ಬೆಂಗಳೂರು,ಜೂನ್,4,2026 (www.justkannada.in): ಅಧಿಕಾರ ಬೇಕೆನ್ನುವವರು ಸಿಎಂ ಡಿಕೆ ಶಿವಕುಮಾರ್ ಜೊತೆ ಹೋಗಿ. ಪಕ್ಷ ಬೆಳೆಸಬೇಕು ಎನ್ನುವವರು ನನ್ನ ಜೊತೆ ಬನ್ನಿ ಎಂದು ನೂತನ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ ಖಡಕ್ ಮಾತುಗಳನ್ನಾಡಿದ್ದಾರೆ.
ನೂತನ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನ ಭೇಟಿಯಾಗಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಕೆ ಹರಿಪ್ರಸಾದ್, ಯಾರಿಗೆ ಅಧಿಕಾರ ಬೇಕು ಅವರು ಡಿಕೆ ಶಿವಕುಮಾರ್ ಜೊತೆಗೆ ಹೋಗಿ. ಪಕ್ಷ ಬೆಳೆಸಬೇಕು ಎನ್ನವವರು ನನ್ನ ಜೊತೆ ಬನ್ನಿ ಸಂಘಟನೆ ಸರ್ಕಾರ ಹಂಚಿಕೊಂಡು ಮುಂದೆ ಹೋಗೋಣ ಎಂದರು.
ಪವಿತ್ರವಾದ ಪಕ್ಷದಲ್ಲಿ ಅಧ್ಯಕ್ಷ ಹುದ್ದೆ ನೀಡಿದ್ದಾರೆ. ಎಲ್ಲಾ ಕಾರ್ಯಕರ್ತರಿಗೆ ಭರವಸೆ ಕೊಡುತ್ತೇನೆ ಅವರ ಜೊತೆ ನಾನಿದ್ದೇನೆ. ಕಾರ್ಯಕರ್ತರಿಗೆ ಏನೇ ಆದರೂ ಕೂಡ ಜೊತೆಗೆ ಇರುತ್ತೇನೆ ಎಂದು ಬಿಕೆ ಹರಿಪ್ರಸಾದ್ ತಿಳಿಸಿದರು.
Key words: power, CM, DK Shivakumar, KPCC, President, B.K. Hariprasad
The post ಅಧಿಕಾರ ಬೇಕಾದ್ರೆ ಡಿಕೆಶಿ ಜೊತೆ ಹೋಗಿ, ಪಕ್ಷ ಬೆಳೆಸಬೇಕೆನ್ನುವವರು ನನ್ನ ಜೊತೆ ಬನ್ನಿ- ಬಿ.ಕೆ ಹರಿಪ್ರಸಾದ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




