23
August, 2026

A News 365Times Venture

23
Sunday
August, 2026

A News 365Times Venture

KSOU ಬಿಒಎಂ ನೇಮಕಕ್ಕೆ ರಾಜಕೀಯ ಲೆಕ್ಕಾಚಾರ : ಸಾಮಾಜಿಕ ನ್ಯಾಯದ ಸಮೀಕರಣದಲ್ಲಿ ತಿಮ್ಮಯ್ಯ–ಶಿವಕುಮಾರ್ ಹೆಸರು!

Date:

ಮೈಸೂರು, ಆ.೨೨,೨೦೨೬: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್‌ (BOM)ಗೆ ತೆರವಾಗಿರುವ ಸದಸ್ಯ ಸ್ಥಾನಕ್ಕೆ ನೂತನ ನೇಮಕದ ಕಸರತ್ತು ಇದೀಗ ರಾಜಕೀಯ ಹಾಗೂ ಸಾಮಾಜಿಕ ಸಮೀಕರಣಗಳತ್ತ ತಿರುಗಿದೆ.

ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಗತಿ, ಆಡಳಿತಾತ್ಮಕ ನಿರ್ಧಾರಗಳು ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುವ ಬಿಒಎಂನಲ್ಲಿ ಇಬ್ಬರು ಶಾಸಕರು, ಇಬ್ಬರು ವಿಧಾನಪರಿಷತ್‌ ಸದಸ್ಯರು ಸೇರಿದಂತೆ ಸರ್ಕಾರದಿಂದ ನೇಮಕಗೊಂಡ ಸದಸ್ಯರಿದ್ದಾರೆ.

ಈ ಪೈಕಿ ವಿಧಾನಪರಿಷತ್‌ ಸದಸ್ಯರಾಗಿದ್ದ ಅಡಗೂರು ಎಚ್. ವಿಶ್ವನಾಥ್‌ ಅವರ ಅವಧಿ ಕಳೆದ ತಿಂಗಳು ಪೂರ್ಣಗೊಂಡಿದ್ದು, ಅವರ ಸ್ಥಾನ ಇದೀಗ ಖಾಲಿಯಾಗಿದೆ. ಈ ಸ್ಥಾನಕ್ಕೆ ನೂತನ ಸದಸ್ಯರನ್ನು ನೇಮಕ ಮಾಡಲು ಸರ್ಕಾರದ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ.

ಪುಟ್ಟಣ್ಣ ಹೆಸರು ಏಕೆ ಹಿಂದೆ ಸರಿಯುತ್ತಿದೆ?

ಬಿಒಎಂ ಸದಸ್ಯತ್ವಕ್ಕೆ ಕಾಂಗ್ರೆಸ್‌ನ ಹಿರಿಯ ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ, ಮೈಸೂರು ಜಿಲ್ಲೆಯವರಾದ ಡಾ. ತಿಮ್ಮಯ್ಯ ಹಾಗೂ ಇತ್ತೀಚೆಗೆ ನೇಮಕಗೊಂಡಿರುವ ಹಿರಿಯ ಪತ್ರಕರ್ತ ಡಾ. ಕೆ. ಶಿವಕುಮಾರ್‌ ಅವರ ಹೆಸರುಗಳು ಪ್ರಮುಖವಾಗಿ ಪರಿಗಣನೆಯಲ್ಲಿವೆ ಎನ್ನಲಾಗಿದೆ.

ಆದರೆ ಇಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿರುವ ಅಂಶವೆಂದರೆ ಪುಟ್ಟಣ್ಣ ಅವರು ಈಗಾಗಲೇ ಎರಡು ಬಾರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬಿಒಎಂ ಸದಸ್ಯರಾಗಿ ಕಾರ್ಯನಿರ್ವಹಿಸಿರುವುದು.

ಪ್ರೊ. ವಿದ್ಯಾಶಂಕರ್‌ ಹಾಗೂ ಪ್ರೊ. ಶಿವಲಿಂಗಯ್ಯ ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ ಪುಟ್ಟಣ್ಣ ಅವರು ಎರಡು ಬಾರಿ ಬಿಒಎಂ ಸದಸ್ಯರಾಗಿ ನೇಮಕಗೊಂಡಿದ್ದರು. ಹೀಗಾಗಿ ಮತ್ತೊಮ್ಮೆ ಅದೇ ವ್ಯಕ್ತಿಗೆ ಅವಕಾಶ ನೀಡುವುದಕ್ಕಿಂತ, ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯದ ಸಮೀಕರಣವನ್ನು ಕಾಯ್ದುಕೊಳ್ಳುವ ಚಿಂತನೆ ಕಾಂಗ್ರೆಸ್‌ ಸರ್ಕಾರದ ಮಟ್ಟದಲ್ಲಿ ನಡೆದಿದೆ ಎನ್ನಲಾಗಿದೆ.

ಜತೆಗೆ ಪ್ರಮುಖವಾಗಿ ಪುಟ್ಟಣ್ಣ ಅವರ ಪರಿಷತ್‌ ಸದಸ್ಯ ಸ್ಥಾನದ ಅವಧಿ ಪೂರ್ಣಗೊಳ್ಳಲು ಎಂಟೊಂಬತ್ತು ತಿಂಗಳುಗಳು ಮಾತ್ರ ಬಾಕಿ ಉಳಿದಿದೆ. ಪುಟ್ಟಣ್ಣ ಅವರ ಮರು ನೇಮಕ ಪ್ರಸ್ತಾಪ ನೆನೆಗುದಿಗೆ ಬೀಳಲು ಇದು ಒಂದು ಅಂಶ ಎನ್ನಲಾಗಿದೆ.

ಕಾಂಗ್ರೆಸ್‌ ಪಕ್ಷವು ರಾಜಕೀಯವಾಗಿ ಸಾಮಾಜಿಕ ನ್ಯಾಯ, ಪ್ರಾತಿನಿಧ್ಯ ಮತ್ತು ಅವಕಾಶಗಳ ಸಮಾನ ಹಂಚಿಕೆಯನ್ನು ಪ್ರಮುಖ ವಿಚಾರವಾಗಿ ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿ, ಈಗಾಗಲೇ ಎರಡು ಬಾರಿ ಅವಕಾಶ ಪಡೆದಿರುವ ಪುಟ್ಟಣ್ಣ ಅವರ ಬದಲು ಹೊಸ ವ್ಯಕ್ತಿಗಳನ್ನು ಪರಿಗಣಿಸುವುದು ಸೂಕ್ತ ಎಂಬ ಅಭಿಪ್ರಾಯವೂ ಕೇಳಿಬಂದಿದೆ ಎನ್ನಲಾಗಿದೆ.

ತಿಮ್ಮಯ್ಯ–ಶಿವಕುಮಾರ್‌ ಹೆಸರು ಮುನ್ನೆಲೆಗೆ

ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯವರಾದ ಡಾ. ತಿಮ್ಮಯ್ಯ ಮತ್ತು ಹಿರಿಯ ಪತ್ರಕರ್ತರಾಗಿದ್ದ ಡಾ. ಕೆ. ಶಿವಕುಮಾರ್‌ ಅವರ ಹೆಸರುಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ. ಒಂದೆಡೆ ಈಗಾಗಲೇ ಬಿಒಎಂನಲ್ಲಿ ಎರಡು ಬಾರಿ ಅವಕಾಶ ಪಡೆದಿರುವವರಿಗೆ ಮತ್ತೊಮ್ಮೆ ಅವಕಾಶ ನೀಡುವುದಕ್ಕಿಂತ, ಮತ್ತೊಬ್ಬರಿಗೆ ಅವಕಾಶ ಕಲ್ಪಿಸಬೇಕು ಎಂಬ ವಾದ. ಮತ್ತೊಂದೆಡೆ ಮೈಸೂರು ಜಿಲ್ಲೆಯವರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಸ್ಥಳೀಯ ಸಮೀಕರಣ. ಈ ಎರಡೂ ಅಂಶಗಳು ಡಾ. ತಿಮ್ಮಯ್ಯ ಹಾಗೂ ಡಾ. ಕೆ. ಶಿವಕುಮಾರ್‌ ಅವರ ಹೆಸರನ್ನು ಮುನ್ನೆಲೆಗೆ ತಂದಿವೆ ಎನ್ನಲಾಗುತ್ತಿದೆ.

ಅದರಲ್ಲೂ ಡಾ. ಕೆ. ಶಿವಕುಮಾರ್‌ ಅವರ ಹೆಸರು ಅಂತಿಮ ಹಂತದಲ್ಲಿ ಹೆಚ್ಚು ಬಲ ಪಡೆದಿದೆ ಎಂಬ ಮಾತುಗಳು ಸರ್ಕಾರದ ವಲಯದಲ್ಲಿ ಕೇಳಿಬರುತ್ತಿವೆ. ಅಂತಿಮ ನಿರ್ಧಾರ ಮುಖ್ಯಮಂತ್ರಿ ಹಾಗೂ ಸರ್ಕಾರದ ಮಟ್ಟದ ರಾಜಕೀಯ ಸಮೀಕರಣದ ಮೇಲೆ ಅವಲಂಬಿತವಾಗಿದೆ.

ವಿಶ್ವವಿದ್ಯಾಲಯದ ದೃಷ್ಟಿಯಿಂದಲೂ ಮಹತ್ವದ ನೇಮಕ

ಅಡಗೂರು ಎಚ್. ವಿಶ್ವನಾಥ್‌ ಅವರ ಅವಧಿ ಮುಕ್ತಾಯಗೊಂಡು ಈಗಾಗಲೇ ಒಂದು ತಿಂಗಳು ಕಳೆದಿದೆ. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯ ನೇಮಕವೂ ನಡೆದಿದೆ. ಮುಂದಿನ ದಿನಗಳಲ್ಲಿ ಬಿಒಎಂ ಸಭೆ ನಡೆಯಬೇಕಿರುವ ಹಿನ್ನೆಲೆಯಲ್ಲಿ, ಖಾಲಿಯಾಗಿರುವ ಸದಸ್ಯ ಸ್ಥಾನವನ್ನು ಶೀಘ್ರದಲ್ಲೇ ಭರ್ತಿ ಮಾಡಬೇಕಾದ ಅನಿವಾರ್ಯತೆ ವಿಶ್ವವಿದ್ಯಾಲಯದ ಮುಂದಿದೆ. ಹೀಗಾಗಿ ಬಿಒಎಂಗೆ ಯಾರು ಬರುತ್ತಾರೆ ಎಂಬುದು ಕೇವಲ ರಾಜಕೀಯ ನೇಮಕಾತಿಯ ಪ್ರಶ್ನೆಯಲ್ಲ. ವಿಶ್ವವಿದ್ಯಾಲಯದ ಮುಂದಿನ ಶೈಕ್ಷಣಿಕ ಯೋಜನೆಗಳು, ಆಡಳಿತ ಸುಧಾರಣೆ, ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸರ್ಕಾರದೊಂದಿಗೆ ಸಮನ್ವಯದ ದೃಷ್ಟಿಯಿಂದಲೂ ಈ ನೇಮಕ ಮಹತ್ವ ಪಡೆದಿದೆ.

ಈಗ ಪ್ರಶ್ನೆ ಒಂದೇ—ಈಗಾಗಲೇ ಎರಡು ಬಾರಿ ಅವಕಾಶ ಪಡೆದಿರುವ ಪುಟ್ಟಣ್ಣ ಅವರಿಗೆ ಮತ್ತೊಮ್ಮೆ ಅವಕಾಶವೇ? ಅಥವಾ ಕಾಂಗ್ರೆಸ್‌ ಪ್ರತಿಪಾದಿಸುವ ಸಾಮಾಜಿಕ ನ್ಯಾಯ ಮತ್ತು ಹೊಸ ಪ್ರಾತಿನಿಧ್ಯದ ಸಮೀಕರಣದಡಿ ಡಾ. ತಿಮ್ಮಯ್ಯ ಅಥವಾ ಡಾ. ಕೆ. ಶಿವಕುಮಾರ್‌ ಅವರಿಗೆ ಅವಕಾಶವೇ?

ಮೂವರ ಹೆಸರು ಚರ್ಚೆಯಲ್ಲಿದ್ದರೂ, ಅಂತಿಮವಾಗಿ ಸರ್ಕಾರ ಯಾರ ಹೆಸರಿಗೆ ಮುದ್ರೆ ಒತ್ತಲಿದೆ ಎಂಬುದೇ ಇದೀಗ ಮೈಸೂರು ಶೈಕ್ಷಣಿಕ ಮತ್ತು ರಾಜಕೀಯ ವಲಯದ ಕುತೂಹಲಕ್ಕೆ ಕಾರಣವಾಗಿದೆ.

Key words: KSOU, BOM Appointment. MLC Puttanna, Dr. Thimmaiah, Dr. K. Shivakumar, consideration.

SUMMARY: 

KSOU BOM Appointment: Social Justice Factor Comes into Play

Mysuru: The Karnataka government is considering a new member for the vacant Board of Management (BOM) post at Karnataka State Open University (KSOU), following the completion of MLC Adaguru H. Vishwanath’s term.

The names of Congress MLC Puttanna, Dr. Thimmaiah, and senior journalist-turned-appointee Dr. K. Shivakumar are reportedly under consideration.

Puttanna has already served as a KSOU BOM member twice, during the tenures of Prof. Vidyashankar and Prof. Shivalingayya. With his Legislative Council term also nearing completion, sources suggest the government may prefer a new face rather than reappointing him.

The Congress party’s emphasis on social justice and wider representation is also said to be influencing the choice. Against this backdrop, the names of Mysuru-based Dr. Thimmaiah and Dr. K. Shivakumar have gained prominence.

Sources indicate that Dr. K. Shivakumar’s name is currently the frontrunner.

With a new Vice-Chancellor already appointed and a BOM meeting expected soon, the government is keen to fill the vacant position at the earliest—an appointment considered important for KSOU’s academic growth, administration and future development.

The post KSOU ಬಿಒಎಂ ನೇಮಕಕ್ಕೆ ರಾಜಕೀಯ ಲೆಕ್ಕಾಚಾರ : ಸಾಮಾಜಿಕ ನ್ಯಾಯದ ಸಮೀಕರಣದಲ್ಲಿ ತಿಮ್ಮಯ್ಯ–ಶಿವಕುಮಾರ್ ಹೆಸರು! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತಮಿಳುನಾಡಿಗೆ ನೀರು: ಕಬಿನಿ ಡ್ಯಾಂ ಬಳಿ ರೈತರ ಪ್ರತಿಭಟನೆ, ಮುತ್ತಿಗೆಗೆ ಯತ್ನ

ಮೈಸೂರು,ಆಗಸ್ಟ್,22,2026 (www.justkannada.in):  ತಮಿಳುನಾಡಿಗೆ ನಿತ್ಯ ನೀರು ಹರಿಸುವ ಮೂಲಕ ಕಾವೇರಿ ನೀರು...

ಬಗೆದಷ್ಟು ಬಯಲಿಗೆ ‘ಚಿನ್ನತಂಬಿ’ಯ ಕರ್ಮಕಾಂಡ: ಮತ್ತೆರೆಡು FIR ದಾಖಲು

ಮೈಸೂರು,ಆಗಸ್ಟ್,22,2026 (www.justkannada.in): ಚಿನ್ನ ಗಿರವಿ ಇಟ್ಟುಕೊಂಡು ನೂರಾರು ಗ್ರಾಹಕರಿಗೆ ವಂಚಿಸಿರುವ ಸುಂದರ್‌...

IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ ನಾಪತ್ತೆ

ಬೆಂಗಳೂರು, ಆಗಸ್ಟ್, 22,2026 (www.justkannada.in):   ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ...

ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೋರಿ CBI ಪತ್ರ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು,ಆಗಸ್ಟ್,22,2026 (www.justkannada.in):  ಸಚಿವ ಬಿ.ನಾಗೇಂದ್ರ ವಿರುದ್ದ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೋರಿ...