ಮೈಸೂರು,ಜೂನ್,16,2025 (www.justkannada.in): FSSAI ನೊಂದಣಿ/ಪರವಾನಗಿ (Rigistration/License)ಗಳನ್ನು ನವೀಕರಿಸುವುದಾಗಿ ಹೇಳಿ ಆಹಾರ ವ್ಯಾಪಾರಸ್ಥರಿಗೆ ಅನಾಮಧೇಯ ವ್ಯಕ್ತಿಗಳು ವಂಚನೆ ಮಾಡುತ್ತಿದ್ದು ಈ ಬಗ್ಗೆ ಎಚ್ಚರ ವಹಿಸುವಂತೆ ಆಹಾರ ಉದ್ದಿಮೆದಾರರಿಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂಕಿತ ಅಧಿಕಾರಿ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ಅಧಿಕಾರಿಗಳು , ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಕಛೇರಿ ವ್ಯಾಪ್ತಿಗೆ ಒಳಪಡುವ FSSAI ನೊಂದಣಿ/ಪರವಾನಗಿ (Rigistration/License)ಗಳನ್ನು ನವೀಕರಿಸುವುದಾಗಿ ಅನಾಮಧೇಯ ವ್ಯಕ್ತಿಗಳಿಂದ ದೂರವಾಣಿ ಕರೆಗಳು ಬರುತ್ತಿರುವುದು ಗಮನಕ್ಕೆ ಬಂದಿದೆ. ಆಹಾರ ವ್ಯಾಪಾರಸ್ಥರಿಗೆ ಕರೆಮಾಡಿ ನೊಂದಣಿ/ಪರವಾನಗಿ (Rigistration/License)ಗಳನ್ನು ನವೀಕರಿಸಿ ನೀಡುತ್ತಿದ್ದಾರೆ. ಆದರೆ ಇವರುಗಳು ಲೈಸೆನ್ಸ್ ಅನ್ನು ಎಡಿಟ್ ಮಾಡಿ 05 ವರ್ಷ ಅವಧಿ ಇರುವಂತೆ ಆಹಾರ ಉದ್ದಿಮೆದಾರರಿಗೆ ಲೈಸೆನ್ಸ್ ರಿನಿವಲ್ ಮಾಡಿ ವಾಟ್ಸಪ್ ಗೆ ಕಳುಹಿಸುತ್ತಿದ್ದಾರೆ. ಆದರೆ ವಾಸ್ತವಾಂಶವಾಗಿ 01 ಅಥವಾ 02 ವರ್ಷಕ್ಕೆ ನವೀಕರಿಸಿ 05 ವರ್ಷದ ಆನ್ ಲೈನ್ ಮೊತ್ತವನ್ನು ಆಹಾರ ಉದ್ದಿಮೆದಾರರಿಂದ Google Pay ಮೂಲಕ ಪಡೆದು, ಆಹಾರ ಉದ್ದಿಮೆದಾರರಿಗೆ ಕಛೇರಿಯಿಂದ ಕರೆಮಾಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದಾರೆ. ಆದುದರಿಂದ, ಆಹಾರ ಉದ್ದಿಮೆದಾರರು ಈ ವಿಷಯದ ಬಗ್ಗೆ ಎಚ್ಚರವಹಿಸಬೇಕೆಂದು ಕೋರಿದ್ದಾರೆ.
ಹೀಗಾಗಿ ಆಹಾರ ಉದ್ದಿಮೆದಾರರು www.foscos.fssai.gov.in ಈ ವೆಬ್ ಸೈಟ್‌ನಲ್ಲಿ ತಾವೇ ತಮ್ಮ ಪರವಾನಗಿ ಅಥವಾ ನೊಂದಣಿಯನ್ನು ನವೀಕರಣ ಮಾಡಿಕೊಳ್ಳಬಹುದಾಗಿದೆ. ಮತ್ತೊಮ್ಮೆ FSSAI ಕೇಂದ್ರ ಕಛೇರಿಯಿಂದ ಅಥವಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಕಛೇರಿಯಿಂದ ಯಾವುದೇ ಆಹಾರ ಉದ್ದಿಮೆದಾರರಿಗೆ ದೂರವಾಣಿ ಮೂಲಕ ನವೀಕರಣ ಮಾಡುವುದಾಗಿ ಕರೆ ಬರುವುದಿಲ್ಲ. ಈ ರೀತಿ ಆಹಾರ ಉದ್ದಿಮೆದಾರರು ದೂರವಾಣಿ ಮೂಲಕ, ವಾಟ್ಸಪ್ ನಲ್ಲಿ ಬರುವ ಸಂದೇಶದ ಮೂಲಕ ನವೀಕರಣ ಮಾಡಿಸಿಕೊಂಡಿದ್ದರೆ ತಾವುಗಳು License Id ಅನ್ನು ಬಳಸಿಕೊಂಡು www.foscos.fssai.gov.in ನಲ್ಲಿ ಪರಿಶೀಲಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
Key words: FSSAI, registration, license, renewal, scam, Mysore city corporation
The post FSSAI ನೋಂದಣಿ, ಪರವಾನಗಿ ನವೀಕರಣ ಹೆಸರಲ್ಲಿ ವಂಚನೆ: ಎಚ್ಚರವಹಿಸುವಂತೆ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.