ಬೆಂಗಳೂರು,ಮೇ,18,2026 (www.justkannada.in): ತುಮಕೂರಿನಲ್ಲಿ ಸಾಧನಾ ಸಮಾವೇಶ ವಿಚಾರ, ಇದು ಶಕ್ತಿಪ್ರದರ್ಶನ ಅಲ್ಲ. ನುಡಿದಂತೆ ನಡೆದಿದ್ದೇವೆ ಎಂದು ಹೇಳಲು ಹೊರಟಿದ್ದೇವೆ ಅಷ್ಟೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಮ್ಮ ಸರ್ಕಾರ ಬಂದು ಮೂರು ವರ್ಷ ಆಗಿದೆ ಸರ್ಕಾರದಿಂದ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡುತ್ತಿದ್ದೇವೆ. ಈ ಮೂರು ವರ್ಷದಲ್ಲಿ ಏನೇನು ಈಡೇರಿಸಿದ್ದೇವೆ ಅಂತಾ ತಿಳಿಸುತ್ತೇವೆ ಎಂದರು.
ಸಮಾವೇಶದಲ್ಲಿ ಪರಮೇಶ್ವರ್ ಶಕ್ತಿ ಪ್ರದರ್ಶನ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಯಾರ ಶಕ್ತಿ ಪ್ರದರ್ಶನವೂ ಇಲ್ಲ ಸರ್ಕಾರದ ಕಾರ್ಯಕ್ರಮ ಜಾರಿ ಬಗ್ಗೆ ಮಾತನಾಡಲು ಸಮಾವೇಶ ಮಾಡಲಾಗುತ್ತಿದೆ. ಈ ಸಮಾವೇಶವನ್ನ ಶಕ್ತಿ ಪ್ರದರ್ಶನ ಅಂತಾ ನೋಡಲ್ಲ ನುಡಿದಂತೆ ನಡೆದಿದ್ದೇವೆ ಅಂತಾ ಹೇಳಲು ಹೊರಟಿದ್ದೇವೆ ಅಷ್ಟೆ. ಇದು ಸರ್ಕಾರದ ಕಾರ್ಯಕ್ರಮ ಹೈಕಮಾಂಡ್ ನಾಯಕರನ್ನ ಕರೆದಿಲ್ಲ ಎಂದರು.
Key words: Tumkur, Sadhana Conference Home Minister Parameshwara
The post ಶಕ್ತಿ ಪ್ರದರ್ಶನ ಅಲ್ಲ, ನುಡಿದಂತೆ ನಡೆದಿದ್ದೇವೆ ಎಂದು ಹೇಳಲು ಹೊರಟಿದ್ದೇವೆ ಅಷ್ಟೆ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




