ಮೈಸೂರು,ಜೂನ್,19,2025 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಾಮಾನ್ಯವಾಗಿ ಪ್ರತಿ ವರ್ಷ 10 ದಿನಗಳ ಕಾಲ ನಡೆಯುತ್ತದೆ. ದಸರಾ ಪ್ರಾರಂಭವಾಗಿದ್ದಾಗಿನಿಂದಲೂ ಅಂದರೆ 400 ವರ್ಷಗಳಿಂದಲೂ 10 ದಿನಗಳ ಕಾಲ ನಡೆಯುತ್ತಲೇ ಬಂದಿದೆ. ದಸರಾ ಎಂದರೆ ದಶ+ಹರ – ಹತ್ತು ದಿನಗಳ ಆಚರಣೆ. ಆದರೆ ಈ ಬಾರಿ ಮಾತ್ರ ದಸರಾ ಮಹೋತ್ಸವ ದಾಖಲೆ ಬರೆಯಲಿದೆ.
ಹೌದು ಏಕೆಂದರೆ ಈ ಬಾರಿ ದಸರಾ 10 ಅಲ್ಲ, 11 ದಿನ. ಈ ಬಾರಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ ದಸರಾ ಆಚರಣೆ ಮಾಡಲಾಗುತ್ತದೆ. ಸೆಪ್ಟಂಬರ್ 26, ಸೆ.27 ಎರಡೂ ದಿನ ಪಂಚಮಿ ಆಗಮನವಿದ್ದು, ಹೀಗಾಗಿ ಈ ಬಾರಿ 11 ದಿನ ದಸರಾ ಆಚರಣೆ ಇರಲಿದೆ. ಇದು ಇತಿಹಾಸದಲ್ಲೇ ಕಂಡು- ಕೇಳರಿಯದ ರೀತಿಯ ದಸರಾ ಮಹೋತ್ಸವ ಆಗಿದ್ದು, ನಾಲ್ಕು ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸದಲ್ಲೇ ಈ ರೀತಿ 11 ದಿನಗಳ ಕಾಲ ದಸರಾ ಆಚರಣೆ ಮಾಡುತ್ತಿರುವುದು ಇದೇ ಪ್ರಥಮ ಬಾರಿ..!
ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ದಿನಗಳು ವಿದ್ವಾಂಸರಲ್ಲಿಯೇ ಗೊಂದಲ ಹುಟ್ಟುಹಾಕಿದೆ. 1399ರ ವಿಜಯನಗರ ಸಾಮ್ರಾಜ್ಯದ ಆಳ್ವಿಕೆ, 1410 ರ ಮೈಸೂರು ಸಂಸ್ಥಾನದ ಆಳ್ವಿಕೆ ಕಾಲದಿಂದ ದಸರಾ ಮಹೋತ್ಸವ ಆಚರಣೆ ಮಾಡಲಾಗುತ್ತಿದ್ದು, ಈವರೆಗೆ 11 ದಿನಗಳ ಕಾಲ ದಸರಾ ಮಹೋತ್ಸವ ಆಚರಿಸಿದ ಉದಾಹರಣೆಗಳಿಲ್ಲ. ನವರಾತ್ರಿಯ ಮರುದಿನ ವಿಜಯದಶಮಿ ಆಚರಿಸುವುದು ಸಂಪ್ರದಾಯ. ವಿಜಯದಶಮಿಯಂದು ಅರಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆದರೇ ಸರ್ಕಾರದ ವತಿಯಿಂದ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.
ಇನ್ನು 11 ದಿನಗಳ ದಸರಾ ಆಚರಣೆ ಅಚ್ಚರಿ, ಕೌತುಕದ ಜೊತೆಗೆ ಚರ್ಚೆ ಹುಟ್ಟು ಹಾಕಿದ್ದು, ರಾಜ್ಯ ಸರ್ಕಾರ, ಯದುವಂಶದ ರಾಜವಂಶಸ್ಥರು ದಸರಾ ಹೇಗೆ ಆಚರಿಸ್ತಾರೆ? ಕಾದು ನೋಡಬೇಕಿದೆ.
Key words: Mysore Dasara-2025, record-breaking, after, 400 years
The post JK EXCLUSIVE: 400 ವರ್ಷಗಳ ಬಳಿಕ ಈ ಬಾರಿ ದಾಖಲೆ ಬರೆಯಲಿದೆ ದಸರಾ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.