ವಿಜಯಪುರ,ಜೂನ್,20,2025 (www.justkannada.in): ಕರ್ನಾಟಕದಲ್ಲಿ ಬಿಜೆಪಿ ಐಸಿಯುನಲ್ಲಿದೆ. ಹೀಗಾಗಿ ಹೀಗಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಅಸ್ತಿತ್ವ ಏನು ಉಳಿದಿಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಈಗಲಾದರೂ ತಿಳಿದುಕೊಳ್ಳಲಿ ಎಂದು ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಕಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕದಲ್ಲಿ ಬಿಜೆಪಿ ಐಸಿಯುನಲ್ಲಿದೆ. ಒಂದು ಹೋರಾಟ ಮಾಡಲು ಸಹ ಜನ ಸೇರುವುದಿಲ್ಲ. ಇದಕ್ಕೆ ಕಾರಣ ಅಂದ್ರೆ ನಾಯಕತ್ವ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆಗೂ ಬಿಜೆಪಿ ನಾಯಕರ ಹೊಂದಾಣಿಕೆ ಇಲ್ಲ. ಜೆಡಿಎಸ್ ನಮ್ಮ ಮಿತ್ರ ಪಕ್ಷ. ಹೀಗಿದ್ರೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದರು.
ಈಗಲಾದರೂ ಕೇಂದ್ರ ಸಚಿವ ಅಮಿತ್ ಶಾ ತಿಳಿದುಕೊಳ್ಳಬೇಕು ಬಿಎಸ್ ವೈ ಅಸ್ತಿತ್ವ ಏನು ಉಳಿದಿಲ್ಲ ಅಂತಾ. ಈಗಲೂ ಬಿಎಸ್ ಯಡಿಯೂರಪ್ಪ ಜೀ ಅಂದರೇ ಕಷ್ಟ ಆಗುತ್ತೆ ಎಂದು ತಿಳಿದುಕೊಳ್ಳಬೇಕು ಎಂದು ಯತ್ನಾಳ್ ಹೇಳಿದರು.
Key words: Amit Shah, BS Yeddyurappa, MLA, Basanagowada Patil Yatnal
The post BSY ಅಸ್ತಿತ್ವ ಏನು ಉಳಿದಿಲ್ಲ ಎಂದು ಅಮಿತ್ ಶಾ ಈಗಲಾದರೂ ತಿಳಿದುಕೊಳ್ಳಲಿ- ಶಾಸಕ ಯತ್ನಾಳ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.