25
June, 2026

A News 365Times Venture

25
Thursday
June, 2026

A News 365Times Venture

ಪಂಚಮಸಾಲಿ ಗುರುಪೀಠದಿಂದ ವಚನಾನಂದಸ್ವಾಮೀಜಿ ಉಚ್ಚಾಟನೆ

Date:

ದಾವಣಗೆರೆ,ಏಪ್ರಿಲ್,13,2026 (www.justkannada.in):  ಹರಿಹರ ತಾಲ್ಲೂಕಿನ ಹನಗವಾಡಿಯಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟನೆ ಮಾಡಲಾಗಿದೆ.

ಪೀಠದಲ್ಲಿ ನಡೆದ 15 ಜನರ ಧರ್ಮದರ್ಶಿ ಸಭೆಯಲ್ಲಿ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟನೆ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ವಚನಾನಂದ ಶ್ರೀಗಳು ಹರಿಹರ ಪೀಠದ ಜವಾಬ್ದಾರಿಯ ಜೊತೆಗೆ ಬೆಂಗಳೂರಿನ ತಮ್ಮ ಹಳೆಯ ‘ಶ್ವಾಸ ಯೋಗ ಪೀಠ’ವನ್ನೂ ಮುಂದುವರಿಸುತ್ತಿರುವುದು ಟ್ರಸ್ಟ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು.

ಪೀಠಾರೋಹಣದ ಸಮಯದಲ್ಲಿ ನೀಡಿದ ಭರವಸೆಯಂತೆ ಶ್ವಾಸ ಪೀಠವನ್ನು ತ್ಯಜಿಸಿ, ಪೂರ್ಣ ಪ್ರಮಾಣದಲ್ಲಿ ಪಂಚಮಸಾಲಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಟ್ರಸ್ಟಿಗಳು ಒತ್ತಾಯಿಸಿದ್ದರು.

ಸಮುದಾಯದ ಮುಖಂಡರು ಮತ್ತು ಟ್ರಸ್ಟಿಗಳು ವಚನಾನಂದ ಶ್ರೀಗಳು ಎರಡೂ ಪೀಠಗಳನ್ನು ನಿಭಾಯಿಸುವ ಬದಲು ಯಾವುದಾದರೂ ಒಂದಕ್ಕೆ ಸೀಮಿತವಾಗಬೇಕು ಎಂದು ಪಟ್ಟು ಹಿಡಿದಿರುವುದು ಈ ವಿವಾದಕ್ಕೆ ಕಾರಣವಾಗಿದೆ.

Key words: Vachanananda Swamiji ,expelled, from, Panchamasali Gurupeeth

The post ಪಂಚಮಸಾಲಿ ಗುರುಪೀಠದಿಂದ ವಚನಾನಂದಸ್ವಾಮೀಜಿ ಉಚ್ಚಾಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

BSNL ಮೈಸೂರು ವಲಯದಿಂದ ಉಚಿತ ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಸ್ವಯಂ ಉದ್ಯೋಗ ಅಭಿಯಾನ

​ಮೈಸೂರು,ಜೂನ್,24,2026 (www.justkannada.in): ಗ್ರಾಮೀಣ ಭಾಗದ ಸಬಲೀಕರಣಕ್ಕಾಗಿ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯ...

ಹೊಸ ವಿದ್ಯುತ್ ಸಂಪರ್ಕಕ್ಕೆ OC ಪಡೆಯುವುದರಿಂದ ವಿನಾಯಿತಿ: ಸದುಪಯೋಗಕ್ಕೆ ಸೆಸ್ಕ್‌ ಮನವಿ

ಮೈಸೂರು, ಜೂನ್,24, 2026 (www.justkannada.in):  ಹೊಸದಾಗಿ ನಿರ್ಮಿಸಿರುವ ಮನೆಗಳಿಗೆ ಶಾಶ್ವತ ವಿದ್ಯುತ್...

ದೇವನಹಳ್ಳಿ ಭೂಸ್ವಾಧೀನ: ಎಕರೆಗೆ ₹2.70 ಕೋಟಿ ಪರಿಹಾರಕ್ಕೆ ಶಿಫಾರಸು

ಬೆಂಗಳೂರುಜೂನ್,24,2026 (www.justkannada.in): ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಗೋಕರೆಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮದಲ್ಲಿ...

ಶಾಸಕ ಪ್ರದೀಪ್ ಈಶ್ವರ್ ಟ್ರಸ್ಟ್‌ಗೆ ನಿವೇಶನ ಹಂಚಿಕೆ: ಹೈಕೋರ್ಟ್ ಯಥಾಸ್ಥಿತಿ ಆದೇಶ

  ಬೆಂಗಳೂರು, ಜೂ.24: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಸೇರಿದ ಪರಿಶ್ರಮ...