ವಿಜಯಪುರ,ಮೇ,16,2026 (www.justkannada.in): ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿಚಾರ ಸಂಬಂಧ ಸರ್ಕಾರ ಸಮರ್ಥವಾಗಿ ಎಸ್ ಐಆರ್ ಎದುರಿಸಲು ಸಿದ್ದವಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಎಲ್ಲಾ ಸಚಿವರು ಎಸ್ ಐಆರ್ ಎದುರಿಸಲು ಸಿದ್ದರಿದ್ದೇವೆ. ಎಸ್ ಐಆರ್ ವಿಚಾರದಲ್ಲಿ ಅನೇಕ ಸಭೆಗಳನ್ನ ಮಾಡಿದ್ದೇವೆ. ರಾಜ್ಯದ ಜನರಿಗೆ ಯಾವುದೇ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ, ಎಸ್ ಐಆರ್ ಕುರಿತು ಸರ್ಕಾರ ಈಗಾಗಲೇ ಮಾನಿಟರಿಂಗ್ ಮಾಡಿದೆ. ಎಲ್ಲಾ ರೀತಿಯಲ್ಲೂ ಎದುರಿಸಲು ಸಿದ್ದವಿದೆ ಎಂದರು.
3ನೇ ಹಂತದ ಮತಪಟ್ಟಿ ಪರಿಷ್ಕರಣೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು ಜೂನ್ 20ರಿಂದ ಕರ್ನಾಟಕದಲ್ಲಿ ಎಸ್ ಐಆರ್ ಆರಂಭವಾಗಲಿದೆ.
Key words: Government, ready, SIR, Minister, M.B. Patil
The post SIR ಸಮರ್ಥವಾಗಿ ಎದುರಿಸಲು ಸರ್ಕಾರ ಸಿದ್ದ- ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




