17
July, 2025

A News 365Times Venture

17
Thursday
July, 2025

A News 365Times Venture

FRAUD CASE: ರಿಜಿಸ್ಟಾರ್ ಹುದ್ದೆ ಕೊಡಿಸುವುದಾಗಿ 35 ಲಕ್ಷ ರೂ. ವಂಚನೆ, ಪೊಲೀಸರಿಗೆ ದೂರು.

Date:

ಬೆಂಗಳೂರು, ಮೇ.೦೮,೨೦೨೫: ಇಲ್ಲಿನ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟಾರ್‌ ಹುದ್ದೆ ಕೊಡಿಸುವುದಾಗಿ 35 ಲಕ್ಷ ರೂಪಾಯಿ  ವಂಚಿಸಿದ್ದಾರೆ. ಹಣ ಹಿಂದಿರುಗಿಸುವಂತೆ ಕೇಳಿದಾಗ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿವಿಯ ಪರಿಸರ‌ ವಿಜ್ಞಾನ ವಿಭಾಗದ ಪ್ರೋಫೆಸರ್‌‌ ಪೊಲೀಸರಿಗೆ ದೂರು ನೀಡಿದ್ದಾರೆ.

ಈ‌ ಸಂಬಂಧ ಗೋವಿಂದರಾಜ್ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ‌ U/s 318 (4) 316(2) 352, 351 (2) , 351 ( 3) ಅಡಿ‌ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಘಟನೆ ವಿವರ:

ದೂರದಾರರಾದ ಪ್ರೊ. ಆರ್.ಕೆ.ಸೋಮಶೇಖರ್ ಅವರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಪರಿಸರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸ್ನೇಹಿತರ‌ ಮೂಲಕ 2015 ರಂದು  ಬಿ.ಜಿ.ರವಿಕುಮಾರ್‌ ಎಂಬಾತನ ಪರಿಚಯವಾಗುತ್ತದೆ.

ಈ, ಬಿ.ಜಿ‌. ರವಿಕುಮಾರ್  ನನಗೆ ಸರ್ಕಾರದಲ್ಲಿ  ಹಲವಾರು ಪ್ರಭಾವಿ ಸಚಿವರ ಪರಿಚಯ ವಿದೆ. ಈ ಪರಿಚಯದ ಮೂಲಕ ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ನಂಬಿಕೆ ಹುಟ್ಟಿಸುತ್ತಾರೆ. ಅದಕ್ಕೆ 50 ಲಕ್ಷ ರೂಪಾಯಿ ನೀಡಬೇಕಾಗುತ್ತದೆ ಎಂದು ಕಂಡಿಷನ್‌ ಹಾಕುತ್ತಾರೆ.

ಬಿ.ಜಿ.ರವಿಕುಮಾರ್ ಮಾತು ನಂಬಿದ ಪ್ರೊ. ಆರ್.ಕೆ.ಸೋಮಶೇಖರ್, ಮೊದಲ ಕಂತಿನಲ್ಲಿ 20 ಲಕ್ಷ ರೂಪಾಯಿ ಹಾಗೂ ಬಂಗಾರಪೇಟೆ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಪೂರ್ಣಿಮಾ ಅವರ ಮುಖಾಂತರ 15 ಲಕ್ಷ ರೂಪಾಯಿ ಪಾವತಿಸುತ್ತಾರೆ. ಆದರೆ ಬಿ.ಜಿ.ರವಿಕುಮಾರ್ ಭರವಸೆ ನೀಡಿದಂತೆ ರಿಜಿಸ್ಟಾರ್ ಹುದ್ದೆ ಕೊಡಿಸುವುದಿಲ್ಲ, 2019 ರಂದು ಆರ್.ಕೆ. ಸೋಮಶೇಖರ್  ಸೇವೆಯಿಂದ ನಿವೃತ್ತರಾಗುತ್ತಾರೆ.

ಬಿ.ಜಿ.ರವಿಕುಮಾರ್ 35 ಲಕ್ಷ ರೂಪಾಯಿ ವಾಪಾಸ್ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ  05-05-2025 ರಂದು‌ ಆರ್.ಕೆ‌. ಸೋಮಶೇಖರ್ ಅವರು ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಬಿ.ಜಿ.ರವಿಕುಮಾರ್ ವಿರುದ್ದ ದೂರು ದಾಖಲಿಸಿದ್ದಾರೆ.

key words:  Rs 35 lakh, registrar, Fraud, complaint to police. Jnanabharathi University, Bengaluru.

vtu

SUMMARY:

Rs 35 lakh for the post of registrar. Fraud, complaint to police. He was duped of Rs 35 lakh on the pretext of getting a registrar’s post in Jnanabharathi University in Bengaluru. A professor of environmental science at the university has lodged a complaint with the police alleging that he was threatened with death when he was asked to return the money.

The post FRAUD CASE: ರಿಜಿಸ್ಟಾರ್ ಹುದ್ದೆ ಕೊಡಿಸುವುದಾಗಿ 35 ಲಕ್ಷ ರೂ. ವಂಚನೆ, ಪೊಲೀಸರಿಗೆ ದೂರು. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೆ.ಆರ್ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಭೇಟಿ, ಪರಿಶೀಲನೆ

ಮೈಸೂರು ಜುಲೈ,16,2025 (www.justkannada.in): ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ...

ಸರ್ಕಾರದ ಕ್ರಮಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ: ಮುಜರಾಯಿ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ

ಬೆಂಗಳೂರು, ಜುಲೈ,16, 2025 (www.justkannada.in): ಗಾಳಿ ಆಂಜನೇಯ ದೇವಾಲಯವನ್ನ ಮುಜರಾಯಿ ಇಲಾಖೆ...

ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಮೊದಲ ಸಭೆ ಯಶಸ್ವಿ:ಮಹತ್ವದ ಮಾಹಿತಿ ಹಂಚಿಕೊಂಡ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು,ಜುಲೈ,16,2025 (www.justkannada.in): ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ...

ವಿಜಯಪುರ: ಬಂಜಾರ ಕಸೂತಿ ಸಂಸ್ಥೆ ಕ್ಷೇತ್ರಾಧ್ಯಯನಕ್ಕೆ ಎನ್.ಐ.ಎಫ್.ಟಿ. ವಿದ್ಯಾರ್ಥಿಗಳು

ವಿಜಯಪುರ,ಜುಲೈ,16,2025 (www.justkannada.in): ಜಿಲ್ಲೆಯಲ್ಲಿರುವ ಬಂಜಾರ ಕಸೂತಿ ಸಂಸ್ಥೆಗೆ ಬೆಂಗಳೂರಿನ ನ್ಯಾಷನಲ್‌ ಇನ್ಸ್ಟಿಟ್ಯೂಟ್‌...