ಮಂಡ್ಯ,ಮೇ,5,2025 (www.justkannada.in): ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆ.ಆರ್.ಎಸ್ ಬೃಂದಾವನ ಪ್ರವೇಶದ ಟೋಲ್ ಶುಲ್ಕ ಹೆಚ್ಚಳ ಮಾಡಿದ ಸರ್ಕಾರ ನಡೆಗೆ ಪ್ರವಾಸಿ ವಾಹನ ಚಾಲಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ಚಳವಾಗಿರುವ ದುಪ್ಪಟ್ಟು ಟೋಲ್ ಕೊಡಲು ವಾಹನ ಚಾಲಕರು ನಿರಾಕರಿಸಿ ಟೋಲ್ ಶುಲ್ಕ ವಸೂಲಿಗರ ಜೊತೆ ಮಾತಿನ ಚಕಮಕಿ ನಡೆಸಿದ್ದು, ಟೋಲ್ ಶುಲ್ಕ ವಸೂಲಿ ಸ್ಥಳದಲ್ಲಿ ಟೋಲ್ ಶುಲ್ಕ ವಸೂಲಿಗರ ಚಾಲಕರು ವಾಗ್ವಾದ ನಡೆಸಿದ್ದಾರೆ.
ಇಬ್ಬರ ನಡುವಿನ ವಾಗ್ವಾದದಿಂದ ಬೃಂದಾವನದ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್ ಜಾಮ್ ನಿಂದಾಗಿ ಪ್ರವಾಸಿಗರ ವಾಹನ ಕಿ.ಮೀ.ಗಟ್ಟಲೆ ನಿಂತಿದ್ದವು. ಕೆಆರ್ ಎಸ್ ಪ್ರಮುಖ ಪ್ರವಾಸಿ ಸ್ಥಳವಾಗಿದ್ದು ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಮಧ್ಯೆ ಇದೀಗ ಟೋಲ್ ಶುಲ್ಕ ಹೆಚ್ಚಿಸಿದ್ದಕ್ಕೆ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
Key words: KRS, entry toll fee, hike, Outrage, against , government
The post KRS ಬೃಂದಾವನ ಪ್ರವೇಶದ ಟೋಲ್ ಶುಲ್ಕ ಹೆಚ್ಚಳ: ಸರ್ಕಾರದ ವಿರುದ್ದ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.