ಬೆಂಗಳೂರು,ಮಾರ್ಚ್,24,2026 (www.justkannada.in): ಐಪಿಎಲ್ 2026 ಆವೃತ್ತಿಯಲ್ಲಿ ಆರ್ ಸಿಬಿ ತಂಡಕ್ಕೆ ಕೆಎಂಎಫ್ ಪ್ರಾಯೋಜಕತ್ವ ನೀಡಿದೆ. ಈ ಮೂಲಕ ನಂದಿನಿ ಉತ್ಪನ್ನಗಳು ದೇಶಕ್ಕೆ ಪರಿಚಯವಾಗಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹೇಳಿದರು.
ಈ ಕುರಿತು ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, ಈ ಬಾರಿಯ ಕ್ರೀಡಾ ಋತುವಿಗೆ ಕರ್ನಾಟಕ ಹಾಲು ಮಹಾಮಂಡಳಿ (KMF) ಆರ್ ಸಿಬಿ ತಂಡದ ಅಧಿಕೃತ ಪಾಲುದಾರನಾಗಿ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಸ್ಥಳೀಯ ಬ್ರ್ಯಾಂಡ್ ನಂದಿನಿಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಗುರುತಿಸುವಂತೆ ಮಾಡುವುದು ಮಂಡಳಿಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಆರ್‌ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನ ಪರಿಚಯಿಸಲಾಗುತ್ತದೆ ಕೆಎಂಎಫ್ ಉತ್ಪನ್ನ ಪ್ರಚಾರಕ್ಕೆ ವಿರಾಟ್, ಕೊಹ್ಲಿ ರಜತ್ ಪಾಟೀದಾರ್, ದೇವದತ್ತ ಪಡಿಕಲ್ 4 ಕೋಟಿ ವೆಚ್ಚದಲ್ಲಿ ಕೆಎಂಎಫ್ ಒಂದು ವರ್ಷದ ಟೆಂಡರ್ ಪಡೆದಿದೆ ಎಂದು ಶಿವಸ್ವಾಮಿ ತಿಳಿಸಿದರು.
Key words: IPL 2026, KMF, official partner, RCB team
The post IPL 2026 : ‘RCB’ ತಂಡಕ್ಕೆ KMF ಅಧಿಕೃತ ಪಾಲುದಾರ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




