ಬೆಂಗಳೂರು,ಅಕ್ಟೋಬರ್,6,2026 (www.justkannada.in): ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಎಲ್ಲೂ ಅಪಸ್ವರ ಬಂದಿಲ್ಲ. ಬಿಜೆಪಿ ಜೆಡಿಎಸ್ ನವರು ಹಾಲು ಜೇನಿನಂತೆ ಇದ್ದೇವೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಭರವಸೆ ಇಲ್ಲ. ಅವರು ಮಾಡಿಸಿರುವ ಸರ್ವೇಯಲ್ಲಿ 50ರಿಂದ 60 ಸ್ಥಾನಗಳು ಮಾತ್ರ ಬಂದಿದೆ. ಹೀಗಾಗಿ ಅವರು ವಿಚಲಿತರಾಗಿದ್ದಾರೆ. ಕಾಂಗ್ರೆಸ್ಸಿಗರು ಈಗಾಗಲೇ ಚಾಪೆ ಸುತ್ತಲು ಆರಂಭಿಸಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಅಪಸ್ವರ ಕೇಳಿ ಬಂದಿಲ್ಲ. ರಾಜ್ಯದಲ್ಲಿ ಎರಡೂ ಪಕ್ಷದವರು ಹಾಲು ಜೇನಿನಂತೆ ಇದ್ದೇವೆ ಎಂದರು.




