯು ವಿಜಯೇಂದ್ರ ಅವರ ಅಧ್ಯಕ್ಷತೆಯ ಹೋಗುತ್ತಿದೆ. ಈ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಸೋತರೆ ವಿಜಯೇಂದ್ರ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ.  ಹೀಗಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ  ಮರಳಿ ಬಿಜೆಪಿ ಸೇರಲು ಇದೊಂದು ಒಳ್ಳೆಯ ಅವಕಾಶ. ಬಿಜೆಪಿಯನ್ನು ಸೋಲಿಸಿ ವಿಜಯೇಂದ್ರ ಅವರನ್ನು ಕೆಳಗಿಳಿಸುವ ತಮ್ಮ ಕನಸು ನನಸು ಮಾಡಿಕೊಳ್ಳಬೇಕು ಎಂದು ಯತ್ನಾಳ್ ಗೆ ಸಲಹೆ ನೀಡಿದರು.

ಒಂದು ವೇಳೆ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ವಿಜಯೇಂದ್ರ ಅವರ ಬಲ ಹೆಚ್ಚಲಿದೆ. ಬಿಜೆಪಿ ಸೋತರೆ ವಿಜಯೇಂದ್ರ ಬಲ ಕುಸಿಯಲಿದೆ. ಯತ್ನಾಳ್ ಅವರನ್ನ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಅವರಿಗೆ ಸ್ವಾಭಿಮಾನ, ಇದ್ದರೆ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ತೋರಿಸಲಿ.  ನಾವಂತೂ ಎರಡೂ ಕ್ಷೇತ್ರದಲ್ಲಿ ಗೆಲ್ಲುವುದು ನಿಶ್ಚಿತ ಎಂದು ಸಚಿವ ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

Key words: By-election, Yatnal, rejoin, BJP, Minister, M.B. Patil

The post ಯತ್ನಾಳ್ ಮರಳಿ ಬಿಜೆಪಿ ಸೇರಲು ಉಪಚುನಾವಣೆ ಒಳ್ಳೆಯ ಅವಕಾಶ- ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಇಂಧನ ದರ ಹೆಚ್ಚಿಸಿ ಕೇಂದ್ರದಿಂದ ಜನರ ಹಣ ಲೂಟಿ-ರಣದೀಪ್ ಸಿಂಗ್ ಸುರ್ಜೇವಾಲ

ಬೆಂಗಳೂರು,ಮೇ,25,2026 (www.justkannada.in):  ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿ ಜನರಿಗೆ ಬಿಜೆಪಿ...

MYSORE CRIME : ನಶೆಯಲ್ಲಿ ಪುಡಿ ರೌಡಿಗಳ ಹಾವಳಿ ; ಹಾಡಹಗಲೇ ದೌರ್ಜನ್ಯ, ಭಯದಲ್ಲಿ ನಾಗರಿಕರು!

  ಮೈಸೂರು, ಮೇ.೨೩,೨೦೨೬:  ನಗರದ ಹೃದಯ ಭಾಗಗಳಲ್ಲೇ ಗಾಂಜಾ ಮತ್ತು ಅಫೀಮ್ ನಶೆಯಲ್ಲಿ...

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತಂದಿದ್ದೇವೆ: ಟೀಕಾಕಾರರಿಗೆ ಸಚಿವ ಮಧು ಬಂಗಾರಪ್ಪ ತಿರುಗೇಟು

ಮೈಸೂರು,ಮೇ,23,2026 (www.justkannada.in): “ಒಬ್ಬ ಶಿಕ್ಷಣ ಸಚಿವನಾಗಿ ಸಾಹಿತಿ ದೇವನೂರು ಮಹದೇವ ಅವರ...

ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ  ಸಿದ್ದರಾಮಯ್ಯ

ಬೆಂಗಳೂರು,ಮೇ,23,2026 (www.justkannada.in): ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ...