7
May, 2026

A News 365Times Venture

7
Thursday
May, 2026

A News 365Times Venture

ಅಮಾನತ್ತಾಗಿದ್ದ ಹೆಡ್ ಕಾನ್ಸ್ ಟೇಬಲ್ ಕಾಣೆ: ಪ್ರಕರಣ ದಾಖಲು

Date:

ಮೈಸೂರು,ಮೇ,7,2026 (www.justkannada.in):  ಅಮಾನತಿನಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಹೆಡ್ ಕಾನ್ಸ್ ಟೇಬಲ್ ಧನಂಜಯ್ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಅವರ ಪತ್ನಿ ರಾಜೇಶ್ವರಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದಾರೆ.

ಕಾಣೆಯಾಗಿರುವ ಧನಂಜಯ್ ಅವರು ದೇವರಾಜ ಪೊಲೀಸ್ ಠಾಣೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಕರ್ತವ್ಯದ ವೇಳೆ ದೇವರಾಜ ಠಾಣೆಯ ಸಿಬ್ಬಂದಿ ಉಮೇಶ್ ಹಾಗೂ ಧನಂಜಯ್ ನಡುವೆ 112 ಗರುಡ ವಾಹನದಲ್ಲಿ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದು, ಬಳಿಕ ಚಕಮಕಿ ಸಂಭವಿಸಿತ್ತು. ಈ ವೇಳೆ ಉಮೇಶ್ ಅವರು ಧನಂಜಯ್ ಮೇಲೆ ಹಲ್ಲೆ ನಡೆಸಿದ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿತ್ತು.

ಘಟನೆಯ ಬಳಿಕ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಇಬ್ಬರು ಸಿಬ್ಬಂದಿಯನ್ನೂ ಅಮಾನತು ಮಾಡಿದ್ದರು. ಬಳಿಕ ಉಮೇಶ್ ಅವರ ಅಮಾನತು ಆದೇಶವನ್ನು ರದ್ದುಪಡಿಸಿ ಮರು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದರೂ, ಧನಂಜಯ್ ಅವರ ಅಮಾನತು ಮುಂದುವರಿಸಲಾಗಿತ್ತು ಎನ್ನಲಾಗಿದೆ.

ಈ ವಿಚಾರದಿಂದ ಧನಂಜಯ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯವಾಗದೆ ಅವರು ಮನನೊಂದಿದ್ದರು ಎನ್ನಲಾಗಿದೆ. ಮೂರು ದಿನಗಳ ಹಿಂದೆ ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸದಿಂದ ಹೊರಟಿದ್ದ ಧನಂಜಯ್ ಮನೆಗೆ ಮರಳಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ರಾಜೇಶ್ವರಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ENGLISH SUMMARY..

Mysuru: Suspended City Armed Reserve head constable Dhananjay has reportedly gone missing, and his wife Rajeshwari has filed a missing complaint at Vijayanagar Police Station.

Dhananjay was serving as a driver at Devaraja Police Station. A few days ago, he was involved in a clash with fellow policeman Umesh inside a 112 Garuda vehicle while on duty. A viral video showing Umesh allegedly assaulting Dhananjay had embarrassed the police department, following which Mysuru Police Commissioner Seema Latkar suspended both personnel.

Recently, Umesh’s suspension was revoked and he was reinstated, while Dhananjay’s suspension continued. Family members say Dhananjay was mentally disturbed over the issue. He reportedly left his Hootagalli Housing Board residence three days ago and has not returned home since.

Key words: Suspended, head constable, missing, Case, registered

The post ಅಮಾನತ್ತಾಗಿದ್ದ ಹೆಡ್ ಕಾನ್ಸ್ ಟೇಬಲ್ ಕಾಣೆ: ಪ್ರಕರಣ ದಾಖಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪೋಕ್ಸೋ ಕೇಸ್ ಎದುರಿಸುತ್ತಿರುವವರಿಗೆ ಅಭಿಮಾನೋತ್ಸವ: ಕೇಂದ್ರ ಗೃಹ ಸಚಿವರೇ ಬರುತ್ತಿರುವುದು ಹಾಸ್ಯಸ್ಪದ- ಹೆಚ್ ವಿಶ್ವನಾಥ್

ಮೈಸೂರು,ಮೇ,7,2026 (www.justkannada.in):  ಪೋಕ್ಸೋ ಕೇಸ್ ಎದುರಿಸುತ್ತಿರುವವರಿಗೆ ಅಭಿಮಾನೋತ್ಸವ ನಡೆಸುತ್ತಿರುವುದು ಮತ್ತು ಈ...

ರೈತರ ಹಣಕಾಸಿನ ನಿರ್ವಹಣೆ ಬಗ್ಗೆ ಬ್ಯಾಂಕ್ ಹಣಕಾಸು ಸಂಸ್ಥೆಗಳಲ್ಲಿರುವ ಸಮಸ್ಯೆ ಬಗೆಹರಿಸಿ- ಕುರುಬೂರು ಶಾಂತಕುಮಾರ್

ಬೆಂಗಳೂರು,ಮೇ,7,2026 (www.justkannada.in): ರೈತರ ಹಣಕಾಸಿನ ನಿರ್ವಹಣೆ ಬಗ್ಗೆ ಬ್ಯಾಂಕುಗಳಲ್ಲಿ ಹಣಕಾಸು ಸಂಸ್ಥೆಗಳಲ್ಲಿ...

ಆಧಾರ ರಹಿತ ಆರೋಪ: ಟಿ.ಆರ್ ಚಂದ್ರಶೇಖರ್ ವಿರುದ್ದ ಕ್ರಮಕ್ಕೆ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ

ಮೈಸೂರು,ಮೇ,5,2026 (www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ, ಟೆಂಡರ್ ಪ್ರಕ್ರಿಯೆ ಮತ್ತು ಆರ್ಥಿಕ...