ಬೆಂಗಳೂರು, ಮೇ 6,2026 (www.justkannada.in): ತಮಿಳುನಾಡಿನಲ್ಲಿ ಡಿಎಂಕೆ ಬೆನ್ನಿಗೆ ಚೂರಿ ಹಾಕಿರುವ ಕಾಂಗ್ರೆಸ್ ಗೆದ್ದೆತ್ತಿನ ಬಾಲ ಹಿಡಿದಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ತಮಿಳುನಾಡಿನಲ್ಲಿ ಡಿಎಂಕೆ ಬೆನ್ನಿಗೆ ಚೂರಿ ಹಾಕಿರುವ ಕಾಂಗ್ರೆಸ್ ಎಂದಿಗೂ ನಂಬಿಕೆಗೆ ಅರ್ಹವಲ್ಲದ ರಾಜಕೀಯ ಪಕ್ಷ ಎಂಬುದು ಮತ್ತೆಮತ್ತೆ ಸಾಬೀತಾಗುತ್ತದೆ. ಕಾಂಗ್ರೆಸ್ ಗೆ ತತ್ವ, ಸಿದ್ದಾಂತ ಯಾವುದೂ ಇಲ್ಲ. ಇದೀಗ ಅದರ ನಿಜ ಬಣ್ಣ ತಮಿಳು ನಾಡಿನಲ್ಲಿ ಬಟಾಬಯಲಾಗಿದೆ. ಗೆದ್ದೆತ್ತಿನ ಬಾಲ ಹಿಡಿಯುವ ಸಂಸ್ಕೃತಿ ಇರುವ ಈ ಪಕ್ಷವನ್ನು ಬೆಂಬಲಿಸುವವರು ಯೋಚಿಸಿ ತೀರ್ಮಾನ ಮಾಡಬೇಕು. ಜನ ಅದಕ್ಕಾಗಿಯೇ ಈ ಪಕ್ಷವನ್ನು ದೇಶದಿಂದಲೇ ತಿರಸ್ಕರಿಸುತ್ತಿದ್ದಾರೆ ಎಂದು ಕುಟುಕಿದರು.
ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧೆ ಮಾಡಿದವರು ಇದೀಗ ಡಿಎಂಕೆ ಸೋಲುತ್ತಿದ್ದಂತೆ ಟಿವಿಕೆ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಯಾರು ಇವರನ್ನು ನಂಬಿದ್ದರೋ ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ. ಯಾವ ರೀತಿ ನಂಬಿದವರಿಗೆ ಕೈ ಕೊಡುತ್ತದೆ ಎಂಬುದಕ್ಕೆ ಈ ನಿದರ್ಶನವೇ ಸ್ಪಷ್ಟ ಸಾಕ್ಷಿ. ಹೀಗಾಗಿ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಿ ಎಂದು ಆರ್.ಅಶೋಕ್ ತಿಳಿಸಿದರು.
Key words: DMK, Congress, Tamilnadu, R. Ashok
The post DMK ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಗೆದ್ದೆತ್ತಿನ ಬಾಲ ಹಿಡಿದಿದೆ-ಆರ್.ಅಶೋಕ್ ವ್ಯಂಗ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




