27
June, 2026

A News 365Times Venture

27
Saturday
June, 2026

A News 365Times Venture

ಹಿರಿಯ ವರದಿಗಾರ ಜಯಂತ್.ಜಿ ಅವರಿಗೆ ‘ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’

Date:

ಮೈಸೂರು,ಜೂನ್,2,2026 (www.justkannada.in): ದೂರದರ್ಶನ ಹಿರಿಯ ವರದಿಗಾರ ಜಯಂತ್.ಜಿ  ಅವರಿಗೆ ಸರ್ಕಾರ ಕೊಡುವ 2026 ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ 29 ವರ್ಷಗಳಿಂದ ಮೈಸೂರು ಜಿಲ್ಲೆಯಲ್ಲಿ ದೂರದರ್ಶನ ವಾಹಿನಿಗೆ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿರುವ. ಇವರ  ಸೇವೆಯನ್ನು ಪರಿಗಣಿಸಿ, ಜೀವಮಾನದ ಸಾಧನೆಗಾಗಿ  ಮಾಧ್ಯಮ ಕ್ಷೇತ್ರದವರಿಗೆ ಕೂಡುವ  ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ 2024 ರ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನೀಡುವ ಮಾನವೀಯ ಮೌಲ್ಯಗಳು ಉಳ್ಳ ಅತ್ಯುತ್ತಮ ವರದಿಗಾಗಿ ನಾಲ್ಕು ಬಾರಿ ಅತ್ಯುತ್ತಮ ವಿದ್ಯುನ್ಮಾನ ವರದಿ ಪ್ರಶಸ್ತಿಗೆ ಭಾಜನರಾಗಿದ್ದು. ಜಿಲ್ಲಾ ಪತ್ರಕರ್ತರ ಸಂಘ ಎಲೆಕ್ಟ್ರಾನಿಕ್ ಮಾಧ್ಯಮದ ಅವಿರತ ಸೇವೆಯನ್ನು ಪರಿಗಣಿಸಿ 2015 ರಲ್ಲಿ ಹಿರಿಯ ವಿದ್ಯುನ್ಮಾನ ಪತ್ರಕರ್ತರ ಗೌರವಕ್ಕೆ ಪಾತ್ರರಾಗಿದ್ದರು.  2019ರಲ್ಲಿ ಜಯಂತ್.ಜಿ ಅವರಿಗೆ ಜಿಲ್ಲಾ ಆಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಅತ್ಯಂತ ಹಿರಿಯ ವಿದ್ಯುನ್ಮಾನ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿರುವ. ಇವರಿಗೆ ಜಿಲ್ಲಾ ಆಡಳಿತ ಕೊಡ ಮಾಡುವ 2026 ರ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಶಸ್ತಿಗೆ  ವಿದ್ಯುನ್ಮಾನ  ವಿಭಾಗದಿಂದ ಆಯ್ಕೆಯಾಗಿದ್ದಾರೆ.

Key words: Senior reporter, Jayant.G, ‘Rajashree Nalvadi Krishnaraja Wodeyar Award’

The post ಹಿರಿಯ ವರದಿಗಾರ ಜಯಂತ್.ಜಿ ಅವರಿಗೆ ‘ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನ ಮಾತೃ ಇಲಾಖೆಗೆ ವಾಪಸ್ ಕರೆಸಿ- ಸಚಿವ ರಾಮಲಿಂಗರೆಡ್ಡಿ ಸೂಚನೆ

ಬೆಂಗಳೂರು,ಜೂನ್,26,2026 (www.justkannada.in): ಬೇರೆ ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಲಸಂಪನ್ಮೂಲ ಇಲಾಖೆಯ...

ಈ ಬಾರಿ ಮೈಸೂರು ದಸರಾದಲ್ಲಿ ವಿಜೃಂಭಣೆಯಿಂದ ಕಂಬಳ ನಡೆಸುತ್ತೇವೆ- ಶಾಸಕ ಅಶೋಕ್ ರೈ

ಮೈಸೂರು,ಜೂನ್,26,2026 (www.justkannada.in):  ಮೈಸೂರು ದಸರಾದಲ್ಲಿ ಕಂಬಳ ಮಾಡಲು ಸಿಎಂ ಡಿಕೆ ಶಿವಕುಮಾರ್...

ಬಿಡದಿ ಟೌನ್ ಶಿಪ್ ಬಗ್ಗೆ ವರಿಷ್ಠರು ಪರಿಹಾರ ನೀಡ್ತಾರೆ- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಜೂನ್,26,2026 (www.justkannada.in): ಬಿಡದಿ ಟೌನ್ ಶಿಪ್ ಬಗ್ಗೆ ಗೊಂದಲ ಇರುವುದು ನಿಜ....

ಡಿಸಿಎಂ ಪರಮೇಶ್ವರ್ ತವರಲ್ಲಿ ಮಲ ಹೊರುವ ಪದ್ದತಿ ಜೀವಂತ

ತುಮಕೂರು,ಜೂನ್,26,2026 (www.justkannada.in):  ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಮಲಹೊರುವ...